ಆಪ್ತ ಮಿತ್ರನ ಅಳಲು

ಆಪ್ತ ಮಿತ್ರನ ಅಳಲು

 ಜೂನ್, 1996.  ಇಂಗ್ಲೆಂಡ್, ಓವಲ್ ಆಟದ ಮೈದಾನ.  ಭಾರತ ಮತ್ತು ಇಂಗ್ಲೆಂಡ್ ನಡುವೆ ಟೆಸ್ಟ್ ಸಮರ ನೆಡೆದಿತ್ತು.  ಸಾಧಾರಣ ಮೈಕಟ್ಟಿನ ಹುಡುಗನೊಬ್ಬ ಬಂದು ನನ್ನನ್ನು ಆಕಾಶದತ್ತ ಒಮ್ಮೆ ಎತ್ತಿ ಹಿಡಿದ.  ಆಗ ಅವನ ಮುಖ ದಿಟ್ಟಿಸಿದೆ.  ಸುಂದರ ವದನ, ಅರವಿಂದ ನಯನ, ಸರಿಯಾಗಿ ಮೀಸೆಯೂ ಬಾರದ ಈ ಪೋರ ನನ್ನ ಮರ್ಯಾದೆ ತೆಗೆಯುವುದು ಖಚಿತ ಎನಿಸಿತು.  ಬಗ್ಗಿ ನೆಲಕ್ಕೆರಡುಬಾರಿ ನನ್ನ ಕುಟ್ಟಿ, ಗಾಳಿಯಲ್ಲಿ ಬೀಸಿದ. ಬಿಸಿಯ ಗಾಳಿ, ಮೈ ಬೆಚ್ಚಗಾಗಿಸಿತು.  “ಯಾವೋನಯ್ಯಾ ಇವನು, ಅದೇನು ಗ್ರಿಪ್ನಲ್ಲಿ ಹಿಡೀತಾನೋ ಏನೋ, ಮಧ್ಯದಲ್ಲಿ ಕೈಬಿಟ್ರೆ ನನ್ಗತಿ ಏನಪ್ಪಾ” ಅನ್ನಿಸಿತ್ತು ನನಗೆ.  ನಂತರದಲ್ಲಿ ತಿಳಿುತು, ಇವನ ಹೆಸರು “ರಾಹುಲ್ ದ್ರಾವಿಡ್” ಎಂದು.  ಕರ್ನಾಟಕದವನಂತೆ.  ಅಲ್ಲಿಂದ ‘ಬಂದವರೆಲ್ಲರಿಗೂ “ಜಿ.ಆರ್.ವಿಶ್ವನಾಥ್” ಆಗುವ ಆಸೆ’ ಎನಿಸಿ ನಕ್ಕೆ.  ಕರ್ನಾಟಕದಿಂದ ಬಂದವರಲ್ಲಿ, ಜಿ.ಆರ್.ವಿ. ಆದಮೇಲೆ, “ಸ್ಕ್ವೇರ್ ಡ್ರೈವ್”ಗೆ ಆತ ನನ್ನನ್ನು ಬಳಸಿದ ರೀತಿ ಮತ್ಯಾರೂ ಬಳಸಲಿಲ್ಲ.   ನನ್ನನ್ನು ಹಿಡಿದು ಮೈದಾನಕ್ಕೆ ಇಳಿದನೆಂದರೆ ನನಗೇನೋ ಹೆಮ್ಮೆಯೆನಿಸುತ್ತಿತ್ತು.  ಅವನ ಕಾಲದಲ್ಲಿ ಎಂತೆಂಥಹ ರಾಕ್ಷಸೀ ಬೌಲರ್ಸ್ ಇದ್ದರು.   ಆರಡಿಗೂ ಮೀರಿದೆತ್ತರದ ದೈತ್ಯದೇಹಿಗಳು ಓಡಿಬಂದು ಚೆಂಡನ್ನೆಸೆದರೆ ಎಂತಹವರಾದರೂ ಹೆದರಿ ನನ್ನನೆಸೆದು ಪೆವಿಲಿಯನ್ನತ್ತ ಓಡುತ್ತಿದ್ದರು.  ಅಂತಹುದರಲ್ಲಿ ಈ ವಾಮನ ನನ್ನನಡ್ಡವಿರಿಸಿ, ಚೆಂಡನ್ನು ಬೌಂಡರಿಗಟ್ಟಿ ಬೌಲರ್ಸ್ ಬೆವರಿಳಿಸುತ್ತಿದ್ದರೆ, ನನಗೇನೋ ಖುಷಿ.  ಅಲ್ಲಿಂದ ಬಂದವರೆಲ್ಲರೂ ಇವನಂತಾಗಲು ಸಾಧ್ಯವೇ? ಅಲ್ಲದೆ ಕರ್ನಾಟಕದಿಂದ ಬಂದವರಲ್ಲಿ ಬಹಳಷ್ಟುಜನ ಬೌಲರ್ಗಳೇ ಆಗಿದ್ದರು. ನನ್ನನಪ್ಪಿದವರು ಕೆಲವರೇ, ಸ್ಮೃತಿಯಲ್ಲಿ ಉಳಿದವರು ಜಿ.ಆರ್.ವಿ ಒಬ್ಬರೇ. ಇಷ್ಟುಯೋಚಿಸುತ್ತಿರುವಾಗಲೇ ನನ್ನಹಿಡಿದು ಏಳನೆಯವನಾಗಿ ಫೀಲ್ಡ್ ಗೆ  ಬಂದಿದ್ದ.              

ವಧಾಸ್ಥಾನಕ್ಕೆ ಬಂದು ನಿಂತಂತಿತ್ತು ನನ್ನ ಪರಿ.  ಪ್ರಥಮ ಇನ್ನಿಂಗ್್ಸನಲ್ಲಿ ಇಂಗ್ಲೆಂಡ್ ತನ್ನೆಲ್ಲಾ ವಿಕೆಟ್ ಕಳೆದುಕೊಂಡು  344ರನ್ನುಗಳ ಸವಾಲೊಡ್ಡಿತ್ತು.   ಅದಕ್ಕೆ ಪ್ರತಿಯಾಗಿ ಭಾರತ 202ರನ್ ಗಳಿಸಿ 5 ವಿಕೆಟ್ಗಳನ್ನು ಕಳೆದುಕೊಂಡು ತೀವ್ರ ಸಂಕಷ್ಟದಲ್ಲಿ ಸಿಲುಕಿತ್ತು.   ನನ್ನನ್ನು ಹಿಡಿದಿದ್ದ ಈ ಮಹಾನುಭಾವ ನೋಡಿದರೆ, ಏಪ್ರಿಲ್ 3, 1996 ರಲ್ಲಿ ಶ್ರೀಲಂಕ ವಿರುದ್ಧ, ಸಿಂಗಪೂರ್‍ನಲ್ಲಿ ನೆಡೆದ ಏಕದಿನ ಪಂದ್ಯವೊಂದರಲ್ಲಿ ಕೇವಲ 3ರನ್ ಗಳಿಸಿ ನನ್ನ ಕೈಚೆಲ್ಲಿದ್ದ.  ನೆನೆಸಿಕೊಂಡರೆ ಮೈ ಜುಂ ಎನ್ನುತ್ತದೆ.  ಇಂಗ್ಲೆಂಡ್ನ ಪ್ರಚಂಡ ಬೌಲರ್‍ಗಳೇನು ಸಾಮಾನ್ಯರೇ? ಇದುವರೆವಿಗಾಗಲೇ ಸಚಿನ್,  ಅಜರುದ್ದೀನ್,   ಅಜಯ್ ಜಡೇಜರಂತಹ ಅತಿರಥ ಮಹಾರಥರನ್ನೇ ಪೆವಿಲಿಯನ್ಗೆ ಅಟ್ಟಿದ್ದರು.  ಇನ್ನು ಇವನು ಯಾವಲೆಕ್ಕ ಅವರಿಗೆ, ಎಂದುಕೊಳ್ಳುತ್ತಿರುವಾಗಲೇ ಬೆಂಕಿಯುಂಡೆಯಂತೆ ಚೆಂಡು ನನ್ನತ್ತ ನುಗ್ಗಿತ್ತು. ಎಲ್ಲರೂ ತದೇಕಚಿತ್ತರಾಗಿ ಇವನತ್ತಲೇ ದ್ಟೃ ನೆಟ್ಟಿದ್ದರು.  ಮುಂದೆ ನುಗ್ಗಿದ ಚೆಂಡಿಗೆ ನನ್ನನೊಡ್ಡಿ ತಡೆದ.  ಚೆಂಡು ದೊಪ್ಪೆಂದು ಅಲ್ಲಿಯೇ ಬಿತ್ತು.  ಈ ಪೆÇೀರನ ಆತ್ಮವಿಶ್ವಾಸಕ್ಕೊಮ್ಮೆ ತಲೆದೂಗಿದೆ. ಚೆಂಡು ಸರಿಯಾಗಿ ನನ್ನ ಮಧ್ಯಭಾಗಕ್ಕೆ ಢೀಕೊಟ್ಟಿತ್ತು.  ಇದು ಆಕಸ್ಮಿಕವಾಗಿರಲಿಲ್ಲ.  ಈ ಚೆಂಡನ್ನು ಹೀಗೆಯೇ ಎದುರಿಸಬೇಕೆಂಬ ಪÇವ್ರನಿಯೋಜನೆ ಅದಾಗಿತ್ತು.  ಭಲೇ, ಎಂದುಕೊಂಡೆ. 
 
ಸರಿ, ಗಂಗೂಲಿಯೊಂದಿಗೆ ಕೂಡಿಕೊಂಡ ಈ ಪೆÇೀರ ರನ್ನುಗಳನ್ನು ಕಸಿಯುತ್ತಲೇ ಹೋದ, ಸುಮಾರು 364 ನಿಮಿಷಗಳ ದೀಘ್ರಕಾಲ ಮೈದಾನದಲ್ಲಿದ್ದ ಈತ, 267 ಚೆಂಡುಗಳನ್ನೆದುರಿಸಿ ಗಳಿಸಿದ್ದು ಅತ್ಯುಪಯುಕ್ತ 95ರನ್ಗಳು.  ಭಾರತ ಕೇವಲ 202ಕ್ಕೆ 5ಅಮೂಲ್ಯ ವಿಕೆಟ್ಗಳನ್ನು ಕಳೆದುಕೊಂಡು ಸೋಲಿನ ದವಡೆಯಲ್ಲಿದ್ದಾಗ 7ನೆಯವನಾಗಿ ಬಂದ ಈ ಕನ್ರಾಟಕದ ಹುಡುಗ, ಭಾರತದ ವೊತ್ತವನ್ನು 419ಕ್ಕೆ ಕೊಂಡೊ್ದುದ್ದ. (ಸೂಲಿನ ಪಂದ್ಯವನ್ನು ಡ್ರಾ ಆಗುವತ್ತ ತಿರುಗಿಸಿದ್ದು ಮಾತ್ರ ಈ ಪÇರನೇ!) ಲೆವಿಸ್ ಎಸೆದ ಚೆಂಡು ನನಗೆ ತಗುಲಿ ಹಿಂದೆ ನಿಂತಿದ್ದ ವಿಕೆಟ್ಕೀಪರ್ ರಸ್ಸೆಲ್ಕೈ ಸೇರಿತ್ತು.  ಒಡನೆ, ಅಂಪೈರ್ ನಿಧ್ರಾರಕ್ಕೂ ಕಾಯದ ಹುಡುಗ ಪೆವಿಲಿಯನ್ನತ್ತ ಭಾರವಾದ ಹೆಜ್ಜೆ ಹಾಕಿದ್ದ.  ನನಗೆ ಪಿಚ್ಚೆನಿಸಿತ್ತು.  ಪೆವಿಲಿಯನ್ನಲ್ಲಿ ನೆರೆದಿದ್ದವರೆಲ್ಲರೂ ಎದ್ದುನಿಂತು ತಮ್ಮ ಪ್ರಶಂಸೆಯನ್ನು ಕರತಾಡನದ ಮೂಲಕ ವ್ಯಕ್ತಪಡಿಸಿದರು.  ಇನ್ನು ಕೇವಲ ಐದು ರನ್ ಗಳಿಸಿದ್ದರೆ ಸೆಂಚುರಿಯಾಗುತ್ತಿತ್ತೇ, ಎಂತಹ ಅಚಾತುಯ್ರವಾುತು ಎಂದು ಪ್ರೇಕ್ಷಕರೆಲ್ಲರೂ ಅನುಕಂಪಿಸಿದರು.  ಇಲ್ಲಿಂದಲೇ ನಾನು ಈ ಪÇರನ ಮಿತ್ರನಾಗಿಹೋದೆ.  ಗೆಳೆಯನ ಮೇಲಿನ ಗೌರವ ದಿನದಿಂದ ದಿನಕ್ಕೆ, ಆಟದಿಂದ ಆಟಕ್ಕೆ ಹೆಚ್ಚಾಗುತ್ತಾಹೋುತು.  ಅವ ನನ್ನ ಪರಮಾಪ್ತ ಗೆಳೆಯನಾಗಿದ್ದ. ನಾನವನಿಗೆ “ಆಪ್ತಮಿತ್ರ” ನಾಗಿದ್ದೆ.
 
ಅದು ಏಕದಿನ ಪಂದ್ಯವಾಗಿರಬಹುದು ಅಥವಾ ಟೆಸ್್ಟ ಪಂದ್ಯವಾಗಿರಬಹುದು “ಜಾಮ್ಮಿ” (ನಾನು ಪ್ರೀತಿುಂದ ಹೀಗೇ ಕರೆಯುತ್ತಿದ್ದದ್ದು) ಜಾಗರೂಕತೆುಂದ ಆಡುತ್ತಿದ್ದ.  ಬರುಬರುತ್ತಾ ಅತ್ಯಂತ ಭರವಸೆಯ ಆಟಗಾರನಾಗಿ ಹೊರಹೊಮ್ಮಿದ.  ದ್ರಾವಿಡ್ ಭಾರತ ತಂಡಕ್ಕೆ ಅನಿವಾಯ್ರವಾದ.  ನನ್ನ ಮಿತ್ರನ ಏಳಿಗೆಯನ್ನು ಕಂಡು ನಾನು ಸಂತೋಷದಿಂದ ಬೀಗಿದ್ದೆ.  ಇವನ ಪ್ರತಿಯೊಂದು ಹೊಡೆತದಲ್ಲೂ ಒಂದೊಂದು ವಿಭಿನ್ನ ಶೈಲಿ ಇರುತ್ತಿತ್ತು.  ಬರುಬರುತ್ತಾ ಅಭಿಮಾನಿಗಳು, ಕ್ರಿಕೆಟ್ ಪಂಡಿತರು ಇವನನ್ನು ಕ್ರಿಕೆಟ್ನ ಶಾಸ್ತೀಯ ಆಟಗಾರನೆಂದು ಬಣ್ಣಿಸಿದರು.  ಹಲವಾರು ಕ್ಲಿಷ್ಟಕರ ಸನ್ನಿವೇಶಗಳಲ್ಲಿ ಏಕಾಗ್ರಚಿತ್ತದಿಂದ ಆಡುತ್ತಾ, ರನ್ಗಳ ಹೊಳೆಹರಿಸುತ್ತಾ ಭಾರತವನ್ನು ಸೋಲಿನ ದವಡೆುಂದ ಪಾರುಮಾಡಿದ್ದ.  ಅಂಗಣದಲ್ಲಿನ ಇವನ ಸ್ಥಿತಪ್ರಜÕತೆ ಇತರರಿಗೆ ಮಾದರಿಯಂತಿತ್ತು. ಯಾವ ಸಂದಭ್ರದಲ್ಲೂ ಸಂಯಮವನ್ನು ಕಳೆದುಕೊಳ್ಳದೆ ಶಾಂತಚಿತ್ತನಾಗಿ, ಹಸನ್ಮುಖಿಯಾಗಿ ಎದುರಾಳಿಯ ಚೆಂಡನ್ನು ಎದುರಿಸುತ್ತಿದ್ದ.  ಸ್ಪಿನ್ ಬೌಲಸ್್ರಗಂತೂ ಸಿಂಹಸ್ವಪ್ನನಾಗಿದ್ದ.  ನನ್ನತ್ತ ಬೆಂಕಿಯುಗುಳುತ್ತಾ ನುಗ್ಗುತ್ತಿದ್ದ ಚೆಂಡಿಗೆ ಬೌಂಡರಿಯನ್ನು ಹೀಗೇ ತಲುಪಬೇಕೆಂದು ನಿದ್ರೇಶಿಸುತ್ತಿದ್ದ ಸಾಹಸಿ ಈ ನನ್ನ ಮಿತ್ರ.  ಚೆಂಡಿನ ದುರವಸ್ಥೆ ಕಂಡು ನಾನು ಹಿರಿಹಿರಿ ಹಿಗ್ಗುತ್ತಿದ್ದೆ. “ಶಿವಣ್ಣ”ನ ಕೈಯಲ್ಲಿನ ಲಾಂಗಿನಂತೆ ದ್ರಾವಿಡ್ ಕೈಯಲ್ಲಿ ನಾನು ಮಿರಿಮಿರಿ ಮಿಂಚುತ್ತಿದ್ದೆ.
 
ಯಾವುದೇ ಆಸೆ-ಆಮಿಷಗಳಿಗೆ ಬಲಿಯಾಗದೆ ಆಡುವಷ್ಟು ಕಾಲ ದೇಶಕ್ಕಾಗಿ ಮಾತ್ರ ಆಡಿದ ತತ್ವನಿಷ್ಠ ನನ್ನೀ ಮಿತ್ರ ದ್ರಾವಿಡ್ ಎಂದು ಹೇಳಿಕೊಳ್ಳಲು ಹೆಮ್ಮೆಯೆನಿಸುತ್ತದೆ.  ದಾಖಲೆಗಳು ತಂತಾನೇ ನಿಮ್ರಿತವಾದುವಲ್ಲದೆ, ಎಂದೂ ಅವುಗಳಿಗಾಗಿ ಹಂಬಲಿಸಿ ಆಡಲಿಲ್ಲ.  ಇಷ್ಟಾಗಿಯೂ ಈತನಿಂದ ನಿಮ್ರಿತವಾದ ದಾಖಲೆಗಳೇನೂ ಕಡಿಮೆಯಲ್ಲ.  ಸಹ ಆಟಗಾರರೊಂದಿಗಾಗಲಿ, ಇತರ ಪ್ರತಿಸ್ಪಧ್ರಿಗಳೊಂದಿಗಾಗಲಿ ಎಂದಿಗೂ ಅನುಚಿತವಾಗಿ ವತ್ರಿಸಲಿಲ್ಲ.  ತನಗಿಂತ ಕಿರಿಯರಮುಂದೆ ಜಂಬ ತೋರಿದವನಲ್ಲ, ಹಿರಿಯರನ್ನು ಅಗೌರವದಿಂದ ಕಂಡವನಲ್ಲ.  ಅತಿಹೆಚ್ಚು ಕಾಲ ಏಕಾಗ್ರತೆುಂದ ಕಿಂಚಿತ್ತೂ ತಾಳ್ಮೆ ಕಳೆದುಕೊಳ್ಳದೆ ಆಡುತ್ತಿದ್ದ ಇವನ ಪ್ರತಿಭೆ ಕಂಡ ಅಭಿಮಾನಿ ಬಳಗ ಇವನನ್ನು “ಕ್ರಿಕೆಟ್ ಗೋಡೆ” ಎಂದು ಕರೆದರು. ಅಷ್ಟೇ ಅಲ್ಲದೆ “ಮಿ.ಪರ್ಫೆಕ್್ಟ”, “ಮಿ.ಡಿಪೆಂಡೆಬಲ್” ಎಂದೂ ಹೆಸರಿಸಿದರು. 
       
ಚೆನ್ನಾಗಿ ಆಡಿದಾಗ ಹೊಗಳಿ ಅಟ್ಟಕ್ಕೇರಿಸಿದವರೇ, ಫಾಮ್್ರ ಕಳೆದುಕೊಂಡಾಗ ಅಷ್ಟೇ ತೀಕ್ಷ್ಣವಾಗಿ ಟೀಕಿಸಿದರು.  ಹೊಗಳಿಕೆಗೆ ಹಿಗ್ಗದೆ, ತೆಗಳಿಕೆಗೆ ಕುಗ್ಗದೆ ಮುನ್ನುಗ್ಗಿ ದಾಖಲೆಗಳ ಸರದಾರನೆನಿಸಿದ ಕೆಚ್ಚೆಧೆಯ ವೀರ ಕನ್ನಡಿಗ, ನನ್ನ ಗೆಳೆಯ.  ನನ್ನೊಂದಿಗೇ ಅಲ್ಲದೆ ಚೆಂಡಿನೊಂದಿಗೂ ಉತ್ತಮ ಸಂಬಂಧವಿರಿಸಿದ್ದ.  ಟೆಸ್್ಟ ಪಂದ್ಯಗಳಲ್ಲಿ ಅತಿ ಹೆಚ್ಚು (200) ಕ್ಯಾಚ್ ಪಡೆದ ಏಕೈಕ ಆಟಗಾರನೆಂಬ ವಿಶ್ವದಾಖಲೆ ಇರುವುದು ನನ್ನ ಗೆಳೆಯನ ಹೆಸರಿನಲ್ಲೇ.  ಈತ ವಿಕೆಟ್ ಕೀಪಿಂಗ್ ಕೂಡ ಮಾಡುತ್ತಿದ್ದ, ಎಂಬುದು ನಿಮಗೆ ತಿಳಿದಿರಲಿ.  
 
1996ರಲ್ಲಿ ಅಂತರ್ಟ್ರಾೀಯ ಕ್ರಿಕೆಟ್ಗೆ ಪಾದಾಪ್ರಣ ಮಾಡಿದ್ದ ಈ ಪೆÇೀರ ಒಂದೊಂದೇ ಪ್ರಶಸ್ತಿಗಳ ಗರಿಗಳನ್ನು ತನ್ನ ಕಿರೀಟಕ್ಕೆ ಸಿಕ್ಕಿಸಿಕೊಳ್ಳುತ್ತಾ ಹೋದ.  ಕೇವಲ ಎರಡೇ ವಷ್ರದಲ್ಲಿ ಅಂದರೆ 1998ರಲ್ಲಿ “ಅಜ್ರುನ ಪ್ರಶಸ್ತಿ”ಯನ್ನು ಗಿಟ್ಟಿಸಿಕೊಂಡ.  ಹಿಂದೆಯೇ 1999ರಲ್ಲಿ “1999ರ ವಿಶ್ವಕಪ್ಪಿನ ಶ್ರೇಷ್ಟ ಆಟಗಾರ”ನೆಂಬ ಗೌರವ ದಕ್ಕಿತ್ತು.  “2000ದ ವಿಸ್ಡನ್ ಕ್ರಿಕೇಟಿಗ” ನೆಂಬ ಹೆಮ್ಮೆಯ ಪ್ರಶಸ್ತಿಯೂ ಲಭಿಸಿತ್ತು.  2004ರಲ್ಲಿ “ಸರ್ ಗಾರ್ಫೀಲ್್ಡ ಸೋಬಸ್್ರ ಟ್ರೋಫಿ” ವಿಜೇತನಾದ.  ಐ.ಸಿ.ಸಿ. ಯ ವಷ್ರದ ಶ್ರೇಷ್ಟ ಕ್ರಿಕೇಟಿಗನೆಂಬ ಕೀತ್ರಿಗೆ ಭಾಜನನಾದ.  ಅದೇ ವಷ್ರದಲ್ಲಿ ನನ್ನೀಮಿತ್ರನಿಗೆ ಭಾರತದ ಹೇಮ್ಮೆಯ “ಪದ್ಮಶ್ರೀ” ಪ್ರಶಸ್ತಿಯೂ ಲಭಿಸಿತ್ತು.  ಐ.ಸಿ.ಸಿ. ುಂದ ವಷ್ರದ ಶ್ರೇಷ್ಟ ಟೆಸ್್ಟ ಕ್ರಿಕೆಟಿಗನೆಂಬ ಬಿರುದೂ ದಕ್ಕಿತು.  ಇಷ್ಟಕ್ಕೇ ಮುಗಿುತೇ, ಇಲ್ಲ, ಅದೇ ವಷ್ರದಲ್ಲಿ ಮತ್ತೆ ಪ್ರತ್ಟಿತ ಎಂ.ಟಿ.ವಿ. ಸಂಸ್ಥೆ “ವಷ್ರದ ಶ್ರೇಷ್ಟ ಎಂ.ಟಿ.ವಿ. ಯೂತ್ ಐಕಾನ್” ಸ್ಥಾನಕ್ಕೆ ನನ್ನೀಗೆಳೆಯನನ್ನು ಆರಿಸಿತ್ತು.  2006ರಲ್ಲಿ “ಐ.ಸಿ.ಸಿ. ಟೆಸ್್ಟ ತಂಡದ ಶ್ರೇಷ್ಟ ನಾಯಕ” ಎಂಬ ಆದರದ ಗೌರವ ಬೇರೆ ದೊರೆುತು. 2011ರಲ್ಲಿ ಎನ್.ಡಿ.ಟಿ.ವಿ.  ವತಿುಂದ “ಜೀವಮಾನದ ಸಾಧನೆ”ಗಾಗಿ  ಪ್ರಶಸ್ತಿ ತನ್ನದಾಗಿಸಿಕೊಂಡ.  ಹೀಗೇ ಒಂದೇ, ಎರಡೇ ಅಗಣಿತ ಮಾನಸಮ್ಮಾನಗಳನ್ನು ಗಳಿಸುತ್ತಾ ತನ್ನ ನಾಡು ಹಾಗೂ ದೇಶಕ್ಕೆ ಕೀತ್ರಿತಂದ, ನನ್ನೀ ಗೆಳೆಯ, ಜನವರಿ 28, 2012.  ಅಡಿಲೈಡ್ ಓವಲ್ನಲ್ಲಿ ತನ್ನ ಟೆಸ್್ಟ ಜೀವನದ ಕೊನೆಯಪಂದ್ಯವನ್ನು ಆಡಿದ್ದ.  ಮಾಚ್್ರ 9, 2012 ರಂದು ಅಂತರ್ಟಾೀಯ ಹಾಗೂ ಪ್ರಥಮದಜ್ರೆ ಕ್ರಿಕೆಟ್ಟಿಗೆ ವಿದಾಯ ಹೇಳಿದ್ದ.  ಎಲ್ಲರೂ ಒಂದಲ್ಲ ಒಂದುದಿನ ವಿದಾಯ ಹೇಳಲೇಬೇಕಾದರೂ, ಇನ್ನೂ ನನ್ನ ಮಿತ್ರನಲ್ಲಿ ಆಡುವ ಕಸುವಿತ್ತು.  ಎಲ್ಲಾ ಅಭಿಮಾನಿ ಹಿತೈಗಳದೂ ಒಂದೇ ಉದ್ಘಾರ, ಇಷ್ಟು ಬೇಗ “ಜಾಮ್ಮಿ” ಈ ನಿಧ್ರಾರಕ್ಕೆ ಬರಬಾರದಿತ್ತು, ಎಂಬುದು.   
 
ಯಾವುದೇನೇ ಇರಲಿ ಮಿತ್ರ, ಇಷ್ಟು ವಷ್ರಗಳ ಸುದೀಘ್ರ ಸ್ನೇಹದಲ್ಲಿ ನೀನು ನನಗೆ ನೀಡಿದ ಪ್ರೀತಿ, ವಿಶ್ವಾಸಗಳನ್ನು ನಾನೆಂತು ಮರೆಯಲಿ.  ನೀನು ಪ್ರತಿಯೊಂದು ಮೈಲಿಗಲ್ಲು ಕ್ರಮಿಸಿದಾಗಲೂ ನನ್ನ ಹಿಡಿದೆತ್ತಿ ಮುತ್ತನಿಡುತ್ತಿದ್ದುದನ್ನು ನೆನಪಿಸಿಕೊಂಡರೆ ನನ್ನ ಕಣ್ಣಾಲಿಗಳು ತುಂಬಿಬರುತ್ತವೆ.  ನೀನು ಈ  ನಿಷ್ಟುರ-ಖಠೋರ ನಿಧ್ರಾರವನ್ನು ತೆಗೆದುಕೊಳ್ಳುವ ಮುನ್ನ ನನ್ನನೊಮ್ಮೆ ಕೇಳಬೇಕೆಂದು ನಿನಗನಿಸಲಿಲ್ಲವೇ?  ನೀನಿಲ್ಲದ ಬದುಕು ದುಭ್ರರ ವೆನಿಸಿದೆ ಗೆಳೆಯ.  ಮನಸಿಗೆ ಮಂಕು ಮುಸುಕಿದೆ. ಇನ್ನುಮುಂದೆ ನಿನ್ನಂತೆ ಶಿಸ್ತು, ಸಂಯಮ, ಶ್ರದ್ಧೆ, ಭಕ್ತಿ, ಪ್ರೀತಿ, ಅಭಿಮಾನ, ಏಕಾಗ್ರತೆ, ಛಲ, ಗುರಿ ಇವುಗಳೆಲ್ಲ ಏಕೀಭವಿಸಿರುವ ಸಿದ್ಧಹಸ್ತ ನನಗೆ ಸಿಗುವುದೆಂದು, ಮಿತ್ರ?  ನಿನ್ನ ಮಾತಾಪಿತರಿಗೆ ಸಾಥ್ರಕ ಸುತನಾದೆ.  ನಿವ್ರಂಚನೆುಂದ, ನಿಶ್ಕಲ್ಮಶ ಹೃದಯದಿಂದ ದೇಶದ ಗೆಲುವಿಗೆ ಆಡಿ ಕರುನಾಡ ಋಣ ತೀರಿಸಿದೆ.  ದಾಖಲೆಗಳ ಸರದಾರನೆನಿಸಿ ನಿನ್ನಭಿಮಾನಿಗಳ ರಂಜಿಸಿ ಅವರ ಹೃದಯ ಸಿಂಹಾಸನದಲ್ಲಿ ಶಾಶ್ವತ ಸ್ಥಾನ ಪಡೆದೆ.  ಆದರೆ ನಾನು...?  ನಿನ್ನೊಂದಿಗೆ ಇಷ್ಟುವಷ್ರ ಇದ್ದೆನೆಂಬ ನೆನಪÅ ಬಿಟ್ಟರೆ ಇನ್ನೇನು ಉಳಿದಿದೆ ಗೆಳೆಯಾ?  ನಿನ್ನ ಕುರಿತು ಹೇಳಹೊರಟರೆ ಬೆಟ್ಟದ್ಟದೆ, ಆದರೆ ಭಾವನೆಗಳ ಭಾರದಿಂದ ದುಃಖ ಉಮ್ಮಳಿಸುತಿದೆ.  ಇಷ್ಟುಮಾತ್ರ ಹೇಳಬಲ್ಲೆ ಮಿತ್ರಾ, ನಿನ್ನಂತಹವರು “ನಭೂತೋ ನಭವಿಷ್ಯತಿ”
 
“ಮನಸು ಹೇಳಬಯಸಿದೆ ನೂರೊಂದು, ತುಟಿಯಮೇಲೆ ಬಾರದಿದೆ ಮಾತೊಂದು”,
ದೇವರು ನಿನಗೆ ಒಳ್ಳೆಯದು ಮಾಡಲಿ, ಮಿತ್ರ.
 
- ಎಂ.ಎಸ್.ಮುರಳಿಧರ್ , ಶಿರಾ
 

Comments