ಚಂದ ಮಾಮಾ...

ಚಂದ ಮಾಮಾ...

ಕವನ

ಬಾ ಬಾ ಚಂದ ಮಾಮಾ..

ಕತ್ತಲು ಕವೆದಿತ್ತು..

ಕಂದಮ್ಮ ಅಳುತಿತ್ತು..

ಹೆತ್ತಮ್ಮನ ಮನ ಕದಡಿತ್ತು..

ಕೂಸು ಉಣಲು ಒಲ್ಲೆನು ಎಂದು ಮತ್ತೆ ಮತ್ತೆ ಚೀರುತಿತ್ತು..

 

ನೀಲಿ ಬಾನೆಲ್ಲ ಕತ್ತಲ ಕೋಣೆಯಂತಿತ್ತು..

ಕಂದನ ಹಟ ಮುಗಿಲು ಮುಟ್ಟಿತ್ತು.

ಅಲ್ಲಿ ಎದುರಾದ

ಮರೆಯಾಗಿದ್ದ ಚಂದಮಾಮಾ..

 

ಬಾನೆಲ್ಲಾ ಬೆಳಕು ಚೆಲ್ಲಿ..ನಸು ನಗುವ ಬೀರಿ.

ನಿಂತನು ಸುಂದರ ಚಂದಿರ,

ಅದ ಕಂಡು ಮಗು ನಗಲಾರಂಭಿಸಿತು

ಬಾನೆಡೆ ಕೈ ಮಾಡಿ..

"ಬಾ ಬಾ ಚಂದಮಾಮಾ" ಎಂದು ಚಂದಿರನ ಕರೆ ಮಾಡಿ..

  

Comments