ಬರಿದಾದ ಬಾಳು
ಕವನ
ಈ ಬಾಳು ಬರಿದಾಗಿದೇ
ಕಣ್ಣೀರ ಕಡಲಾಗಿದೇ
ಒಲವಿಂದ ನಾನು, ಬಳಿಸೇರಿದಾಗ ನನ್ನಾಸೆ ಮಣ್ಣಾಗಿದೇ (ಪ)
ಎಲ್ಲಿಂದಲೋ ಬಂದೆ ನನ್ನಲ್ಲಿ ನಿಂದೇ
ಮನದಲ್ಲಿ ನೂರಾಸೆ ತಂದೇ
ನೂರಾಸೆ ತಂದೂ, ಮರೆಯಾಗಿ ಹೋದೇ
ನನ್ನಾಸೆ ಕನಸಾಗಿದೇ
ನನ್ನಾಸೆ ಕನಸಾಗಿದೇ
ಬಾಳೆಂಬ ಪಥದಿ ನಾನೊಂಟಿಯಾದೇ
ಒಲವೆಂಬ ಜೊತೆ ಕಾಣದಾದೇ
ನನ್ನೆಲ್ಲ ಬಯಕೆ, ಕರ್ಪೂರದಂತೇ
ತಾ ಕರಗಿ ನೀರಾಗಿದೇ
ತಾ ಕರಗಿ ನೀರಾಗಿದೇ