ಏನೇ ಎಲ್ಲಿ ಹೋದ್ಯೇ? ಮಗು ಅಳ್ತಾ ಇದೆ!

ಏನೇ ಎಲ್ಲಿ ಹೋದ್ಯೇ? ಮಗು ಅಳ್ತಾ ಇದೆ!

ಈಗೀಗ ನನ್ನವಳಿಗ೦ತೂ ಇವಳ ಹಿ೦ದೆ ಇರೋದೇ ಕೆಲಸ ಆಗೋಗಿದೆ! ಅಬ್ಬಾ ದೇವ್ರೇ ಏನು ಪು೦ಡು ಅ೦ದ್ರೆ. ಈಗ ಇಲ್ಲಿ .. ಸ್ವಲ್ಪ ಹೊತ್ತಿಗೆ ಅಲ್ಲಿ! ಸಾಕಾಗಿ ಹೋಗಿದೆ.. ಇವಳನ್ನು ಕಾಯ್ದು..ಕಾಯ್ದು.. ಮ೦ಚದ೦ಚಿನಲ್ಲಿ ಕುಳಿತು, ಮೇಲಿ೦ದ ಟಿ.ವಿ ರಿಮೋಟ್ ಅನ್ನು ಕೆಳಗೆ ಬಿಸಾಕುತ್ತಾಳೆ.. ಯಾಚನೆಯ ಕಣ್ಣಲ್ಲಿ, ನಗು ನಗುತ್ತಾ ನನ್ನತ್ತ ನೋಡ್ತಾಳೆ.. ಅಪ್ಪ ಹೆಕ್ಕಿಕೊಡೋ! ಇಲ್ಲಾರೀ ನನ್ಕೈಲಾಗೋದಿಲ್ಲಾರೀ .. ಇವಳನ್ನು ಸ೦ಭಾಳಿಸೋಕೆ! ರೀ ಶೇಷು ಇವಳ ಮು೦ದೆ ಪಾಪಾರೀ.. ಅಲ್ಲ ಕಣೇ ಅವನು ಸಣ್ಣವನಿದ್ದಾಗ ಹೀಗೇ ಹೇಳ್ತಿದ್ದೆ! ಈಗ ಇವಳು ಜೋರು..ಅವನು ಪಾಪಾನಾ! ಆದ್ರೂ ಇವಳಷ್ಟು ಅವನು ತು೦ಟತನ ಮಾಡ್ತಿರಲಿಲ್ಲಾ.. ಅಮ್ಮ ಕ೦ಪ್ಲೇ೦ಟು ಮಾಡ್ತಿದ್ರೆ.. ಅಮ್ಮನ ಸೀರೆನ ಕೈನಲ್ಲಿ ಹಿಡಿದು ಜಗ್ಗೋದು.. ಯಾಕಮ್ಮಾ ಸುಳ್ಳು ಹೇಳ್ತೀಯಾ? “ಪಾಪ“ ಅನ್ನಿಸ್ಬೇಕು..! ಯಾವಾಗಲೂ ಇವಳ ಹಿ೦ದೇನೇ ಇರ್ಬೇಕ್ರೀ! ಮನೆಯ ಮು೦ದಿನ ಬಾಗಿಲಿನಿ೦ದ.. ಹಿ೦ದಿನ ಬಾಗಿಲಿಗೆ ಆಕಡೆ ಬಿಟ್ರೆ ಮ೦ಚದಡಿಗೆ.. ಈ ಕಡೆ ಬಿಟ್ರೆ ಟಿವಿ. ಕೆಳಗೆ! ಅಯ್ಯೋ ದೇವ್ರೇ! ಸಾಕು ಸಾಕಾಗುತ್ತೇರೀ.. ಎಷ್ಟು ಸಲ ಅ೦ಥ ಇವಳ ಹಿ೦ದೆ ಓಡೋದ್ರೀ? ಅವಳನ್ನು ಅವಳ ಪಾಡಿಗೆ ಬಿಟ್ಬಿಡೇ. ಬಿದ್ಬಿಟ್ರೆ! ಬೀಳಲಿ ಬಿಡೇ.. ಬಿದ್ದೇ ಅನುಭವವಾಗ್ಬೇಕು.. ನಾಳೆ ಮತ್ತಷ್ಟು ಹುಶಾರಾಗ್ತಾಳೆ.. ಎಲ್ಲಾ ಅಪ್ಪ೦ದಿರೂ ಇಷ್ಟೇನೇ.. ಮಕ್ಕಳು ಆಟ ಆಡ್ತಿದ್ರೆ ತಾವೂ ಆಡೋದು ಇಲ್ಲಾ ಅವರನ್ನು ಅಳಿಸೋದು! ಅಳಲು ಶುರುಮಾಡಿದ ಕೂಡಲೇ ಅವರದ್ದು ಶುರು ಆಗುತ್ತೆ! ಏನೇ ಎಲ್ಲಿ ಹೊದ್ಯೇ? ಮಗು ಅಳ್ತಾ ಇದೆ! ನೋಡು ಬಾರೇ ಇಲ್ಲಿ!
Rating
No votes yet

Comments