ಮನಸೆಂಬ ಮಾಯೆ (ಶ್ರೀನರಸಿಂಹ 28)

ಮನಸೆಂಬ ಮಾಯೆ (ಶ್ರೀನರಸಿಂಹ 28)

ಹರಿವ ನೀರ ತಡೆಯದಿರೆ ಹರಿವುದದು ತನ್ನಿಚ್ಚೆಯಂತೆ

ಹಿಡಿತದಲಿ ಇರಿಸದಿರುವ ಮನಸು ಯೋಚಿಸುವುದಂತೆ

ತನ್ನಿಚ್ಛೆಯಂತೆ ಹರಿವ ನೀರು ಸೃಷ್ಟಿಪುದು ಪ್ರಳಯವನು

ಹಾನಿಯಾಗುವುದಂತೆ ಜೀವನ,ನಿಗ್ರಹಿಸದಿರೆ ಮನಸನು

 

ತಡೆಯಿರದಿಹ ನೀರು ಎಲ್ಲಡೆ ಹರಿವುದದು ಪ್ರಕೃತಿಯೂ

ತಡೆಯನೊಡ್ಡಿ ಅದನುಪಯೋಗಕೆ ಬಳಸೆ ಸಾಧನೆಯೂ

ಮನಸಿನ ಯೋಚನೆಗಳಿಗೆ ಚಂಚಲತೆಯೆ ಕಾರಣವೂ

ಏಕಾಗ್ರತೆಯಲಿ ಮನವನಿರಿಸೆ ಅಭ್ಯಾಸವೆ ಸಾಧನವೂ

 

ಮನಸ ನಿಗ್ರಹಿಸುವುದಕೆ ಇಹವು  ಜಪ,ತಪ,ಪೂಜೆಗಳೆಂಬುವವು

ಎಲ್ಲಕೂ ಮಿಗಿಲಾಗಿಹುದು ಶ್ರೀನರಸಿಂಹನ ನಾಮಸ್ಮರಣೆಯ ಜಪವು
Rating
No votes yet

Comments