ಷಾಹಿರಿ ಹಾಗೆ ಸುಮ್ನೆರಿ
ಕವನ
೧) ಮದುವೆಯ ಮೊದಲು
ನಾ ಬರೆದ ಓಲೆ
ಮದುವೆಯ ಮೇಲೆ
ಬರೀ ಒಣಗಿದ ಎಲೆ,,,,
೨) ಎಂತ ಬಲಗಣ್ನವ ಆಕೀದು
ಏನು ಚೆಂದೈತಿ!!
ಎಷ್ತು ಚೆಂದೈತಿ ಅಂದ್ರ
ಆಕಿ ಎಡಗಣ್ಣು ಸೈತ
ಅದನ್ನೆ ನೋಡ್ತಿಕ್ಕತ್ತ್ಯತಿ,,,
೩) ಕಪ್ಪು ಕನ್ನಡಕ ಕಣ್ಣಲ್ಲಿದ್ರೆ
ಬಿಸುಲು ಕೂಡ ಬೆಳದಿಂಗಳಂತೆ
ಒಪ್ಪಿದ ಹುಡುಗಿ ಅಪ್ಪುಗೆಯಲ್ಲಿದ್ರೆ
ನರಕ ಕೂಡ ಸ್ವಗ್ರದಂತೆ.,,