ಕವನ ..ನಿನ್ನ ಮೇಲೆನ್ನ ಕವನ..

ಕವನ ..ನಿನ್ನ ಮೇಲೆನ್ನ ಕವನ..

ಕವನ

ಕವನ ...ಇದೋ ನಿನ್ನ ಮೇಲೆನ್ನ ಪ್ರೀತಿಯ ಕವನ..


 


೩ ಚರಣ.. ಪ್ರತಿ ಚರಣದಲಿದೋ ೪ ಸಾಲು,


ಪ್ರತಿ ಸಾಲಿಗಿದೋ ಮತ್ತೂ ೩ ಪದಗಳ ಪಾಲು,


ಅದಿಬದಿಗೆ ಪದಗಳ ಪ್ರಾಸ...ನಿನ್ನ ರಾಯಭಾರದಿ ಪ್ರೇಮಿಗಳ  ಸರಸ..


ಮೌನದ ಮಾತುಗಳಿಗೆ ಸುಂದರ ರೂಪ ಕೊಡುವುದರಲ್ಲಿ ನೀ ಅರಸ..


 


ಕವನ ...ಇದೋ ನಿನ್ನ ಮೇಲೆನ್ನ ಪ್ರೀತಿಯ ಕವನ..


ಕವನ.. ಇದು ಪದಗಳ ಮಿಲನ,..ಭಾವನೆಗಳ ಕದನ.


ಇದರ ಪವಾಡವ್ಇದೋ ತರಬಲ್ಲದು  ಮೊಗದಿ ನಗುವನ್ನ,


ನೀಡಬಲ್ಲದು ನೊಂದ ಹ್ರುದಯಕೆ ಸಾಂತ್ವನ,


ನೀ ಮನುಜನ ಮನಸ್ಸಿಗೆ ಹಿಡಿದ ದರ್ಪಣ.


ಕವನ ...ನೀನೊಂದು ಭಾವುಕ ಖಜಾನಾ..