ಕ್ರಿಮಿನಲ್‌ಗಳನ್ನು ಗೌರವಿಸಬೇಕು!

ಕ್ರಿಮಿನಲ್‌ಗಳನ್ನು ಗೌರವಿಸಬೇಕು!

ಬರಹ

 ನಮ್ಮ ಪಾರ್ಲಿಮೆಂಟ್ ಸದಸ್ಯರ ಪೈಕಿ 162 ಮಂದಿ ಕ್ರಿಮಿನಲ್‌ಗಳು; ಅದರಲ್ಲಿ 14 ಮಂದಿ ಕೊಲೆ ಆರೊಪಿಗಳು ಹೀಗೆಂಬ ದಾರುಣವನ್ನು ಕೇಜ್ರಿವಾಲ ಎಂಬ "ಅಣ್ಣ" ಬಯಲು ಮಾಡಿ, ’ ಕ್ರಿನಲ್‌ಗಳನ್ನು ಗೌರವಿಸಬೇಕೇ?’ ಎಂದು ವೀರಾವೇಶ ತೋರಿರುವುದಾಗಿ ಮಾರ್ಚಿ 31ರ ವಿಜಯ ಕರ್ನಾಟಕದಲ್ಲಿ ವರದಿಯಿದೆ. ಹೌದು! ಸಂಖ್ಯೆ ಮಾತ್ರವೇ ಮುಖ್ಯವಾಗುವ ನಮ್ಮ ತಲೆಹಿಡುಕ ಸತ್ತಾ ವ್ಯವಸ್ಥೆಯಲ್ಲಿ, ಉಳಿದ 362 ಮಂದಿ ಸಭ್ಯ-ಸಾಚಾಗಳೂ, ಸವ್ಯಸಾಚಿಗಳೂ ಎಂದು ಸಂತೋಷಪಟ್ಟುಕೊಳ್ಳುವುದು ಅನಿವಾರ್ಯವಾಗಿದೆ!
 ಕೇಜ್ರಿವಾಲಾದಿಗಳಲ್ಲಿ ನಮಗೆ ಕಾಣಿಸುವುದು ಕೋಟಿಕೋಟಿ ಗುಳಕಾಯಿಸುವ ಕ್ರಿಮಿನಲ್‌ಗಳ ವಿರುದ್ಧ ಹೊಟ್ಟೆ ಉರಿಯೇ ಹೊರತು ಪ್ರಜಾಸತ್ತೆಯ ಬಗ್ಗೆ ಮರುಕವಾಗಲೀ, ಅದು ಹದಗೆಟ್ಟಿರುವುದರಿಂದ ಅಗುತ್ತಿರುವ ಸಾರ್ವತ್ರಿಕ ಅನ್ಯಾಯದ ಬಗ್ಗೆ ಆತಂಕವಾಗಲೀ ಅಲ್ಲ!
 ನಮ್ಮ ಚುನಾವಣಾ ವ್ಯವಸ್ಥೆ ಎನ್ನುವುದು ಪ್ರಜಾಪ್ರತಿನಿಧಿಗಳ ಆಯ್ಕೆ ಎನ್ನುದಕ್ಕಿಂತಾ ಹೆಚ್ಚಾಗಿ, ಗೆದ್ದ ಕುದುರೆ, ಎರಡನೆಯದಕ್ಕಿಂತಾ ಎಷ್ಟು ಹೆಜ್ಜೆ ಮುಂದಿತ್ತು ಎನ್ನುವುದನ್ನು ಪರಿಗಣಿಸುವ ಕುದುರೆ ಜೂಜಾಗಿದೆ! ವೋಟು ಹಾಕುವ ತುಂಬಾ ಮಂದಿ ಯಾರಲ್ಲಿ ಇನ್ನಿಲ್ಲದಂತೆ ವಿಶ್ವಾಸವಿಟ್ಟಿದ್ದಾರೆ ಎನ್ನುವುದನ್ನು ಇದು ಲೆಕ್ಕಕ್ಕೇ ತೆಗೆದುಕೊಳ್ಳುವುದಿಲ್ಲ. ಪರಿಣಾಮ, 17-20 ಪ್ರತಿಶತ ವೋಟು ಪಡೆದವರೂ ಎಂಪಿ, ಎಂಎಲ್‌ಎಗಳಾಗಿ ವಿಜೃಂಬಿಸುತ್ತಾರೆ. ಅಷ್ಟು ಕುರಿಮಂದೆಯನ್ನು ಕಾಯ್ದಿಟ್ಟುಕೊಳ್ಳುವುದಕ್ಕೇ ನೇತಾರ ಮಣಿಗಳ ಅಭಿವೃದ್ಧಿ ಕಾರ‍್ಯಕ್ರಮಗಳೆಲ್ಲಾ ಸೀಮಿತಗೊಳ್ಳುತ್ತವೆ.
 ಯಾರ‍್ಯಾರು, ಅಷ್ಟೆಷ್ಟು ತಿಂದರೆಂದು ಹೊಟ್ಟೆ ಉರಿದುಕೊಳ್ಳುವ ಚಳುವಳಿ-ಆಂದೋಲನಗಳು ನಮಗೆ ಬೇಕಾಗಿಲ್ಲ; ವೋಟ್ ಹಾಕಿ ಸೋತುಹೋಗುವ 80-83 ಪ್ರತಿಶತ ಸಾಚಾ ವೋಟುದಾರರ ಬೊಂಬಡಕ್ಕೆ ಬಾಯಾಗುವ ಪ್ರಾಮಾಣಿಕ ನೇತ್ರತ್ವ ಇಂದು ಬೇಕಾಗಿದೆ.    
 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet