ಶ್ರೀಶ್ರೀಧರಾರಾಧನೆ
ಚಿತ್ರ
ನಿನ್ನ ಪದಕರ್ಪಿಸುವೆ ನೀತುಳಸಿ ಮಾಲೆಯನು
ತಂದೆ ಕಾಯೋ ಕರ್ಮ ದೋಷಗಳ ಕಳೆಯೋ ||ಪ||
ಶುಭವಾರ ಶುಭಕರಣ ನಾನೋಡಲಿಲ್ಲ ದೊರೆ
ಅಭಯದಾಯಕ ನಿನ್ನ ಶರಣು ಹೋಗುವರೆ |
ಅಭಿಮಾನ ಧನನಾದ ಗುರುವೇ ಶ್ರೀಧರ ನಿನ್ನ
ಶುಭದ ಪಾದಾರವಿಂದಗಳೆನಗೆ ತೋರೋ ||1||
ಲಾಭ ನಷ್ಟದ ಲೆಕ್ಕ ಮುಗಿದಿಲ್ಲ ಬದುಕಿನಲಿ
ಲೋಭ ಮತ್ಸರವಿಲ್ಲದಿರಲಿಲ್ಲವಿಲ್ಲಿ |
ಈ ಭಯಂಕರವಾದ ನರಕದಿಂದುದ್ದರಿಸಿ
ಶೋಭಿಸುವ ವರದ ಕರ ತೋರು ಕರುಣದಲಿ ||2||
ದರುಶನವೆ ಸಂಪ್ರೀತಿ ಸಿಂಚನದ ಅನುಭೂತಿ
ಹರುಷ ಸಾಮ್ರಾಜ್ಯವದು ಅದಕೆ ನೀನಧಿಪತಿ |
ವರದ ಪುರದಲಿ ನೆಲಸಿ ಭಜಕರಿಂಗಿತ ಸಲಿಸಿ
ಕರುಣಿಸುವ ಶ್ರೀಧರನೇ ಕಾದಿರುವೆ ಬಯಸಿ ||೩||
- ಸದಾನಂದ
Rating