ಅವಳು ನೈದಿಲೆ!

ಅವಳು ನೈದಿಲೆ!

ಕವನ

 ನನ್ನ ನೆನಪ ರಾಡಿಯಲ್ಲಿ

ಅವಳೊಂದು ನೈದಿಲೆ
ಕಳೆದುಕೊಂಡೆ ಎದೆಯ ನಭದ ಚಂದಿರೆ
ನನ್ನ ಮನದ ಬನದ ನವಿಲೆ
 
ಅವಳ ಪಿಸುಮಾತಿನ ಸಪ್ಪಳ
ಮಲ್ಲಿಗೆಯ ಪರಿಮಳ 
ನಗು, ಸ್ಪರ್ಶ, ಹರ್ಷ ನಂಬಿ ಅರಿತೆ
ನನ್ನ ಹೊರೆತು
 
ನಾನು ಅವಳಿಗೆಂದಿಗೂ ಕನಸ ಪಲ್ಲಕ್ಕಿ
ಒಪ್ಪಲಿಲ್ಲ ಮಾತ್ರ ಏಕೆ ? ಆಕಿ
ಹೋದಳಲ್ಲ ಈ ಸ್ವಾರ್ಥ ಸಾಗರಕ್ಕೆ ನೂಕಿ
ಆದರೂ ಅವಳು ಎದೆಯಂಗಳದ ಮಲ್ಲಿಗೆ
 
ಅತ್ತರೆ ಕಣ್ಣೀರಾಗಿ ಸ್ರವಿಸುವಳು
ನೊಂದರೆ ನೋವಾಗಿ ಖಾಲಿಯಾಗುವಳು
ನಗುತ್ತಲೆ ಇದ್ದರೆ ಸುಮ್ಮನೆ
ತೊನೆಯುವಳು, ಕೆನೆಯುವಳು
 
ಮತ್ತೇ ಮತ್ತೇ ಹುಟ್ಟುವಳು
ನನ್ನ ನೆನಪ ರಾಡಿಯಲ್ಲಿ ಮುದ್ದು ನೈದಿಲೆ.