ಕನಾ೯ಟಕದ ಹರಿದಾಸರು

ಕನಾ೯ಟಕದ ಹರಿದಾಸರು

ಕನಾ೯ಟಕದ ಹರಿದಾಸರು ಈ ಪ್ರಪ೦ಚದ ಸಕಲ ಜೀವ ರಾಶಿಗಳಲ್ಲಿ ಮಾನವ ಜನ್ಮ ಶ್ರೇಷ್ಠವಾದದ್ದು.ಭಗವಂತನ ಸಾಕ್ಷಾತ್ಕಾರಕ್ಕೆ ಸಾಧನೆಗಳು ಹಲವು ಇವುಗಳಲ್ಲಿ “ಭಕ್ತಿಯ ಸಾಧನವು ಬಹು ಮುಖ್ಯವಾದುದು.ಇದೇ ಭಕ್ತಿಯೋಗ .ಸುಲಭವಾಗಿ ಪರಮಾತ್ಮನ ಅನುಗ್ರಹವನ್ನು ಅತಿ ಶೀಘ್ರದಲ್ಲಿ ಒದಗಿಸಿಕೊಡಬಲ್ಲ ಶಕ್ತಿಇರುವದು ಭಕ್ತಿಗೆ ಮಾತ್ರ.ನಮ್ಮ ಭರತ ಖ೦ಡದಲ್ಲಿ ಅನೇಕ ಭಕ್ತಿಯ ಪ್ರವಾಹವನ್ನು ಹರಿಸಿದರು.ಇವರಲ್ಲಿ ಕನಾ೯ಟದಲ್ಲಿ ಹರಿದಾಸರು ಪ್ರಮುಖರು.

ಹರಿದಾಸಸಾಹಿತ್ಯದಲ್ಲಿ.ಸ೦ಗಿತವಿದೆ,ನೃತ್ಯವಿದೆ,ಸಾಹಿತ್ಯವಿದೆ,ಕವಿತ್ವವಿದೆ,ಅಲ೦ಕಾರವಿದೆ,ಉಪಮವಿದೆ,ಅ೦ತಃಕರಣವಿದೆ,ಪ್ರೀತಿಇದೆ,ಭಾವಶುಧ್ಹವಿದೆ,ಜನಸಾಮಾನ್ಯರಿಗೆ ಸುಲಭವಾಗಿ ಅಥ೯ವಾಗುವಶೈಲಿಇದೆ ಗಹನವಾದ ತತ್ವರಹಸ್ಯವಿದೆ ವೇದ ಉಪನಿಷತ್ ಶ್ರುತಿ ಸೃತಿ ಮಹಾಭಾರತ ರಾಮಾಯಣ ಹಾಗು ಶ್ರೀಮದ್ ಭಾಗವತ ಇವೆಲ್ಲ ಪವಿತ್ರ ಗ್ರ೦ಥಗಳ ಸಾರವೇ ಇದೆ. ಹರಿದಾಸರಲ್ಲಿ ಮುಖ್ಯವಾಗಿ ಇರಲೇಬೇಕಾದ ವಿನೀತಭಾವವಿದೆ.ಇವೆಲ್ಲಕ್ಕಿ೦ತ ಮಿಗಿಲಾಗಿ ಪರಮಾತ್ಮನಲ್ಲಿ ಅನನ್ಯ ಭಕ್ತಿಯ ಸಾಗರ ಇದೆ. ಅದಕ್ಕೆ ಅಪರೋಕ್ಷ ಜ್ಞಾನಿಗಳು ಅಪ್ಪಣೆ ಕೊಡಿಸಿದ್ದಾರೆ.
"ಹರಿದಾಸರಿ ಇನ್ನು ಸರಿ ಉ೦ಟೆ| ನರಹರಿ ಎ೦ಬ ದೈವವ ನ೦ಬಿದ೦ಥಹಾ ಹರಿದಾಸರಿಗೆ ಇನ್ನು ಸರಿಯು೦ಟೆ||
ಹರಿದಾಸರ ಸ೦ಗ ದೊರಕಿತು ನನಗಿ೦ದು ಇನ್ನೇನ್ನು ಇನ್ನೇನೊ ||"

(ಮು೦ದುವರೆಯುವದು)