ನನ್ ಮಗಳಿಗೆ ಒಂದು ಹೆಸರು ಕೊಡ್ರೀ... ಪ್ಲೀಸ್...

ನನ್ ಮಗಳಿಗೆ ಒಂದು ಹೆಸರು ಕೊಡ್ರೀ... ಪ್ಲೀಸ್...

Comments

ಬರಹ

ನಾನು ಮೈಸೂರಿನವ....ಇಬ್ಬರು ಮಕ್ಕಳ ಪುಟ್ಟ ಸಂಸಾರ ನಮ್ಮದು... ನಮ್ಮ ಎರಡನೇ ಮಗು...(ಮಗಳು) ಇತ್ತೀಚಿಗಷ್ಟೆ ಹುಟ್ಟಿದ್ದು...ಆವಳ ಜಾತಕಕ್ಕನುಗುಣವಾಗಿ.. "ಗೊ/ಗೋ" ಇಂದ ಶುರುವಾಗುವ ಹೆಸರೇ ಬೇಕು... ನನ್ನ ಅರ್ದಾಂಗಿಯ ಕಟ್ಟು ನಿಟ್ಟಿನ ಅಪ್ಪಣೆ...

ನನಗೋ... ನನ್ನ ಕೈಲಾದ ಎಲ್ಲಾ ಮೂಲ(ಲೆ)ಗಳಿಂದ ಹುಡುಕಿದರೂ.. ಈಕೆಗೆ ಸಮ್ಮತವಾಗುವ ಹೆಸರೇ ಸಿಗ್ತಾ ಇಲ್ಲಾರೀ...

ನೀವೂ ಸ್ವಲ್ಪ ಸಹಾಯ ಮಾಡ್ರೀ... ಪ್ಲೀಸ್...

ನಿಬಂದನೆಗಳು...

೧. ಗೋದಾವರಿ...ಯಂತ ಹಳೆ ಹೆಸರುಗಳು ಬೇಡವಂತೆ....

೨.ಹೆಸರಿಗೆ.. ಒಂದು ಚಂದದ ಅರ್ಥ ಇರಲೇ ಬೇಕು

೩. ನಾನು ಶಿವ, ಅವಳು ಗೌರಿ.. ಮಗ ವಿಘ್ನೇಶ...ಆದ್ದರಿಂದ.., ಶಿವನಿಗೆ ಮಗಳಿರುವ ಯಾವುದಾದರೂ ಉಲ್ಲೇಖವಿದ್ದರೆ... ಅದೇ ಅಂತಿಮ....

 

ಕಾಯುತ್ತಿರುವೆ....

ನಿಮ್ಮವ.. ಚಿ.ರಂ.ಶಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Average: 4 (1 vote)
Rating
Average: 4 (1 vote)