ಸ್ನೇಹ‌

ಸ್ನೇಹ‌

ಕವನ

 ವಿಶ್ವಾಸ,  ನಂಬಿಕೆ  ಭರವಸೆಗಳ  ಒಕ್ಕೂಟ,

ಪ್ರೀತಿ, ಕರುಣೆ, ಹಿತಕಾಂಕ್ಷೆಗಳ  ಕಾರ್ಯಗಾರ,

ಒಗ್ಗೋಡುವ   ಮನಸ್ಸು,  ಮನಸ್ಸುಗಳ  ಸಂಗಮ,

ಅಭಿಪ್ರಾಯ, ಅಭಿರುಚಿ,  ಅಭಿಲಾಶೆಗಳ,  ಏಕನಾದ,    ಈ ಸ್ನೇಹ.

 

ಮನುಶ್ಯ   ಪ್ರಾಣಿ   ಪಕ್ಷಿಗಳ

 ಜೀವನ ಶೈಲಿಯ  ಜೀವಾಳ  ಈ  ಸ್ನೇಹ,

ಸದಾ  ಸಹೃದಯಗಳ   ಬೆಸುಗೆಯ  ಇಂಧನ,

ಸಂಸ್ಕೃತಿ,  ಸಂಸ್ಕಾರ,  ನಾಗರೀಕತೆಯ   ಕಾರ್ಯಗಾರ

ಬದುಕಿನ  ಶೃಂಗಾರ,   ಈ  ಸ್ನೇಹ.

 

ನೆರೆಯರೊಂದಿಗೆ  ಅಭಯ  ಅನುಕಂಪ

ಅನುರಾಗ  , ಆದರ ,  ಆದರ್ಶಗಳ  ಬಿಂಬ,

ನೂವು  ನಲಿವು , ಸಂತೋಷ   ಅಭಿಮಾನಗಳ,

 ನವರಸ  ಸೋಸುವ  ಭಾವ ಸ್ಪಂದನ,

ಪರಸ್ಪರ   ಸನ್ನೀಹದಲ್ಲಿರಿಸುವ  ಸಾಧನ.  ಈ  ಸ್ನೇಹ

 

ಯಾರಿಗೆ  ಯಾರೂ  ಮುಟ್ಟರು  ದ್ವೇಷದಿಂದ ,

ಸ್ನೇಹಿತರಿರುವರು  ಆತ್ಮಬಲದಿಂದ

  ಅರಿವು  ಮೂಡುವುದು  ಭಾವಸ್ಪಂದನದಿಂದ

ಭಾವನಲಿವುದು  ಸ್ನೇಹದ  ಹಿತಕಾಂಕ್ಷೆಯಿಂದ

ಅದುವೇ  ಬದುಕಿನ  ಹರುಷ.       ಈ  ಸ್ನೇಹ.

 

 ಹರೆಯದ  ಹುರುಪು  ಯೌವ್ವನದ  ಉನ್ಮಾದ

 ಬೆಸೆಯುವ  ಬೆಸುಗೆಯ  ಸಂಕಲ್ಪ  ಸ್ನೇಹ,

ಜಾರುವ  ದಿನರಾತ್ರಿಗಳ   ಬಂಧನದ  ಸಂದೇಶ

ಕೇಳರಿಯದ  ಸ್ವಪ್ರೇರಣೆಯ  ಸನ್ನೀಹದ 

ಸವಿ  ಸವಿಯುವ  ಬಯಕೆಯೇ   ಈ  ಸ್ನೇಹ

   

 

ಒಂಟಿತನ  ಬಯಸುವ   ಸ್ನೇಹ ದ್ವೇಷಿಯ

ಬರಡು  ಭಾವಗಳ, ಭಾವ  ಆಕ್ರಂಧನ,

ಜೀವಂತ   ಶವದ  ಶೈಲಿಯ,

ಪಯಣದಲ್ಲಿ  ಮುಡದು  ಬೆಳಕುಜ್ನಾನ,

ಇದು  ಸದಾ  ಅತೃಪ್ತಿ  ಅಶಾಂತಿಯ  ಕಾರ್ಯಗಾರ.

 

ಒರಟು  ಮನಸ್ಸು,  ಒಟಿತನದ  ಕನಸ್ಸು,

ಸ್ನೇಹವಿಲ್ಲದ   ಬದಕು   ನಗುಕಾಣದು,

ಅಮವಾಸೆಗತ್ತಲ  ದೆವ್ವದ  ಚಿಂತನೆಯ

ಅಪರಾಧ,  ಅಪವಾದಗಳ  ಸಂತೆಯಂತೆಯಲ್ಲಿ

ಚೇತರಿಕೆ   ಕಾಣದೆ  ಶೂನ್ಯವಾಗುವುದು,     ಸ್ನೇಹವಿಲ್ಲದ  ಈ  ಬದುಕು.

,