ಆಂತರ್ಯ

ಆಂತರ್ಯ

ಕವನ


ಈ ದಿನದ ನಸುಕಿನಲಿ
ಮತ್ತೊಂದು ಕನಸಿನಲಿ
ನಗು ಮುಖವೊಂದರಾ ಸೌಂದರ್ಯ !

ಈ ಮುಂಜಾವಿನಲಿ
ಸೋಕುವಾ ತಂಗಾಳಿಯಲಿ
ಆ ಕೋಮಲ ಸ್ಪರ್ಶದಾ ಮಾಧುರ್ಯ !

ನಸುಕಿನ ನಶೆಯಲ್ಲಿ
ಹೊಂಗಿರಣದಾಟದಲಿ
ಮರೆಯದಾ ನೆನಹುಗಳ ಬಾಂಧವ್ಯ !

ಸುಂದರ ಇಳೆಯಲ್ಲಿ
ಭಾಮಿನಿಯ ಜೊತೆಯಲ್ಲಿ
ಸ್ವರ್ಗವೇ ಧರೆಗಿಳಿದ ಆಂತರ್ಯ!