ತೋಚಿದಂತೆ ಗೀಚಿದ್ದು

ತೋಚಿದಂತೆ ಗೀಚಿದ್ದು

ಕವನ

ಆಗೊಮ್ಮೆ- ಈಗೊಮ್ಮೆ
ಅಲ್ಲಿ-ಇಲ್ಲಿ
ನಿನ್ನನು
ಭ್ರಮಿಸುತ್ತೇನೆ
ಮಾಸದ
ನೆನಪುಗಳಲಿ
ಮತ್ತೆ ಮತ್ತೆ
ಪರಿಭ್ರಮಿಸುತ್ತೇನೆ:
ಕಳೆದ
ದಿನಗಳ,
ಮಧುರ
ಕ್ಷಣಗಳ
ನೆನೆದು
ಸಂಭ್ರಮಿಸುತ್ತೇನೆ:
ಹಠಾತ್ತನೆ
ಎಂದಿನಂತೆ
ನೀ
ಮಾಯವಾದಾಗ
ನಾ
ದಿಗ್ಭ್ರಮಿಸುತ್ತೇನೆ..........

Comments