ಮುಗ್ದತೆ

ಮುಗ್ದತೆ

ನನಗೆ ಒಂದು ಕೆಟ್ಟ ಅಭ್ಯಾಸ ಇದೆ. ಅದೇನೆಂದೆರೆ ಯಾರಾದರೂ ಇಬ್ಬರು ಮಾತನಾಡುತ್ತಿದ್ದರೆ ಅದನ್ನು ಕದ್ದು ಕೇಳುವ ಹಂಬಲ. ಅಂದು ಬೆಳಿಗ್ಗೆ ಬಸ್ನಲ್ಲಿ ಕುಳಿತು ಆಫೀಸಿಗೆ ಹೊರಟಿದ್ದೆ. ಮುಂದೆ ಇಬ್ಬರು ಹುಡುಗರು ಕುಳಿತಿದ್ದರು. ಅವರ ನಡೆ ನುಡಿ ನೋಡಿ ನನಗೆ ತೀರ ಅಸಹ್ಯ ಆಗಿತ್ತು. ಒಬ್ಬನ ಅಂಗಿ ಕೊಳಕಾಗಿದ್ದಾರೆ, ಇನ್ನೊಬ್ಬನ ಪ್ಯಾಂಟು ಹರಿದಿತ್ತು. ಅಡ್ಡಾದಿಡ್ಡಿ ಹರಡಿದ ಕೂದಲು. ಸುಮಾರಾಗಿ ಕೆದರಿದ ದಾಡಿ. ಅವರನ್ನು ನೋಡಿ, ಇಂತವರೆಲ್ಲ ಯಾಕೆ ಬಸ್ಸಿನಲ್ಲಿ ಬರುತ್ತಾರಪ್ಪಾ ಎಂದು ಅನಿಸಿತ್ತು. ಹಾಗೆ ಮುಂದೆ ಹೋಗುತ್ತಿರಲು, ಸುಮ್ಮನೆ ಅವರಿಬ್ಬರು ಏನು ಮಾತಾಡುತ್ತಿದ್ದಾರೆ ಎಂದು ಕೇಳುವ ಮನಸ್ಸಾಯಿತು. ಅವರಿಬ್ಬರ ಮಾತುಗಳನ್ನು ಕೇಳಿ ನಿಜವಾಗಿಯೂ ನನ್ನನ್ನು ನಾನು ಹಳಿದುಕೊಂಡೆ. ಅವರಿಬ್ಬರೂ ಕನ್ನಡದ ಹಲವಾರು ಸುಂದರ ಕೃತಿಗಳ ಬಗ್ಗೆ ಚರ್ಚಿಸುತ್ತಿದ್ದರು. ಅದರಲ್ಲೂ ಒಬ್ಬನು ಪ್ರತಿಯೊಂದು ಕೃತಿಯ ಬಗ್ಗೆ ಬಹು ಸುಂದರವಾಗಿ ಮಾತನಾಡುತ್ತಿದ್ದನು. ಇದರ ಜೊತೆಗೆ ಅವರಿಬ್ಬರೂ ಕೆಲವೊಂದು ಕವನಗಳ ಕತೆಗಳನ್ನು C.D ರೂಪದಲ್ಲಿ ಸಂಗ್ರಹಿಸಿದ್ದರು. ಅವರಿಬ್ಬರ ಕನ್ನಡ ಪ್ರೇಮ ಕಂಡು ನಿಜವಾಗಿಯೂ ನನಗೆ ಬಹಳ ಸಂತೋಷವಾಯಿತು. ಇಂದಿನ ಕಾಲದಲ್ಲಿ ಎಲ್ಲರೂ ಕಂಪ್ಯೂಟರ್ ಕಲಿಯಲು ಮುಂದೆ ಬಂದರೆ ಈ ಎರಡು ಹುಡುಗರು ಕನ್ನಡದ ಕತೆ ಕವನ ಕೃತಿ ಓದಲು ತೊಡಗಿದ್ದಾರೆ ಎಂದರೆ ಅದು ನಿಜವಾಗಿಯೂ ಶ್ಲಾಘನೀಯ. ಬರಿ ನಡೆ ನುಡಿಯಿಂದ ಮಾತ್ರ ಮನುಷ್ಯನನ್ನು ಅಳೆಯಬಹುದೆಂದು ಭಾವಿಸಿದ್ದ ನನಗೆ, ಜೊತೆಗೆ ಮನುಷ್ಯನ ವಿಚಾರ ದೃಷ್ಟಿಯೂ ಸಹ ಮುಖ್ಯ ಎಂದು ತೋರಿಸಿಕೊಟ್ಟ ಆ ಇಬ್ಬರು ಹುಡುಗರಿಗೆ ನನ್ನ ವಂದನೆಗಳು.

Rating
No votes yet