ಬೇಸಿಗೆಯ ಬೆಸುಗೆ
ಕವನ
ಓ ಬೇಸಿಗೆ..ಏನಿದು ನಿನ್ನ ಬೆಸುಗೆ..
ನಿನ್ನ ಬಿಸಿಯ ಬೇಗೆಗೆ ನೇಸರನು ನೆತ್ತಿಗೇರಿದ್ದಾನೆ,
ಮಳೆಯು ಹೆದರಿ ಅವಿತು ಕುಳಿತಿದ್ದಾನೆ,
ಗಾಳಿಯೋ ನಿನ್ನ ಅನುಮತಿ ಇಲ್ಲದೇ ಸೋಕಲು ತಯಾರಿಲ್ಲ,
ಗಿಡಮರಗಳು ಅಲುಗಾಡದೆ ಮೌನವಾಗಿವೆ,
ಆಹಾ ಬೇಸಿಗೆ, ಏನಿದು ನಿನ್ನ ಬೆಸುಗೆ...
ಮಕ್ಕಳೋ ಶಾಲೆಗೆ ವಿದಾಯ ಹೇಳಿದ್ದಾರೆ,
ಯುವತಿಯೋ ಹೆದರಿ ಕೊಡೆಯ ಆಸರೆ ಹಿಡಿದಿದ್ದಾಳೆ,
ಎಲ್ಲರೂ ನಿನಗೆ ಸೋತು ದಣಿದು ಬಾಯಾರಿ
ನೀರಿನ ದಾಹಕ್ಕೆ ಬೆವರಿಳಿಸಿ ಓಡುತ್ತಿದ್ದಾರೆ,
ಆಹಾ ಬೇಸಿಗೆ, ಏನಿದು ನಿನ್ನ ಬೆಸುಗೆ..
ಹೊರಗೆ ದುಡಿವ ನೌಕರರಿಗೆ ನೀ ಬೇಡ,
ಮನೆಯಲಿ ಕೆಲಸ ಮಾಡಿ ದಣಿವ ವನಿತೆಯರಿಗೆ ನೀ ಬೇಡ,
ಯುವತಿಯರ ಅಂದಕ್ಕೆ ಹಾನಿ ಮಾಡುವೆ ಎಂಬ ಬಾಲೆಯರಿಗೆ ನೀ ಬೇಡ,
ಆದರೂ ನಿನ್ನ ಆಗಮನವ ಎದುರು ನೋಡುವ ಪುಟ್ಟ ಪೋರ ಪೋರಿಯರಿದೋ
ಗೆಳೆಯ ಗೆಳತಿಯರೊಡನೆ ಆಡಲು ಬೇಸಿಗೆ ರಜೆಗೆ ಕಾಯುತ್ತಿದ್ದಾರೆ,
ಆಹಾ ಬೇಸಿಗೆ , ಪುಟ್ಟ ಹ್ರುದಯಗಳ ಗೆದ್ದ ನಿನ್ನ ಬೆಸುಗೆ ಸುಮಧುರ..