ನಿಟ್ಟುಸಿರು!

ನಿಟ್ಟುಸಿರು!

ಕವನ

 

ಭಾವೊತ್ಖರ್ಷದಿ ಲೇಖನಿಯ ಹಿಡಿದು

ಕಣ್ಣಹನಿಯ ಶಾಯಿ ತುಂಬಿ

ಬರೆಯುತಿರುವೆ ಎನ್ನೆದೆಯ ಹಾಡ

 

ಎದೆಯಲಿ ಭಾರವ ಹೊತ್ತು

ಬರೆವ ಪದಕೆ ಭಾವನೆಯ ಸ್ಪರ್ಶವಿತ್ತು  ,

ಬರೆಯ  ಹೊರೆಟಿರುವೆ ವರ್ಣಿಸುತ್ತಾ ಪಟ್ಟ ಪರಿಪಾಡ!


 

ಆಲಿಸುತ್ತ ಹೊರಟೆ ಮನದ ಮಾತ.

ಕಾಣದ ಸಂತಸವನ್ನರಸುತ್ತಾ

ಕಾಲುದಾರಿ ಅನುಭವದಿ ಕಂಡರಿಯಿತು ನೋಡ  ಕದಲಲೊಲ್ಲದ ಬದುಕ ಕಾರ್ಮೋಡ.


 

ಹುಸಿ ನಂಬುಗೆಯ ಹರಿಗೋಲನ್ಹಿಡಿದು

ಅರಿಯದಾಗಿಹೆ ವಿಧಿಯ ಹೊರಗುಳಿದು

ಹೇಗೋ ಬಾಳ ದೋಣಿಯ ಹುಟ್ಹಾಕುತ್ತಿರುವೆನಯ್ಯಾ

ದೈವೆಚ್ಹೆಯದೇನೂ ತಿಳಿಯೆ  ಎಲ್ಲವೂ ನಿಗೂಢ!!!!!!!!!!!!!!!!!!!!

 

ಹರೀಶ್ ಶರ್ಮ.

 

Comments