ಮದುವೆಯ ಸಂಬ್ರಮ
ಅಂದು ಗುರುವಾರ ನವೆಂಬರ್ ೧೧ ೨೦೧೦. ನಾನು ಕಾಲೆಜು ಮುಗಿಸಿ ಮದ್ಯಾನ್ಹ ೧.೦೦ ಗಂಟೆಗೆ ಬಂದೆ .ಮದುವೆಗೆ ಹೊಗಲು ಎಲ್ಲ ತಯಾರಿ ಮಾಡಿಕೊಂಡೆ. ೨.೩೦ ಮದ್ಯಾನ್ಹದ ವೇಳೆಗೆ ಮನೆಯಿಂದ ನಾನು ನಮ್ಮಕ್ಕ ಮತ್ತು ನಮ್ಮ ತಂದೆ ಅಜ್ಜಿಮನೆಗೆ ಹೊರಟೆವು.ಅಲ್ಲಿ ನಾವು ತಲುಪಿದ ಕೂಡಲೆ ನಮಗೆ ಬೊಂಡಾ ಮತ್ತು ಪಾಯಸ ಕೊಟ್ಟು ಸತ್ಕರಿಸಿದರು.ನಾವು ಅದನ್ನು ತಿಂದು ಬಸ್ಸಿನಲ್ಲಿ ಕುಳಿತೆವು. ಸ್ವಲ್ಪ ಸಮಯದಲ್ಲಿ ಬಸ್ಸು ಹೊರಡಲು ಶುರು ಆಯಿತು. ಬಸ್ಸು ಹೊರಟ ನಂತರ ಎಲ್ಲರು ಹೋ ಎಂದು ಕೂಗಿದರು. ಬಸ್ಸು ಹೊರಟು ಅರ್ದ್ ಗಂಟೆ ಆಗಿತ್ತು ಆಗಲೆ ಕೆಲವರ ಮೊಬೈಲನಿಂದ ಹಾಡು ಕೇಳಬರತೊಡಗಿತು. ಸುಮಾರು ದೂರ ಸಾಗಿದ್ದೆವು, ಹೀಗೆ ಮುಂದೆ ಸಾಗುತ್ತ ಒಂದು ಬಸ್ಸ ಸ್ಟಾಂಡಲ್ಲಿ ನಿಂತಿತು. ಬಸ್ಸ್ ಸ್ಟಾಂಡಲ್ಲೆ ಇದ್ದ ಕ್ಯಾಂಟಿನಗೆ ಹೋಗಿ ಕಾಫಿ ಮತ್ತು ಮಸಾಲ್ ದೋಸೆ ತಿಂದು ಬಂದು ಬಸ್ಸ್ ಹತ್ತಿದೆವು. ಬಸ್ಸು ಹೊರಡಲು ಶುರುವಾಯ್ತು, ಎಲ್ಲರ ಗಣತಿ ಮಾಡಿಕೊಂಡು ಹೋರಟೆವು. ಬಸ್ಸು ಸಾಗುತ್ತ ಕೇರಳ ದಾಟಿ ಮಂಜೆಶ್ವರಕ್ಕೆ ಸುಮಾರು ರಾತ್ರಿ ೧೧.೩೦ಕ್ಕೆ ತಲುಪಿತು. ಅಲ್ಲಿ ತಲುಪಿದ ನಂತರ ಊಟ ಮಾಡಿ ನಮಗಾಗಿ ವ್ಯವಸ್ಥೆ ಮಾಡಿದ ರೂಮಿನಲ್ಲಿ ಹೋಗಿ ಮಲಗಿದೆವು.ನಮ್ಮ ರೂಮ್ ನ್ಂಬರ್ ೩೧ ಆಗಿತ್ತು. ನನಗೆ ನಿದ್ರೆಯೆ ಬೀಳಲಿಲ್ಲ. ನಾನು ಸುಮ್ಮನೆ ಮಲಗಿಕೊಂಡಿದ್ದೆ ಆಗಲೆ ಜೊರಾದ ಗಂಟೆಯ ಸದ್ದು ಕೇಳಿಸಿತು. ಹೀಗೆ ಮೂರು ಬಾರಿ ಕೇಳಿಸಿತು. ನಂತರ ಸುಮಾರು ಬೆಳ್ಳಿಗ್ಗೆ ೫.೦೦ ಗಂಟೆಗೆ ದೇವರ ಶ್ಲೋಕ ನಮ್ಮ ರೂಮಿನ ಎದರುಗಡೆ ಇದ್ದ ದೇವಸ್ತಾನದಿಂದ ಕೇಳಬರತೊಡಗಿತು.ಸುಮಾರು ೫.೩೦ಕ್ಕೆ ನಾವು(ತಂದೆಯನ್ನು ಹೊರತು ಪಡಿಸಿ) ಎದ್ದೆವು. ನಂತರ ನಿತ್ಯ ಕರ್ಮ ಮುಗಿಸಿದೆವು.ನಂತರ ತಂದೆಯವರು ಎದ್ದುರು. ಸುಮಾರು ೭.೦೦ ಗಂಟೆಗೆ ತಿಂಡಿ ತಿನ್ನಲು ಮದುವೆ ಹಾಲ್ ಗೆ ಹೊರೆಟೆವು.ತಿಂಡಿ ತಿಂದು ಸ್ವಲ್ಪ ಹೊತ್ತು ಹೊರಗಡೆ ತಿರುಗಾಡಿ ಬಂದೆವು.ಆಗ ಸುಮಾರು ೧೧.೦೦ ಆಗಿರಬೆಕು ಇನ್ನೊಂದು ಸಲ ತಿಂಡಿ ಕೊಟ್ಟರು. ಹೀಗೆ ನಾವು ಅಲ್ಲಿ ನಡೆಯುತ್ತಿರುವ ಮದುವೆ ಕಾರ್ಯ ನೊಡುತ್ತಾ ಮದ್ಯಹ್ನ್ ೧.೦೦ ಗಂಟೆ ಆದದ್ದೆ ಗೊತ್ತಾಗಲಿಲ್ಲ. ಊಟಕ್ಕೆ ಹೋಗಿ ಕುಳಿತೆವು. ಊಟ ಮಾಡಿ ರುಮಿನಲ್ಲಿ ಸ್ವಲ್ಪ ಹೊತ್ತು ರೆಸ್ಟ್ ತೆಗೆದುಕೊಂಡೆವು. ನಂತರ ಹೊರಡಲು ಕಾದೆವು.ಸುಮಾರು ೫.೦೦ ಗಂಟೆಗೆ ಬಸ್ಸು ಹೊರಟಿತು. ಹೀಗೆ ದೂರ ಸಾಗಿದೆವು. ಸಾಗುತ್ತಾ ಬೈಂದೂರಿನಲ್ಲಿ ಬಸ್ಸ ಪಂಕ್ಚರ್ ಆಯಿತು. ಆಗ ಸುಮಾರು ರಾತ್ರಿ ೧೦.೦೦ ಗಂಟೆ ಆಗಿತ್ತು. ರಿಪೇರಿ ಮಾಡಿ ಹೊರಟಾಗ ೧೦.೩೦ ಆಗಿತ್ತು. ನಂತರ ೧೨.೪೫ಕ್ಕೆ ಮನೆಗೆ ಬಂದು ತಲುಪಿದೆವು.