ಮಾವನ ಮಗಳು
ಚಿತ್ರ
ಮಾವೀನ ಎಲೆ ಚೆಂದಾ
ಮಾವನ ಮಗಳಂದಾ
ಹೇಳಲಿ ನಾ ಹೆಂಗ
ನಿಮ್ಮೆಲ್ಲರ ಮುಂದಾ
ಮುಡಿಯಲ್ಲಿ ಮಲ್ಲಿಗೆ
ಮುಡಿಯುತಾ ಮೆಲ್ಲಗೆ
ಕುಣಿಸುತಾ ಕಾಲ್ಗೆಜ್ಜೆ
ಬಂದಾಳ ನನ್ನಲ್ಲಿಗೆ
ಪ್ರೀತಿಯಂಗಳದಲ್ಲಿ
ಜಿಟಿ ಜಿಟಿ ಮಳೆ ಚೆಲ್ಲಿ
ಮನಸಿನಂಗಳದಲ್ಲಿ
ಹಾಕ್ಯಾಳ ರಂಗವಲ್ಲಿ
ಹಣೆಯಲಿ ಹಣೆಬೊಟ್ಟು
ಕೈತುಂಬಾ ಬಳೆ ಇಟ್ಟು
ಪಳ ಪಳ ಹೊಳದೈತಿ
ಮುಗಿನಾಗಿನ ಮುಗಬೊಟ್ಟು
ಜೀವನಕ ಜೊತೆಯಾಗಿ
ಬಾಳಿಗೆ ಬೆಳಕಾಗಿ
ಕೈ ಹಿಡಿದು ನಡೆದಾಳ
ನನ ಪ್ರೀತಿ ಸತಿಯಾಗಿ
ನನ ಪ್ರೀತಿ ಸತಿಯಾಗಿ
ನಿಮ್ಮ ಸುಮಂಗಲಾ ಪ್ರಕಾಶ್
Rating
Comments
ಉ: ಮಾವನ ಮಗಳು
ಉ: ಮಾವನ ಮಗಳು
ಉ: ಮಾವನ ಮಗಳು