ಮೇಲೊಬ್ಬ ಆ ಬ್ರಹ್ಮಾ ಭುವಿಯೊಳಗೆ ಈ ಅಮ್ಮಾ

ಮೇಲೊಬ್ಬ ಆ ಬ್ರಹ್ಮಾ ಭುವಿಯೊಳಗೆ ಈ ಅಮ್ಮಾ

ಕವನ

 ಬ್ರಹ್ಮನ  ಸೃಷ್ಟಿಲಿ ಜಗವೇ ಕಲಿತ ಮೊದಲ ಮಾತಿದು ಅಮ್ಮಾ

ಕಣ್ಣೆದುರಿನ ದೇವತೆ ಅಮ್ಮಾ ಕರುಣಾ ಸಾಗರ  ಈ ಅಮ್ಮಾ

ತೊದಲು ನುಡಿಗಳ ತುಟಿಗಳಲಿ ಹೊರಹೊಮ್ಮುವ ರಾಗವೇ ಅಮ್ಮಾ

ಆ ರಾಗಕೆ ಸ್ವರವೇ ಅಮ್ಮಾ ಸ್ವರಗಳ ಸಂಗಮ ಅಮ್ಮಾ

 

ಮಗುವಿನ ಮನದಲಿ ಮನೆಯನು

ಮಾಡುತ ಮಮತೆಯ ಮೆರೆಯುವಳು

ನಿದಿರೆಯ ನಡುವೆಯೂ ಕಥೆಯನು

ಹೇಳುತ ಲಾಲಿಯ ಹಾಡುವಳು

 

ನಮಗಾಗಿ ಜೀವನವನ್ನೇ ತನಗಾಗಿ ಬರಿ ಸೊನ್ನೆ

ಎಲ್ಲಾ ಕಷ್ಟವ ನುಂಗಿ ಸಿಹಿಯನು ಬಾಳಲಿ ತುಂಬಿ

ಅಳುತ ಇದ್ದರು ನಗುವಳು ಇವಳು ತ್ಯಾಗಮಯಿ

ಎಡವಿದರೆ ಕೈ ಹಿಡಿವಳು ಅಮ್ಮಾ

ಕೊಡವಿದರೆ ಶಿಕ್ಷಿಸುವಳು ಅಮ್ಮಾ

ಜೀವನದ ಮೊದಲನೇ ಗುರು ಅಮ್ಮಾ

ಅಮ್ಮಾ  ಅಮ್ಮಾ ಅಮ್ಮಾ ಅಮ್ಮಾ

 

ನವಮಾಸದ ನರುಳಾಟವನೆಲ್ಲಾ 

ನಗುತಲೆ ಸಹಿಸುವಳು

ನರಕಯಾತನೆ ಅನುಭವಿಸಿ

ಹೊಸ ಜೀವವ ನೀಡುವಳು



ಮೇಲೊಬ್ಬ ಆ ಬ್ರಹ್ಮಾ ಭುವಿಯೊಳಗೆ ಈ ಅಮ್ಮಾ

ಗಂಡನ ಪ್ರೀತಿಯ ಹೆಣ್ಣಾಗಿ ಮಕ್ಕಳ ಬಾಳಿನ ಕಣ್ಣಾಗಿ

ಜೀವನಕೆಲ್ಲಾ ಜೇನಾಗಿ ಬರಿ ಸಿಹಿಯನ್ನೇ ಉಣಿಸುವಳು

ನೋವಾದರೂ ಮೊದಲನೇ ಪದ ಅಮ್ಮಾ

ನಲಿವಾದರು ಮೊದಲನೇ ಪದ ಅಮ್ಮಾ

ಜೀವನದ ಮೊದಲನೇ ಗುರು ಅಮ್ಮಾ

ಅಮ್ಮಾ  ಅಮ್ಮಾ ಅಮ್ಮಾ ಅಮ್ಮಾ



ಅಮ್ಮನ ಪ್ರೀತಿಯ ಅರಿತು ಎಲ್ಲಾ ಆಸೆಯ ಪೂರೈಸೋ ನೀ

ಆ ಬಳ್ಳಿಗೆ ಆಸರೆಯೇ ನೀ ಆ ಬಳ್ಳಿಯ ಹೂವಾಗೋ ನೀ

ನಾನಾ ರೂಪದ ಕಷ್ಟದ ಕಡಲನು ಈಜಿ ಬಂದವಳು ಅವಳು

ಆ ತಾಯಿಯ ತೊರೆಯದಿರೋ ನೀ ನಿನ್ನ ಉಸಿರನೇ ಮರೆಯದಿರೋ ನೀ

                                                                                            -ಪ್ರವೀಣ್.ಎಸ್.ಕುಲಕರ್ಣಿ. (ಚುಕ್ಕಿ)

 

Comments