ಪ್ರೀತಿ ಆವರಿಸಿತಾ!?
ಕವನ
ಪ್ರತಿ ಹನಿ ಹನಿಯಲ್ಲೂ
ನಿನ್ನ ಮೊಗವೆ ಕಾಣಲೂ
ಮಂಗಾರಿನ ಮಳೆಯಲಿ ನೆನೆಯುತಾ
ನನಗೂ ಪ್ರೀತಿ ಆವರಿಸಿತಾ!?
ಅರಸಿದೆ ಕಂಗಳು
ನಿನ್ನನು ಕಾಣಲು
ಎಲ್ಲೆಡೆ, ನಿನ್ನ ಹುಡುಕುತಾ
ನನಗೂ ಪ್ರೀತಿ ಆವರಿಸಿತಾ!?
ನಿನ್ನ ನಗುವಿನ ಬೆಳದಿಂಗಳಿಗೆ
ಚಂದಿರನು ನಾಚಿ ಸರಿದ ಮೊಡದ ಮರೆಗೆ
ಚಂದಿರನಲ್ಲಿ ನಿನ್ನ ಕಾಣುತಾ
ನನಗೂ ಪ್ರೀತಿ ಆವರಿಸಿತಾ!?
ನಿನ್ನ ನೆನಪು ಬಂದಾಗ ಹಾಗೆ
ತುಟಿಯಂಚಲಿ ಮೂಡುವುದು ಕಿರುನಗೆ
ಸುಮ್ಮನೆ ಓಬ್ಬನೇ ನಗುತ್ತಾ
ನನಗೂ ಪ್ರೀತಿ ಆವರಿಸಿತಾ!?
ನಿನ್ನ ಬಗ್ಗೆ ಆಲೋಚಿಸುತಿದ್ದೆ
ಬರಲಿಲ್ಲ ಹಸಿವು ನಿದ್ದೆ
ಹಗಲಿರುಳೂ ನಿನ್ನ ಧ್ಯಾನಿಸುತಾ
ನನಗೂ ಪ್ರೀತಿ ಆವರಿಸಿತಾ!?
ಗುಳಿ ಕೆನ್ನೆಯ ಚಲುವೆ
ನನ್ನ ಹೃದಯವ ಕದ್ದಿರುವೆ
ನಿನದೆ ಕನಸು ಕಾಣುತಾ
ನನಗೂ ಪ್ರೀತಿ ಆವರಿಸಿತಾ!?
ಹೇಳಿ ಕೊಳ್ಳಲಾಗದ ಯಾತನೆ
ಪ್ರೀತಿಯೆಂಬ ಈ ಭಾವನೆ
ಗೆಳತಿ ಉತ್ತರಿಸು ನೀ ನಗುತ್ತಾ
ನನಗೂ ಪ್ರೀತಿ ಆವರಿಸಿತಾ!?
ನಿನ್ನ ಮೊಗವೆ ಕಾಣಲೂ
ಮಂಗಾರಿನ ಮಳೆಯಲಿ ನೆನೆಯುತಾ
ನನಗೂ ಪ್ರೀತಿ ಆವರಿಸಿತಾ!?
ಅರಸಿದೆ ಕಂಗಳು
ನಿನ್ನನು ಕಾಣಲು
ಎಲ್ಲೆಡೆ, ನಿನ್ನ ಹುಡುಕುತಾ
ನನಗೂ ಪ್ರೀತಿ ಆವರಿಸಿತಾ!?
ನಿನ್ನ ನಗುವಿನ ಬೆಳದಿಂಗಳಿಗೆ
ಚಂದಿರನು ನಾಚಿ ಸರಿದ ಮೊಡದ ಮರೆಗೆ
ಚಂದಿರನಲ್ಲಿ ನಿನ್ನ ಕಾಣುತಾ
ನನಗೂ ಪ್ರೀತಿ ಆವರಿಸಿತಾ!?
ನಿನ್ನ ನೆನಪು ಬಂದಾಗ ಹಾಗೆ
ತುಟಿಯಂಚಲಿ ಮೂಡುವುದು ಕಿರುನಗೆ
ಸುಮ್ಮನೆ ಓಬ್ಬನೇ ನಗುತ್ತಾ
ನನಗೂ ಪ್ರೀತಿ ಆವರಿಸಿತಾ!?
ನಿನ್ನ ಬಗ್ಗೆ ಆಲೋಚಿಸುತಿದ್ದೆ
ಬರಲಿಲ್ಲ ಹಸಿವು ನಿದ್ದೆ
ಹಗಲಿರುಳೂ ನಿನ್ನ ಧ್ಯಾನಿಸುತಾ
ನನಗೂ ಪ್ರೀತಿ ಆವರಿಸಿತಾ!?
ಗುಳಿ ಕೆನ್ನೆಯ ಚಲುವೆ
ನನ್ನ ಹೃದಯವ ಕದ್ದಿರುವೆ
ನಿನದೆ ಕನಸು ಕಾಣುತಾ
ನನಗೂ ಪ್ರೀತಿ ಆವರಿಸಿತಾ!?
ಹೇಳಿ ಕೊಳ್ಳಲಾಗದ ಯಾತನೆ
ಪ್ರೀತಿಯೆಂಬ ಈ ಭಾವನೆ
ಗೆಳತಿ ಉತ್ತರಿಸು ನೀ ನಗುತ್ತಾ
ನನಗೂ ಪ್ರೀತಿ ಆವರಿಸಿತಾ!?
....ಆವರಿಸಿತಾ....!?
Comments
ಉ: ಪ್ರೀತಿ ಆವರಿಸಿತಾ!?
In reply to ಉ: ಪ್ರೀತಿ ಆವರಿಸಿತಾ!? by makara
ಉ: ಪ್ರೀತಿ ಆವರಿಸಿತಾ!?
ಉ: ಪ್ರೀತಿ ಆವರಿಸಿತಾ!?
In reply to ಉ: ಪ್ರೀತಿ ಆವರಿಸಿತಾ!? by venkatb83
ಉ: ಪ್ರೀತಿ ಆವರಿಸಿತಾ!?