ಪುಟ್ಲಿಂಗು ಪ್ರಸಂಗ 3 = ದೇವರೇ ಗತಿ!

ಪುಟ್ಲಿಂಗು ಪ್ರಸಂಗ 3 = ದೇವರೇ ಗತಿ!

 

 
 
ಯಾಕೋ ಇವತ್ತು ಪುಟ್ಲಿಂಗು  ಬಹಳ ಬೇಜಾರ್ನಲ್ಲಿದ್ದಂಗಿತ್ತು.  ತಲೆ ಕೆಕ್ರೊಂಡು ಅತ್ತಿಂದಿತ್ತ, ಇತ್ತಿಂದತ್ತಾ, ಈದ್ ಬೆಕ್ಕಿಂಥರಾ ಓಡಾಡ್ತಿದ್ದ. ಇದನ್ನ ನೋಡಿದ ಪಮ್ರೇಶಿಗೆ ಇವನನ್ನ ಹೆಂಗಪ್ಪಾ ಮಾತಾಡ್ಸೋದು ಅಂತಾ ದೊಡ್ಡ ಯೋಚ್ನೆ ಆಗ್ಬಿಟ್ಟಿತ್ತು.  ಮಾತ್ನಾಡಿಸ್ದೇ ಬೇರೇ ದಾರಿನೇ ಇಲ್ರಿಲ್ಲ ಪಮ್ರೇಶೀಗೆ.  ಯಾಕೇ ಅಂದ್ರೆ, ಇವನಿಗೆ ಟೈಮ್ ಪಾಸ್ ಆಗ್ಬೇಕಲ್ಲ!  ಅಂತೂ ಮಾತ್ನಾಡ್ಸೇಬಿಡೋದು ಅಂತ ನಿಧ್ರಾರ ಮಾಡಿದ ಪಮ್ರೇಶಿ, “ಯಾಕೋ ಪÅಟ್ಲಿಂಗು ತುಂಬಾ ಯೋಚ್ನೆ ಮಾಡ್ತಿರೋ ಹಾಗಿದೇ, ಏನು ವಿಷ್ಯ?” ಊ...ಹೂಂ... ಮಾತೇ ಇಲ್ಲ ಆಕಡೆಯಿಂದ.   ಪುಟ್ಲಿಂಗು ಮೌನಕ್ಕೆ ಶರಣಾಗಿ ದಿಗಂತದತ್ತ ಮುಖ ಮಾಡಿದ್ದ.
 
“ಯಾಕ್ಸಾರ್ ಇಷ್ಟೊಂದು ಬೇಜಾರ್ನಲ್ಲಿದೀರಾ?  ಅಂಥಾದ್ದೇನಾಯ್ತು ನಿಮ್ಗೆ?”  ಪುಟ್ಲಿಂಗು ಕೋಪದಲ್ಲಿದ್ದಾಗ ಪಮ್ರೇಶಿ ಮಾತಾಡ್ಸೋದೇ ಹೀಗೆ.  ಇಲ್ಲಾಂದ್ರೆ ಪುಟ್ಲಿಂಗೂನ ಇಹಕ್ಕೆ ಕಕ್ರೊಂಡು ಬರೋಕ್ಕಾಗಲ್ಲ ಅನ್ನೋದು ಇವನಿಗೆ ಚೆನ್ನಾಗಿ ಗೊತ್ತಿತ್ತು.  ಏನ್ ಕಡಿಮೇ ಸ್ನೇಹವೇ ಇವರದು?  ವಿಕ್ರಮನ ಬೆನ್ನು ಬಿಡದ ಬೇತಾಳದಂತೆ, ಪಮ್ರೇಶಿ ಇವನ ಮುಖಕ್ಕೆ ಕೈಹಚ್ಚಿ ಇವನತ್ತ ಬಲವಂತವಗಿ ತಿರುಗಿಸಿಕೊಳ್ಳುತ್ತಾ “ಇಲ್ರಿ ಹೇಳೋ ತಮ್ಮ, ಅಂಥಾದ್ದೇನಾದ್ರೂ ಇದ್ರೆ ನಾನೂ ಹೆಲ್್ಪ ಮಾಡ್ತೀನಿ” ಎಂದ.  ಪÅಟ್ಲಿಂಗು ಕಣ್ಣು ಕೆಂಪಗಿತ್ತು.  “ಓಹೋ, ವಿಷ್ಯ ಸೀರಿಯಸ್ಸಾಗಿದೆ, ಪುಟ್ಮಲ್ಲಿ ಜೊತೆ ಎಲ್ಲೋ ಜಗಳವಾಡಿರಬೇಕು ಎಂದುಕೊಂಡ ಪಮ್ರೇಶಿ, ಅವನ ಹೆಗಲಮೇಲೆ ಕೈಹಾಕಿ ಪಕ್ಕದಲ್ಲೇ ಇದ್ದ ಪಾಕ್ರಿಗೆ ಕರೆದೊಯ್ದ.  ಅಲ್ಲಿದ್ದ ಒಂದು ಕಲ್ಲಿನ ಬೆಂಚಿನ ಮೇಲೆ ಕುಳಿತು ಅವನನ್ನೂ ತನ್ನ ಬಳಿಗೆ ಸೆಳೆದುಕೊಂಡು ಪಕ್ಕದಲ್ಲೇ ಕೂಡಿಸಿಕೊಂಡ.  ಸ್ವಲ್ಪಹೊತ್ತು ಮೌನ.  ಮಾತಿಲ್ಲ, ಕಥೆುಲ್ಲ.  ಪಮ್ರೇಶಿಯೂ ಸುಮ್ಮನಿದ್ದ.
 
ಪುಟ್ಲಿಂಗು: “ಅಲ್ಲ ಕಣಣ್ಣ ಈ ನನ್ಮಕ್ಳೀಗೇನಾರಾ ಮಾನಾ ಮವ್ರಾದೇ ಐತಾ ಅಂತ?”
 
ಸಧ್ಯ...ಇದು ಮನೆವಿಷ್ಯ ಅಲ್ಲ, ಬೇರೇ ಯಾರಿಗೋ ಗ್ರಹಚಾರ ಕೆಟ್ಟಿದೆ ಅಂದುಕೊಂಡ ಪಮ್ರೇಶಿ, “ಯಾಕೋ ಏನಾಯ್ತು? ಯಾರು ಏನು ಮಾಡಿದರು?” ಎಂದ.
 
ಪುಟ್ಲಿಂಗು:  “ಅಲ್ಲಣ್ಣ, ಇವ್ರಿಗೆ ನಾವು ಓಟ್ಹಾಕಿ ಗೆಲ್ಸಿ, ನೆಟ್ಗೆ ದೇಸ ಆಳ್ರೋ ಅಂತ ಬುಟ್ರೆ, ಇಂಗಾ ಮಾಡೋದು?”
 
“ಓಹೋ..ಇದು ರಾಜಕೀಯದವರ ಮೇಲಿನ ಕೋಪ.  ಇವತ್ತೇನು ಈಕಡೆ ತಿರುಗಿಬಿಟ್ಟಿದೆ ಮನಸ್ಸು ಯಜಮಾನ್ರುದು?” ಎಂದುಕೊಂಡ ಪಮ್ರೇಶಿ, “ಯಾಕಪ್ಪ ಯಾರು ಏನು ಮಾಡಿದ್ರು ನಿಂಗೆ?”
 
ಪುಟ್ಲಿಂಗು:  “ಅವ್ರು ನಂಗೇನ್ ಮಾಡಾರು ಪಿಂಡ? ಇಡೀ ದೇಸಾನ ನುಂಗಿ, ಗುಡ್ಸಿಗುಂಡಾತ್ರ ಮಾಡ್ತಾವ್ರಲ್ಲಣ್ಣೋ” ಎಂದ.
 
ಪಮ್ರೇಶಿ:  “ಇದೇನು ಹೊಸ್ದಾ? ಸ್ವಾತಂತ್ರ ಬಂದಾಗ್ಲಿಂದಾ ಅಗ್ತಾಇರೋದು ಇದೇ ತಾನೇ”?
 
ಪುಟ್ಲಿಂಗು:  “ಅಂಗಾರೇ ನೀಯೇಳೋದು....ಆವಾಗ್ನಿಂದಾ ದೇಸಾ ದೋಚ್ತಾವ್ರೇ ಅಂತಾನಾ?”
 
ಪಮ್ರೇಶಿ:  “ಇಲ್ವಾ ಮತ್ತೇ? ಅವ್ರು ಶುರು ಮಾಡಿದ್ರು, ಇವ್ರು ಮುಕ್ತಾಯ ಹಾಡ್ತಾಇದಾರೆ ಅಷ್ಟೆ.  ಆಗಿನೋರಿಗೆ ಸ್ವಲ್ಪಾನಾದ್ರೂ ದೇಶ, ಜನಹಿತದ ಬಗ್ಗೆ ಕಾಳಜಿ ಇತ್ತು.  ಈಗಿನೋರಿಗೆ ಏನೂ ಇಲ್ಲ, ತಾವು, ತಮ್ಮವ್ರು ಚೆನ್ನಾಗಿದ್ರೆ ಮುಗೀತು, ದೇಶ, ಜನ ಹ್ಯಾಗಾದ್ರೂ ಹಾಳಾಗಿ ಹೋಗ್ಲಿ, ಆಷ್ಟೇ.  ಅದಕ್ಕೆ ನೀನ್ಯಾಕೋ ಇಷ್ಟೋಂದು ತಲೆ ಕೆಡ್ಸಿಕೊಂಡಿದೀಯಾ”?
 
ಪುಟ್ಲಿಂಗು:  “ಎಲ್ಲಾ ಇಂಗೇ ಅಂದ್ಬುಟ್ಟು ಕೈಬುಟ್ಬುಟ್ರೆ ಎಂಗಣ್ಣೋ, ಈ ದೇಸದ ಗತಿ?”
 
ಪಮ್ರೇಶಿ:  “ನಮ್ ಕೈಲಿ ಏನಾಗುತ್ತೋ ಪÅಟ್ಲಿಂಗು, ಈಗ ರಾಮ್ದೇವ್ನೇ ತೊಗೋ...ಭ್ರಷ್ಟಾಚಾರ ವಿರೋಧ ಚಳುವಳಿ ಮಾಡಿ, ನೈಟಿಹಾಕ್ಕೊಂಡು ತಪ್ಪಿಸ್ಕೊಳೋಕ್ಕೆ ನೋಡಿದ್ರು.  ಆಮೇಲೆ ಏನಾಯ್ತು, ಅವರ ಸುದ್ದೀನೇ ಇಲ್ಲ.  ಆಮೇಲೆ ನಮ್ ಅಣ್ಣ ಹಜಾರೆ ಬಂದ್ರು. ಏನೋ ಆಗೋಗುತ್ತೆ ಅಂದ್ಕೊಂಡು ಜನ ಎಲ್ಲಾ ಅವ್ರಿಗೆ ಜಯ್ಕಾರ ಹಾಕ್ಕೋಂಡು ಹಿಂದೊದ್ರು.  ಏನಾಗೋಯ್ತು?”  ಯಾರೋ ಬತ್ರಾರೆ, ಏನೋ ಮಾಡ್ತಾರೆ ಅನ್ನೋ ಭ್ರಮೆ ಬಿಟ್ಟು ನಾವು ಬದಲಾಗದ ಹೊರತು, ಈ ರಾಷ್ಟ್ರಕ್ಕೆ ಭವಿಷ್ಯ ಇಲ್ಲಕಣೋ, ನಾ ಹೊಡ್ದಂಗ್ ಮಾಡ್ತೀನಿ, ನೀ ಅತ್ತಂಗ್ ಮಾಡು ಅಂತ ಇವೆಲ್ಲಾ”
 
ಪುಟ್ಲಿಂಗು:  “ಅಂಗಂದ್ರೇ ನೀಯೇಳೋದು, ಅಣ್ಣ ಹಜಾರೇನೂ ಅವ್ರಜೊತೆ ಸೇಕ್ರೊಂಡ್ಬಿಟ್ಟವ್ರೆ ಅಂತಾನಾ”?
 
ಪಮ್ರೇಶಿ:  “ಛೆ..ಛೇ..ಅಣ್ಣ ಹಜಾರೇನಾ ಅನುಮಾನ್ಸೋದೂ ಒಂದೇ, ನಮ್ ಲಾಲ್ಬಹಾದ್ದೂರ್ ಶಾಸ್ತ್ರಿಯವರನ್ನ ಅನುಮಾನಿಸುವುದೂ ಒಂದೇ.  ಅದಲ್ಲಾ ನಾ ಹೇಳೋದು.  ಹಜಾರೆ ಉಪವಾಸ ಮಾಡಿದಾಗ ಇವ್ರು ನಿದ್ದೆುಂದ ಎದ್ದೇಳ್ತಾರೆ.  ಇಗೋ ಮಾಡ್ದೆ, ಅಗೋ ಮಾಡ್ದೆ ಅಂತ ಕಾಲಾ ಕಳೀತಾರೆ, ಆಮೇಲೆ ಹಜಾರೇನೂ ಮಲುಕ್ಕೋತಾರೆ, ಸಕ್ರಾರನೂ ಮಲಗುತ್ತೆ, ಅಷ್ಟೇ”
 
ಪುಟ್ಲಿಂಗು:  “ಅಲ್ಲ ಕಣಣ್ಣೋ ಅದೇನೋ, ‘ಜನ್ ಲೋಕ್ಪಾಲ್ ಬಿಲ್’ ಅಂತೆ, ಅದು ಬಂದ್ಬುಟ್ರೆ ಇವ್ರೆಲ್ಲಾ ದುಡ್ಡು ತಿನ್ನೋಕಾಗಾಕಿಲ್ವಂತೇ, ನಿಜಾನಾ”?
 
ಪಮ್ರೇಶಿ:  “ಹೇಳೋವ್ರು ಮುಟ್ಟಾಳ್ರಾದ್ರೆ, ಕೇಳೋ ನೀನೂ ಮುಟ್ಟಾಳಾನಾ”?
 
ಪುಟ್ಲಿಂಗು:  “ಯಾಕಣ್ಣೋ? ನಾ ಯಾಕೆ ಮುಟ್ಟಾಳ ಆಗ್ಲಿ”?
 
ಪಮ್ರೇಶಿ:  “ಇನ್ನೇನು ಮತ್ತೆ, ಕೈಯೂ ಕೊಟ್ಟು, ಕೋಳಾನೂ ಕೊಡ್ತಾರೇನ್ರೀ ಯಾರಾದ್ರೂ? ಆಗೋ ಮಾತಾ ಇದೂ?”
 
ಪುಟ್ಲಿಂಗು:  “ಅಂಗಂದ್ರೆ”?
 
ಪಮ್ರೇಶಿ:  “ಈಗಾ ಅಣ್ಣಾ ಹಜಾರೇ ಲೋಕ್ಪಾಲ್ ನಲ್ಲಿ ಪ್ರಧಾನ ಮಂತ್ರೀನ ಬೇಕಾದ್ರೂ ತನಿಖೆ ಮಾಡಬಹುದು ಅಂತ ಇದೆ, ಇದಕ್ಕೆ ಅವಕಾಶ ಕೊಟ್ಟಾರಾ ಅವ್ರು”?  ಎಲ್ಲಾ ಪಬ್ಲಿಕ್ ಸವ್ರೆಂಟ್ಸೂ ಇದರ ಪರಿಮಿತಿಯಲ್ಲಿರಬೇಕು ಅಂತ ಇವರು, ಇಲ್ಲ ಬೇಡ ಸೀನಿಯರ್ ಆಫೀಸಸ್್ರ ಮಾತ್ರ ಸಾಕು ಅಂತ ಅವರು, ಸಿ.ಬಿ.ಐ. ನ ಇದ್ರಲ್ಲಿ ಸೇರಿಸಿಬಿಡೋಣ ಅಂತ ಇವ್ರು, ಬೇಡ ಅದು ಹಾಗೇ ಇಲ್ರಿ ಅಂತ ಅವ್ರು.  ಶ್ರೀಸಾಮಾನ್ಯ ಯಾರೇ ಅದ್ರೂ ಭ್ರಷ್ಟಾಚಾರಿಗಳ ವಿರುದ್ಢ ಕೇಸ್ ಹಾಕ್ಬೋದು ಅಂತ ಇವ್ರು, ಅದೆಲ್ಲಾ ಇಲ್ಲ, ಯಾರು ಪೀಡಿತರೋ ಅವರು ಮಾತ್ರ ಹಾಕಬೇಕು ಅಂತ ಅವ್ರು.  ಹೀಗೇ ನೂರೆಂಟು ಭಿನ್ನಾಭಿಪ್ರಾಯಗಳಿವೆ.  ಇದೆಲ್ಲಾ ಅಗೋದಲ್ಲಾ, ಹೋಗೋದಲ್ಲ.” 
 
ಪುಟ್ಲಿಂಗು:  “ಅಂಗಾದ್ರೇ ಈ ‘ಜನ್ ಲೋಕ್ಪಾಲ್ ಬಿಲ್’ ಜಾರೀಯಾಗೋದಿಲ್ಲಾ ಅನ್ನು”
 
ಪಮ್ರೇಶಿ: “ಜಾರೀ ಆದ್ರೂ ಅಷ್ಟೇ, ಕಾಪಾಡೋವ್ನಿಗೆ ಒಂದು ದಾರಿ ಆದ್ರೆ, ಹೊಡ್ಯೋರಿಗೆ ನೂರುದಾರಿ, ಇವ್ರು ರಂಗೋಲಿ ಕೆಳಗೆ ತೂರಿದರೆ, ಅವ್ರು ಭೂಮಿಯೊಳಗೇ ತೂರಿಬಿಡ್ತಾರೆ”
 
ಪುಟ್ಲಿಂಗು:  “ಮತ್ತೆ ಇದಕ್ಕೆ ಕೊನೆ?”
 
ಪಮ್ರೇಶಿ:  “ಮಾಸ್ಟರ್ ಹಿರಣ್ಣಯ್ಯನೋರು ಗೊತ್ತಾ ನಿಂಗೆ?”
 
ಪುಟ್ಲಿಂಗು:  “ಏನ್ ಮಾತೂ ಅಂತಾ ಕೇಳ್ತೀಯಣ್ಣೋ? ಕನ್ರಾಟಕ್ದಾಗೆ ಇರಣ್ಣಯ್ನೋರು ಯಾಗ್ರೆ ಗೊತ್ತಿಲ್ಲ ಏಳೂ ಮತ್ತೆ?”
 
ಪಮ್ರೇಶಿ:  ಕರೆಕ್್ಟ, ಬಹಳ ವಷ್ರಗಳ ಕೆಳಗೇನೇ ಹೇಳಿದ್ರು, ನಾನು ಆರಿಸಿರೋ ಎಲ್ಲಾ ನಾಟಕದ ವಿಷಯವೂ ಎಂದೂ, ಎಂದೆಂದೂ ನಿವಾರಿಸಲಾಗದಂತಹ ಸಮಸ್ಯೆಗಳೇ.  ಭ್ರಷ್ಟಾಚಾರ, ಲಂಚಾವತಾರ, ದೇವದಾಸಿ, ಮಠಾವತಾರ, ಫೆÇೀನಾವತಾರ ಹೀಗೇ ಈ ಎಲ್ಲದರಿಂದುಂಟಾಗುವ ಸಮಸ್ಯೆಗಳೂ ನಿರಂತರ, ಇದಕ್ಕೆ ಕೊನೆುಲ್ಲ.  ಎಲ್ಲಿಯವರೆಗೂ ನಾವು ಎಚ್ಚೆತ್ತುಕೊಳ್ಳೋಲ್ಲ ಅಲ್ಲಿಯವರೆಗೂ ಇದು ಹೀಗೇ ಮುಂದುವರಿಯುತ್ತಾ ಹೋಗುತ್ತೆ, ಒಂದುದಿನ ದೇಶ ಸತ್ತು ಹೋಗುತ್ತೆ ಇಲ್ಲ ಪರಕೀಯರ ಪಾಲಾಗುತ್ತೆ, ಅಂತ.  ಅವತ್ತೂ ಜನ ಅದನ್ನ ಕೇಳಿ ಚಪ್ಪಾಳೆ ಹೊಡುದ್ರೇ ವಿನಾ, ಬದಲಾಗಲಿಲ್ಲ.  ಇವತ್ತೂ ಇದಕ್ಕೆ ಚಪ್ಪಾಳೆ ಹೊಡೀತಾರೇ ಬಿಟ್ರೆ, ಬದಲಾಗಲ್ಲ.
 
ಪುಟ್ಲಿಂಗು:  “ಅಂದ್ರೇ, ನೀನು...ಆವತ್ತು... ನಾವು ಫ್ರೀಡಂ ಪಾರ್ಕ್ ನಿಂದಾ ಬರೋವಾಗ ಡ್ರೈವಿಂಗ್ ಲೈಸೆನ್ಸ್ ಇಲ್ಲಾ ಅಂತ ಟ್ರಾಫಿಕ್ ಪೋಲೀಸ್‍ಗೆ ನೂರ್ ರೂಪಾಯ್ಕೊಟ್ಯಲ್ಲಾ ಆಥರಾನಾ?”
 
ಪಮ್ರೇಶಿಗೆ ತನ್ನ ಮೇಲೆ ತನಗೇ ನಾಚಿಕೆಯಾಗಿತ್ತು. ತಗ್ಗಿಸಿದ ತಲೆ ಮೇಲೆತ್ತಲಿಲ್ಲ.  ವಿದ್ಯಾವಂತರೇ ಹೀಗಾದರೇ ಇನ್ನು ಅವಿದ್ಯಾವಂತರ ಪಾಡೇನು.  ನಾವಾಗೇ ಲಂಚ ನೀಡಬಹುದಾದ ಒಂದು ಸಣ್ಣ ಉದಾಹರಣೆಯಷ್ಟೇ ಇದು.  ಕೊಟ್ಟು ಕಲಿಸಿದವರು, ನಾವು, ಇನ್ನು ಬೇಡ ಎಂದರೇ ಬಿಟ್ಟಾರೇ? ಇಂತಹವರಿಂದ ದೇಶ ಉಳಿದೀತೇ? “ದೇವರೇ ಗತಿ!”
 
 
  ಫೋಟೋ ಕೃಪೆಃ  www.pitara.com (The Rich Man's Vessels)
 
-ಎಂ.ಎಸ್.ಮುರಳಿಧರ್, ಶಿರಾ.
Rating
No votes yet

Comments