ಹೇ ರಾಮ ರಾಮ ರಾಮ
ಚಿತ್ರ
ಹೇ ರಾಮ ರಾಮ ರಾಮ
ಹೇ ರಾಮ ರಾಮ ರಾಮ |
ಈ ನಾಮ ಶಾಂತಿ ಧಾಮ ||ಪ||
ಅ ಶರಧಿಯಂತೆ ಗಂಭೀರ, ತುಹಿನ
ಗಿರಿಯಂತೆ ಸ್ಥೈರ್ಯ ಭೀಮ ||
ಕರುಣೆ ಸಮತೆ ಬಲು ನಿಷ್ಟುರತೆಯ ಗುಣ
ಪೂರ್ಣ ಶರಣ ಪ್ರೇಮ ||೧||
ಹೇ ರಾಮ ರಾಮ ರಾಮ |
ಈ ನಾಮ ಶಾಂತಿ ಧಾಮ ||ಪ||
ತನಗಾಯ್ತು ಬವಣೆ ಎಂದಳಲಲಿಲ್ಲ
ಧರ್ಮವನು ಮರೆಯಲಿಲ್ಲ ||
ಬೇಸರಾಯ್ತು ತನಗೆಂದುಕೊಂಡು
ಕರ್ತವ್ಯ ತೊರೆಯಲಿಲ್ಲ ||೨||
ಹೇ ರಾಮ ರಾಮ ರಾಮ |
ಈ ನಾಮ ಶಾಂತಿ ಧಾಮ ||ಪ||
ಭೋಗಕಿಂತ ಬಲು ತ್ಯಾಗ ಮೆರೆಸಿ
ಮನುಕುಲಕೆ ಹಿರಿಯನಾದ ||
ಯುಗ ಯುಗಗಳಲ್ಲಿ ಅಚ್ಚಳಿಯದಂತ
ಶ್ರೀರಾಮ ನಾಮವಾದ ||೩||
ಹೇ ರಾಮ ರಾಮ ರಾಮ |
ಈ ನಾಮ ಶಾಂತಿ ಧಾಮ ||ಪ||
ಶ್ರೀರಾಮ ಬಳಗ ಬೇಕೀಗ ಭುವಿಗೆ
ಸಜ್ಜನರ ಕಾಯಲಿಕ್ಕೆ ||
ಹತ್ತಲ್ಲವೀಗ ನೂರಾರು ಮುಖದ
ರಾವಣರ ಸೋಲಿಸಲ್ಕೆ ||೪||
ಹೇ ರಾಮ ರಾಮ ರಾಮ |
ಈ ನಾಮ ಶಾಂತಿ ಧಾಮ ||ಪ||
- ಸದಾನಂದ
Rating
Comments
ಉ: ಹೇ ರಾಮ ರಾಮ ರಾಮ
In reply to ಉ: ಹೇ ರಾಮ ರಾಮ ರಾಮ by sathishnasa
ಉ: ಹೇ ರಾಮ ರಾಮ ರಾಮ
ಉ: ಹೇ ರಾಮ ರಾಮ ರಾಮ
In reply to ಉ: ಹೇ ರಾಮ ರಾಮ ರಾಮ by kavinagaraj
ಉ: ಹೇ ರಾಮ ರಾಮ ರಾಮ
In reply to ಉ: ಹೇ ರಾಮ ರಾಮ ರಾಮ by partha1059
ಉ: ಹೇ ರಾಮ ರಾಮ ರಾಮ
In reply to ಉ: ಹೇ ರಾಮ ರಾಮ ರಾಮ by kavinagaraj
ಉ: ಹೇ ರಾಮ ರಾಮ ರಾಮ
ಉ: ಹೇ ರಾಮ ರಾಮ ರಾಮ
In reply to ಉ: ಹೇ ರಾಮ ರಾಮ ರಾಮ by Jayanth Ramachar
ಉ: ಹೇ ರಾಮ ರಾಮ ರಾಮ
In reply to ಉ: ಹೇ ರಾಮ ರಾಮ ರಾಮ by sada samartha
ಉ: ಹೇ ರಾಮ ರಾಮ ರಾಮ
In reply to ಉ: ಹೇ ರಾಮ ರಾಮ ರಾಮ by Jayanth Ramachar
ಉ: ಹೇ ರಾಮ ರಾಮ ರಾಮ