ಒಂದಷ್ಟು ಪ್ರಣಾಮಗಳು
ಕವನ
ಸೃಷ್ಟಿಯೇ ಒಂದು ದೇವಲೋಕ.
ಅದರೊಳು ನಮ್ಮ ಇರುವಿಕೆ
ಪರಮಾತ್ಮನನ್ನು ಸ್ಪರ್ಷಿಸಿದಂತೆ
ಕಳ್ಸೆಳೆವ ವಿಂಗಮ ನೋಟಗಳು
ಬೆರಗು ಮೂಡಿಸುವ ಕಂದರ ಕಣೆವೆಗಳು
ಅದ್ಭುತ ಅದಮ್ಯ ರಹಸ್ಯತಾಣಗಳನ್ನು
ಮನಸಾರೆ ಸವಿಯುವಂತ ಅಧೃಷ್ಟ
ನಮಗಲ್ಲದೆ ಮತ್ಯಾರಿಗೆ ?
ಇಂಥ ಸೃಷ್ಟಿಯ ಸೊಬಗನ್ನು
ರಮ್ಯ ಮನೋಹರ ಚಲುವನ್ನು
ಯಾವ ಪದದಿಂದ ವರ್ಣಿಸಿದರೂ ಸಾಲದು
ಕೋಟಿ ಬಹುಮಾನಗಳನ್ನು ಕೊಟ್ಟರೂ
ಕಿಂಚಿತ್ತೂ ತುಂಬಲಾಗದು
ಆದರೂ
ಇಂಥ ಅದ್ಭುತ ಸೃಷ್ಟಿಯ ಕರ್ತನಿಗೆ
ಒಂದಷ್ಟು ಪ್ರಣಾಮಗಳನ್ನಾದರೂ
ಸಲ್ಲಿಸಿ ಸುಮ್ಮನಾಗುತ್ತೇನೆ
ಇದಕ್ಕಿಂತ ಹಿರಿದಾಗ ಬಹುಮಾನ
ನನ್ನ ಬಳಿಯಿಲ್ಲ.
Comments
ಉ: ಒಂದಷ್ಟು ಪ್ರಣಾಮಗಳು
In reply to ಉ: ಒಂದಷ್ಟು ಪ್ರಣಾಮಗಳು by venkatb83
ಉ: ಒಂದಷ್ಟು ಪ್ರಣಾಮಗಳು