ಓ ನನ್ನ ಒಲವೆ...!!

ಓ ನನ್ನ ಒಲವೆ...!!

ಕವನ

 ಒಂದೇ ಒಂದು ಅವಕಾಶ ಕೊಡು..

ಮಾತಲಿ ಕೊಚ್ಚಿಹೋಗಲಿ,

ತಂಗಾಳಿಯಲಿ ತೂರಿಹೋಗಲಿ,

ಬಿರುಗಾಳಿಯಲಿ ಬಿರಿದುಸಾಗಲಿ

ಎದೆಯಲಡಗಿದ ನೋವುಗಳು...


ಒಂದೇ ಒಂದು ಅವಕಾಶ ಕೊಡು...

ರೆಪ್ಪೆಯಲಡಗಿದ ಹನಿಗಳುದರಲಿ,

ಕನಸುಗಳೆದ್ದು ಕುಣಿಯಲಿ,

ಹೆಣೆದ ಮುಡಿ ಬಿಚ್ಚಿ ನಗಲಿ,

ಆಕಾಶವನು ಚುಂಬಿಸಲಿ ನಲಿವುಗಳು...


ಒಂದೇ ಒಂದು ಅವಕಾಶ ಕೊಡು...

ನಿನ್ನ ತಬ್ಬಿ ನನ್ನ ಹ್ರುದಯ ಅಳಲು...

ನಿನ್ನತಬ್ಬಿ ನನ್ನೆದೆ ಬೞಿ ಹರಡಲು...

ನಿನ್ನತಬ್ಬಿ ನನ್ನೊಲವು ಬಿಕ್ಕಲು...

ನಿನ್ನತಬ್ಬಿನನ್ನ ಹನಿಗಳೊಡೆಯಲು...


 

Comments