ನನ್ನ ಪ್ರೀತಿ ಹಾಡು.
ಕವನ
ನಾ ಬರೆಯ ಹೊರಟ, ಪ್ರೀತಿ ಹಾಡಿನಲಿ
ನಿನ್ನದೆ ಬಹು ಸಾಲುಗಳು.
ನಾನು-ನೀನು ಸೇರಿಸಿದ ಸಾಲುಗಳು
ಪ್ರೀತಿ-ಪ್ರೇಮದ ಗಣಿಗಳು.
ಕಂಡ ಕನಸುಗಳು ಪದಗಳಾಗಿ,
ಸಾಲಲಿ ಬೆಚ್ಚಗೆ ಕುಳಿತವು.
ನಮ್ಮ ಪ್ರೀತಿಯ ಮಧುರ ಕ್ಷಣಗಳು,
ಸಾಲು ಸಾಲಲಿ ಬೆರೆತವು.
ನೀ ದೂರಾದ ಸಮಯ,
ಸೇರಿಲ್ಲ ಮತ್ತ್ಯಾವ ಸಾಲು.
ನಿನ್ನ ನೆನಪುಗಳು ಹೊತ್ತು ತಂದಿವೆ,
ಸಾವಿರಾರು ಸವಿನೆನಪ ಸಾಲುಗಳ,
ಅಕ್ಕರೆಯ ಸಾಲುಗಳು, ಸೇರಿವೆ ಪ್ರೀತಿ ಹಾಡು.
ಪ್ರೀತಿ ಹಾಡಲಿ, ನೀ ಎಂದಿಗು ಹತ್ತಿರ,
ನಮ್ಮ ಪ್ರೀತಿ ಶಿಖರದೆತ್ತರ
ಅಂದು, ಇಂದು, ಎಂದೆಂದು.