ಚಿ(o)ತೆ
ಕವನ
ಟೀಚರ್ ಗೆ ಸ್ಕೂಲಿನ ಚಿಂತೆ
ಮಕ್ಕಳಿಗೋ ಸ್ಕೂಲಬ್ಯಾಗಿನ ಚಿಂತೆ
ಸರ್ಕಾರಕ್ಕೆ ಸಂಬಳದ ಚಿಂತೆ
ಅಧಿಕಾರಿಗಳಿಗೋ ಗಿಂಬಳದ ಚಿಂತೆ
ಮಂತ್ರಿಗಳಿಗೆ ಕುರ್ಚಿಯ ಚಿಂತೆ
ಕಂತ್ರಿಗಳಿಗೋ ಕಂತಿನ ಚಿಂತೆ
ರಾಜಕಾರಣಿಗೆ ಮಾತಿನ ಚಿಂತೆ
ದೇಶ ಕಾಯುವವನಿಗೋ ಮಾತೆಯ ಚಿಂತೆ
ಹುಡುಗಿಯರಿಗೆ ಫೇಸ್ ಲುಕ್ ನ ಚಿಂತೆ
ಅವ್ರ ಮನೆಯವರಿಗೋ ಅವಳ ಫೇಸ್ ಬುಕ್ ನ ಚಿಂತೆ
ಕುಡುಕನಿಗೆ ಸಂಜೆಯಾದರೆ ಸಾಕು ಬಾಟಲ್ ಚಿಂತೆ
ಕುದಿಸುವವಳಿಗೋ ಪಾಪ ನಂತರದ ಬ್ಯಾಟಲ್ ಚಿಂತೆ
ಚಿಂತೆಯೇನ್ನುವುದು ಉರಿಯುವ ಚಿತೆಯಂತೆ
ಅದರೊಳು ಬೀಳದವನೇ ಜಾಣನಂತೆ...
-ಪ್ರವೀಣ್.ಎಸ್.ಕುಲಕರ್ಣಿ. (ಚುಕ್ಕಿ)