ಕುಮದ್ವತಿ ನದಿ
ಕವನ
ಎಷ್ಟೊಂದು ಕಾಲ ನಿನ್ನೊಡಲಲ್ಲಿ ,
ನಾನು ಆಡಿರುವೆನು, ನಲಿದಿರುವೆನು.
ಮಿಂದಿರುವೆನು , ಹೊರಳಾಡಿರುವೆನು,
ನಿನ್ನ ತಟದಲ್ಲಿ ನಡೆದಾಡಿರುವೆನು .
ನಿನ್ನ ದಡದ ಆ ಹುಲ್ಲುಗಾವಲ ಬಯಲಲ್ಲಿ,
ಮುೞುಗಂಟಿಗಳಲ್ಲಿ , ದನಕರುಗಳ ಸಹವಾಸದಲ್ಲಿ,
ಜಲಪಾನ, ಜಲಸ್ನಾನ, ಮರಳಹಾಸಿನ ಬಿಸಿಲಸ್ನಾನ
ಸವಿದ ಸವಿನೆನಪು ಸವಿದರೆಷ್ಟು ಸವಿ ಎಂದು ನನಗೆ ಗೊತ್ತು.
ನೀ ಹರಿಯುವ ಆ ಪಥ , ಹಸಿರು ಹಾಸಿನ ರಥ,
ಮಲೆನಾಡ ಮದವಣಗತ್ತಿ ಹೆಜ್ಜೆಯಪಥ
ಕೋಗಿಲೆ ನೈದಲೇ ನಲಿದುಹಾಡುವ ರಸರಥ,
ಕುಮದ್ವತಿ ನೀನೇ ನನ್ನ ಜೀವನದಿಯ ಪಥ.
Comments
ಉ: ಕುಮದ್ವತಿ ನದಿ