ಶಾರದೆಯ ಮದುವೆ ಮತ್ತು ದೆವ್ವ ‍ ‍‍- ೩ ಮುಕ್ತಾಯ

ಶಾರದೆಯ ಮದುವೆ ಮತ್ತು ದೆವ್ವ ‍ ‍‍- ೩ ಮುಕ್ತಾಯ

ಮೊದಲ ಭಾಗ http://sampada.net/blog/%E0%B2%B6%E0%B2%BE%E0%B2%B0%E0%B2%A6%E0%B3%86%E0%B2%AF-%E0%B2%AE%E0%B2%A6%E0%B3%81%E0%B2%B5%E0%B3%86-%E0%B2%AE%E0%B2%A4%E0%B3%8D%E0%B2%A4%E0%B3%81-%E0%B2%A6%E0%B3%86%E0%B2%B5%E0%B3%8D%E0%B2%B5-%E2%80%8D-%E2%80%8D%E2%80%8D-%E0%B3%A7/16/04/2012/36399

 ಎರಡನೆ ಭಾಗ http://sampada.net/blog/%E0%B2%B6%E0%B2%BE%E0%B2%B0%E0%B2%A6%E0%B3%86%E0%B2%AF-%E0%B2%AE%E0%B2%A6%E0%B3%81%E0%B2%B5%E0%B3%86-%E0%B2%AE%E0%B2%A4%E0%B3%8D%E0%B2%A4%E0%B3%81-%E0%B2%A6%E0%B3%86%E0%B2%B5%E0%B3%8D%E0%B2%B5-%E2%80%8D-%E2%80%8D%E2%80%8D-%E0%B3%A8/18/04/2012/36428

 

ಆರೋಗ್ಯ ಸ್ವಲ್ಪ ಸರಿ ಇಲದಿದ್ದರ ಕಾರಣ ಭಾಗ - ೩ ಸ್ವಲ್ಪ ನಿಧಾನ ವಾಯ್ತು ಅದಕ್ಕಾಗಿ ಬೇಸರಿಸದೆ ಓದುತ್ತಿರುವ ತಮಗೆ ನಾನು ಚಿರ ಋಣಿ. ತಮಗಾಗಿ ಮುಕ್ತಾಯದ ಭಾಗ.

ಮದುವೆ ಮನೆಯಲ್ಲಿ ಸಂಪೂರ್ಣ ಮೌನ ನೆಲೆಸಿದೆ. ಊರಿನ ಜನಕ್ಕೆಲ್ಲ ಇದೇನು ಮೇಷ್ಟ್ರ ಪರಿಸ್ಥಿತಿ ಹಿಗಾಯ್ತಲ್ಲ ಎಂಬ ವೇದನೆ. ನರಸಿಂಹ ಮೂರ್ತಿಗಳಿಗೆ  ನಿಂತಿರುವ ಜಾಗದ ಭೂಮಿಯೆ ಬಾಯ್ಬಿಟ್ಟಿತೇನೊ ಎನ್ನುವಷ್ಟು ಆಘಾತವಾಗಿದೆ. ಅಳುತ್ತಿರುವ ಲಲಿತಮ್ಮನವರನ್ನು ಹೆಂಗಸರು ಸಮಾಧಾನ ಮಾಡುತ್ತಿದ್ದಾರೆ.

ಎಚ್ಚರಗೊಂಡು ಹಸೆ ಮಣೆಯ ಮೇಲೆ ಕುಳಿತಿದ್ದ ಶಾರದ ಕಣ್ಣೀರಿಡುತ್ತಾ, ಮೇಲೇಳುವುದನ್ನು ನೋಡಿ ಹನುಮಂತ ಶಾಸ್ತ್ರಿಗಳು,

- ಏಳ ಬೇಡ ತಾಯಿ, ಇಟ್ಟಿರುವ ಮಹೂರ್ತದ ಗಳಿಗೆ ಇನ್ನೂ ಮುಗಿದಿಲ್ಲ. ವೀರಾಂಜನೇಯ ಸ್ವಾಮಿ ಕಟ್ಟಿ ಕೊಟ್ಟಿರುವ ಮಹೂರ್ತ, ಅದಕ್ಕೆ ಅವನೆ ಜವಾಬ್ದಾರಿ. ಹಸೆ ಮಣೆಯಿಂದ ಮೇಲೇಳ ಬೇಡ. -

ಶಾಸ್ತ್ರಿಗಳ ವಾಣಿ ಘಂಟಾ ಘೋಷದಂತೆ ಮೊಳಗಿತು, ಎಲ್ಲೆಲ್ಲೂ ಮೌನ ನೆಲೆಸಿದೆ. ಸೇರಿರುವ ಜನರೆಲ್ಲ ಒಬ್ಬರಿಗೊಬ್ಬರು ಮುಖ ಮುಖ ನೋಡಿಕೊಳ್ಳುತ್ತಿದ್ದಾರೆ. ಇದೇನು ಶಾಸ್ತ್ರಿಗಳು ಹೀಗೆ ಹೇಳುತ್ತಿದ್ದಾರೆ. ಮದುವೆಗೆ ಬಂದಿರುವ ಗಂಡಿನ ಕಡೆಯವರು ಮದುವೆ ಸಾಧ್ಯವಿಲ್ಲ ಎಂಬ ಮಾತನ್ನು ಕಡ್ಡಿ ಎರಡು ತುಂಡು ಮಾಡಿದಂತೆ ಹೇಳಿದ್ದಾರೆ, ಹೀಗಿರುವಾಗ ಮದುವೆ.....?? ಹೇಗೆ.....?!!?? ಏನು...??!!!!?, ಅನ್ನುವ ಗೊಂದಲದಲ್ಲಿದ್ದಾರೆ.

ಮೌನವಾಗಿ ಕಣ್ಣು ಮುಚ್ಚಿ ಕುಳಿತಿದ್ದಾರೆ ಶಾಸ್ತ್ರಿಗಳು.  ಶಾಸ್ತ್ರಿಗಳ ಆಘ್ಞಾಧಾರ ನುಡಿಗೆ ತಲೆ ಬಾಗಿ ಹಸಮಣೆಯಿಂದ ಏಳಲು ಹೊರಟಿದ್ದ ಶಾರದ ಹಾಗೆಯೆ ಕುಳಿತು, ತಲೆ ಬಗ್ಗಿಸಿ ಕಣ್ಣೀರಿಡುತ್ತಿದ್ದಾಳೆ.

ತನ್ನ ಈ ಪರಿಸ್ಥಿತಿಗೆ ನಾನೆ ಕಾರಣಳಾ...?!!? ಅಥವ ಇದೇನಾಗುತ್ತಿದೆ ನನ್ನ ಮನಸ್ಸಿಗೆ ಎಂಬುದೆ ನನಗೆ ತಿಳಿಯುತ್ತಿಲ್ಲವೇ..??...? ಇದ್ದಕ್ಕಿದ್ದ ಹಾಗೆ ಎಲ್ಲಾ ನನ್ನ ಅಧೀನ ತಪ್ಪುತಿದೆ..!!?. ಏನೊ.. ಒಂದು ರೀತಿಯ ಭ್ರಮೆ.. ಬಳಲಿಕೆ. ಏಕೆ ಹೀಗಾಗುತ್ತಿದೆ, ಶಾರದೆಯ ತಲೆಯಲ್ಲಿ ನೂರೆಂಟು ವಿಚಾರಗಳು ಗಿರಕಿ ಹೊಡೆಯುತ್ತಿದೆ.

ಎರಡು ನಿಮಿಷ ಕಳೆದಿದೆ, ಕಣ್ಣು ಮುಚ್ಚಿ ಕುಳಿತ್ತಿದ್ದ ಶಾಸ್ತ್ರಿಗಳು ಒಮ್ಮೆಗೆ ತಮ್ಮ ಕಣ್ಣನ್ನು ತೆರೆದು, ದೊಡ್ಡ ಧ್ವನಿಯಲ್ಲಿ ಎಲ್ಲರಿಗೂ ಕೇಳುವಂತೆ ಉದ್ಘೋಷಿಸಿದರು,

- ಹ್ಮು.... ಅವನು ಬಂದ.. -

ಎಲ್ಲರಿಗೂ ಆಶ್ಚರ್ಯ, ಯಾರು ಬಂದದ್ದು,....!!! ಎಲ್ಲಿ ಬಂದದ್ದು...?!!?.

ಮಂಟಪದ ಬಳಿ ಕುಳಿತಿದ್ದ ಶಾಸ್ತ್ರಿಗಳು, ಎದುರಿಗಿದ್ದ ಛತ್ರದ ಮುಖ್ಯ ದ್ವಾರದ ಕಡೆ ಗಕ್ಕನೆ ಕತ್ತು ತಿರುಗಿಸಿ ನೋಡಿದರು. ಎಲ್ಲರೂ ಅತ್ತ ದೃಷ್ಠಿ ಹರಿಸಿ ನೋಡಿದರು.

ಛತ್ರದ ಮುಖ್ಯ ದ್ವಾರದ ಬಳಿ ನಿಂತಿದ್ದಾನೆ ನಂಜುಂಡ,.... ನಂಜುಂಡ ಸ್ವಾಮಿ.

ಸೇರಿರುವ ಊರಿನ ಜನಸ್ತೋಮಕ್ಕೆ ಆಶ್ಚರ್ಯ, ಅರೆ ಇದ್ದಕ್ಕಿದ್ದ ಹಾಗೆ ಎಲ್ಲಿಂದ ಪ್ರತ್ಯಕ್ಷವಾದ ಈ ನಂಜುಂಡ, ಹೇಳಿ ಕೇಳಿ ಮೇಷ್ಟ್ರ ಮನೆ ಮದುವೆಗೆ ಬಂದಿದ್ದಾನಲ್ಲ. ಇನ್ನೇನು ಜಗಳ ಪ್ರಾರಂಭವಾಗುತ್ತದೋ ಎಂದೆಣಿಸಿ, ಕೌತಕದಿಂದ ನೋಡುತ್ತಿದ್ದರು

ದೂರದಿಂದ ಒಂದೇ ಉಸುರಿಗೆ ಓಡಿ ಬಂದಿರುವ ಕಾರಣ, ಧೀರ್ಘ ಮತ್ತು ವೇಗವಾದ ಉಸಿರಾಟ ನಡೆಸಿರುವ ನಂಜುಂಡನ ಹರವಾದ ಎದೆ, ಕುಲುಮೆಯ ತಿದಿಯಂತೆ ಮೇಲೆದ್ದು ಇಳುತ್ತಿದೆ.

ಬಾಗಿಲಲ್ಲಿ ನಿಂತಿದ್ದ ನಂಜುಂಡ, ಅತ್ತ ಇತ್ತ ಕುಳಿತ್ತಿದ್ದ ಜನಗಳ ಮಧ್ಯ ನಡೆಯುತ್ತಾ, ದಿಟ್ಟ ಹೆಜ್ಜೆಗಳನ್ನಿಟ್ಟು, ಕ್ಷಣಾರ್ಧದಲ್ಲಿ ಮದುವೆ ಮಂಟಪದ ಹಸೆಮಣೆ ಬಳಿಗೆ ತಲಿಪಿದ್ದ. ಸ್ವಲ್ಪವೂ ನಿಧಾನ ಮಾಡದೆ, ನರಸಿಂಹ ಮೂರ್ತಿಗಳಿಗೆ ನಮಸ್ಕರಿಸಿ ಮೇಲೆದ್ದವನೆ,

- ಮಾವ ನಿಮ್ಮ ಮತ್ತು ಶಾರದೆಯ ಅಭ್ಯಂತರವಿಲ್ಲದಿದ್ದರೆ, ನಾನು ಅವಳಿಗೆ ತಾಳಿ ಕಟ್ಟಲು ಸಿದ್ಧ, ಯೋಚನೆ ಮಾಡಬೇಡಿ, ಶಾರದಳನ್ನು ನನ್ನ ಕಣ್ಣಿನಲ್ಲಿಟ್ಟು ಸಾಕುತ್ತೇನೆ. ಇದಕ್ಕೆ ನನ್ನ ಆರಾಧ್ಯ ದೈವ ವೀರಾಂಜನೇಯ ಸ್ವಾಮಿಯೆ ಸಾಕ್ಷಿ. - ಎಂದ ನಂಜುಂಡ.

ನರಸಿಂಹ ಮೂರ್ತಿಗಳು ಹನುಮಂತ ಶಾಸ್ತ್ರಿಗಳ ಕಡೆ ನೋಡಿದರು, ಏನು ಮಾಡಲಿ ಎಂಬಂತಿತ್ತು ಅವರ ಕಣ್ಣೋಟ. ಮುಂದುವರಿ ಎಂಬ ಸೌಂಜ್ಞೆ ಇತ್ತರು ಶಾಸ್ತ್ರಿಗಳು. ಲಲಿತಮ್ಮನವರೆಡೆ ನೋಡಿದರು ಮೂರ್ತಿಗಳು, ದಯವಿಟ್ಟು ಬೇಗ ಒಪ್ಪಿಗೆ ಕೊಡಿ ಎಂಬಂತಿತ್ತು ಅವರ ಕಣ್ಣೊಳಗಿನ ಮಾತುಗಳು. ಶಾರದೆ ತನ್ನ ಕಣ್ಣು ವರೆಸಿಕೊಂಡು ಸರಿಯಾಗಿ ಕುಳಿತಳು.

- ನರಸಿಂಹ ಮೂರ್ತಿ, ಮಹೂರ್ತ ಮೀರುತ್ತಿದೆ, ಏನು ಯೋಚಿಸುತ್ತಿದ್ದೀಯ..? ಅಪ್ಪಣೆ ಕೊಡು. ಇದು ಸ್ವಾಮಿಯ ಚಿತ್ತ ಬೇಗ.. ಹ್ಮು... - ಅಧಿಕಾರ ವಾಣಿಯಂತಿತ್ತು ಶಾಸ್ತ್ರಿಗಳ ಮಾತುಗಳು.

ಮರು ಮಾತನಾಡದ ನರಸಿಂಹ ಮೂರ್ತಿಗಳು ಹಸೆಮಣೆ ಏರುವಂತೆ ನಂಜುಂಡನಿಗೆ ಸೂಚಿಸಿದರು.

ಮರುಕ್ಷಣದಲ್ಲೆ ಪುರೋಹಿತರು,
 - ಹ್ಮು... ತಾಳಿ ತಗೋಪ್ಪ ನಂಜುಂಡ ಮಹೂರ್ತ ಮೀರುತ್ತಿದೆ.. ಗಟ್ಟಿಮೇಳ... ಗಟ್ಟಿಮೇಳ..,
ಮಾಂಗಲ್ಯಂ ತಂತು ನಾನೇನ ಮಮ ಜೀವನ ಹೇತುನಾಂ... ಕಂಟೆ ಭದ್ರಾನಿ ಶುಭದಾಂ.... -

 ನೆರೆದಿರುವ ಜನರಿಗೂ ಆನಂದ, ಸಧ್ಯ ನಿಂತಿದ್ದ ಮದುವೆ ನೆರವೇರಿತಲ್ಲ ಎಂಬ ಸಂಭ್ರಮದಲ್ಲಿ ಭರದಿಂದ ಅಕ್ಷತೆ ಕಾಳನ್ನು ಹಾಕಿ ವದು ವರರಿಗೆ ಆಶೀರ್ವದಿಸುತ್ತಿದ್ದರು. ಕೆಲವರು ಸಂತೋಷದಿಂದ ಬಂದ ಕಣ್ಣೀರನ್ನು ಮರೆಯಲ್ಲಿ ವರೆಸಿಕೊಂಡರು.

ನರಸಿಂಹ ಮೂರ್ತಿ ದಂಪತಿಗಳ ಮುಖದಲ್ಲಿ ಸ್ವಲ್ಪ ಗೆಲುವು ಕಂಡು ಬಂತು. ಈ ಮಧ್ಯೆ ನಂಜುಂಡನ ಅಪ್ಪ ವಿಶ್ವನಾಥ ರಾಯರು ಗುಂಪಿನಲ್ಲಿ ಸೇರಿ ಅಕ್ಷತೆ ಹಾಕಿ ಮಗ ಸೊಸೆಯನ್ನು ಆಶೀರ್ವದಿಸಿದ್ದನ್ನು. ಕೆಲವರು ಮಾತ್ರ ಗಮನಿಸಿದ್ದರು.

ಮಂಟಪದ ಬಳಿ ಬಂದ ವಿಶ್ವನಾಥ ರಾಯರು ನರಸಿಂಹ ಮೂರ್ತಿಗಳ ಬಳಿ ಸಾರಿ,

- ನೋಡು ನರಸಿಂಹ ಮೂರ್ತಿ ಹಿಂದೆ ನಡೆದಿದ್ದನೆಲ್ಲ ಒಂದು ಕನಸು ಎಂದು ಭಾವಿಸಿ ಮರೆತುಬಿಡು, ಆಗಿದ್ದು ಆಗಿ ಹೋಯ್ತು. ಜೊತೆಗೆ ನಮಗೂ ವಯಸ್ಸಾಯ್ತು. ನಮ್ಮ ಮಕ್ಕಳಿಗೇಕೆ ಆ ವಿಷವನ್ನು ಬಿಟ್ಟು ಹೋಗಬೇಕು ಅಲ್ವಾ...? ಯೋಚನೆ ಮಾಡು. ಎಷ್ಟೋ ವರ್ಷಗಳಿಂದ ದೂರವಾಗಿರುವ ನಮ್ಮ ಮನೆತನಗಳು, ಮನಸ್ಸುಗಳು ಈ ನೆವದಿಂದಾದರೂ ಬೆರೆಯಲಿ. ಇದು ಪರಮಾತ್ಮ ಕಲ್ಪಿಸಿರುವ ಸುಯೋಗ. ನಮ್ಮ ಮಕ್ಕಳು ನಮ್ಮ ಕಣ್ಣಮುಂದೆ ಚೆನ್ನಾಗಿ ಬಾಳಲಿ.
ಈ ಮನೆತನಗಳ ವೈಷಮ್ಯದ ಕೊರಗಿನಲ್ಲೆ ನಿನ್ನ ಅಕ್ಕ..., ನನ್ನ ಹೆಂಡತಿ ಕೊನೆಯುಸಿರೆಳೆದಳು.   ಕೊನೆಯವರಗೂ ನನ್ನ ತವರು ನನಗಿಲ್ಲವಾಯ್ತು ಎಂದು ನೊಂದು ಕೊಳ್ಳುತ್ತಿದ್ದಳು. ಈ ಮದುವೆಯಿಂದ ಅವಳ ಆತ್ಮಕ್ಕೂ ತೃಪ್ತಿ. -

ನರಸಿಂಹ ಮೂರ್ತಿಗಳೂ ಅದಕ್ಕೆ ತಲೆಯಾಡಿಸುತ್ತಾ,

- ಅಗಲಿ ದೈವೀಚ್ಛೆ, ಋಣಾನುಬಂಧ ಹೀಗಿದ್ದರೆ ಅದರಲ್ಲಿ ನನ್ನದೇನು. ಸಧ್ಯ ಬಂದ ಕಂಟಕ ಹಾಗೆ ಪರಿಹಾರವಾಯ್ತಲ್ಲ, ಸಂತೋಷ. -

- ನರಸಿಂಹ ಮೂರ್ತಿ ಇದು ಆ ನನ್ನ ವೀರಾಂಜನೇಯ ಸ್ವಾಮಿಯ ಸಂಕಲ್ಪ. ಹ್ಮು ಇನ್ನು ನೀನು ಬಂದಿರುವ ಅತಿಥಿಗಳನ್ನು ಗಮನಿಸು,  ಎಲ್ಲರಿಗೂ ಒಳ್ಳೆಯದಾಗಲಿ. -

ಶುಭಂ ಎನ್ನುವಂತೆ ಶಾಸ್ತ್ರಿಗಳು ತಮ್ಮ ಮಾತನ್ನು ಮುಗಿಸಿದರು.........................
.................................................................................
ಅರೆರೆ... ನೀವೇನು ಮುಂದೆ ಓದಿಕೊಂಡು ಬರ್ತಾನೆ ಇದ್ದೀರಲ್ಲ....??..? ಆಯ್ತಲ್ಲ, ನಿಂತಿದ್ದ ಶಾರದೆಯ ಮದುವೆ, ಮತ್ತಿನ್ನೇನು....??!!?. ಓ... ಈ ನಂಜುಂಡ ಯಾರು ಅಂತ ಕೇಳ್ತಿದ್ದೀರಾ.?

ಅದು ನಂಜುಂಡನ ಅಪ್ಪ ವಿಶ್ವನಾಥ ರಾಯರ ಮಾತಿಂದ ಅರ್ಥವಾಗಿದೆಯಲ್ಲ...!! ಅವನು ನರಸಿಂಹ ಮೂರ್ತಿಗಳ ಅಕ್ಕನ ಮಗ ಅಂದರೆ ಶಾರದೆಯ ಸೋದರತ್ತೆ ಮಗ.. ಅಂತ.
ಓ.... ಇದ್ದಕಿದ್ದ ಹಾಗೆ ಹೇಗೆ ಬಂದ ಅಂತ ಅನುಮಾನಾನಾ.......??

ಅದೇನಪ್ಪ ಅಂದ್ರೆ, ಈ ವಿಶ್ವನಾಥ ರಾಯರ ಮನೆಯವರಿಗೂ ಮತ್ತು ನರಸಿಂಹ ಮೂರ್ತಿಗಳ ಮನೆಯವರಿಗೂ, ಅವರ ತಾತಂದಿರ ಕಾಲದಲ್ಲಿ ಜಮೀನಿನ ವಿಷಯದಲ್ಲಿ ವ್ಯಾಜ್ಯವಾಗಿ ಹಗೆತನ ಬೆಳೆದು, ಮನೆ ಮನೆಯವರ ನಡುವೆ ಮಾತು ನಿಂತು ಹೋಗಿತ್ತು.

ವಿಷಯ ಹೀಗಿರುವಾಗ ನರಸಿಂಹ ಮೂರ್ತಿಗಳ ಅಕ್ಕ, ವಿಜಯಮ್ಮ ತನ್ನ ತಂದೆ ತಾಯಿಯ ಮಾತನ್ನು ದಿಕ್ಕರಿಸಿ, ವಿಶ್ವನಾಥ ರಾಯರನ್ನು ಇಷ್ಟ ಪಟ್ಟು ಮದುವೆಯಾಗಿದ್ದರು. ಅಂದಿನಿಂದ ವಿಜಯಮ್ಮನಿಗೆ ತವರಿನ ಸಂಬಂಧ ಪೂರ್ತಿಯಾಗಿ ಕಡಿತಗೊಂಡಿತ್ತು. ತನ್ನ ಯಜಮಾನರು, ವಿಶ್ವನಾಥ ರಾಯರಲ್ಲಿ, ಮತ್ತು ಶಾರದೆಯನ್ನು ಇಷ್ಟ ಪಡುವ ಮಗ ನಂಜುಂಡನಲ್ಲಿ, ತನ್ನ ತವರು ನನಗೆ ಇಲ್ಲವಾಯ್ತೆ? ಎಂಬ ಕೊರಗನ್ನು ಎಷ್ಟೋ ಸಾರಿ ತೋಡಿಕೊಂಡಿದ್ದರು. ಕೊನೆಗೆ ಅದೆ ಕೊರಗಿನಲ್ಲಿ ಇಹ ಲೋಕ ತ್ಯಜಿಸಿದ್ದರು.

ಇನ್ನು ಶಾರದೆಗಿಂತ ಮೂರು ವರ್ಷ ದೊಡ್ಡವನಾದ ನಂಜುಂಡನಿಗೆ, ಚಿಕ್ಕ ವಯಸ್ಸಿನಿಂದಲೂ ಶಾರದೆ ಎಂದರೆ ಅಕ್ಕರೆ ಪ್ರೀತಿ, ನಡುವೆ ಮನೆತನ ವೈಷಮ್ಯದ ತಡೆ ಗೋಡೆ.
ಈ ವಿಷಯದಲ್ಲಿ, ಒಂದು ವೇಳೆ ತನ್ನ ತಂದೆಯನ್ನು ಒಪ್ಪಿಸುವ ಭರವಸೆ ಇದ್ದರೂ, ತನ್ನ ಮಾವನ ಎದುರು ನಿಲ್ಲಲು ಭಯವಿತ್ತು, ಅಂತೆಯೆ ಶಾರದ ಏನೆಂದಾಳೋ..? ಎಂಬ ಅಳುಕೂ ಇತ್ತು.

ಶಾರದೆಗೆ ಬೆಂಗಳೂರಿನ ಗಂಡು ಗೊತ್ತಾಯು ಎಂಬ ವಿಷಯ ತಿಳಿದು ಅವನ ಸ್ನೇಹಿತರೆಲ್ಲ,

- ನೋಡು ನಂಜುಂಡ, ನಿನ್ನ ಶಾರದೆಗೆ ಬೇರೆ ಗಂಡು ಗೊತ್ತಾಗಿದೆ ಕಣೋ, ಈಗಲಾದರೂ ನಿನ್ನ ಮಾವನ ಬಳಿ ಮಾತಾಡೋ, ನಾವೆಲ್ಲ ಜೊತೆಗಿದ್ದೇವೆ. - ಎಂದಾಗ,

- ಬೇಡ ಬಿಡ್ರೊ, ನನ್ನ ಶಾರದ ನನ್ನ ಹಣೆಯಲ್ಲಿ ಬರೆದಿಲ್ಲ ಅಂತ ಕಾಣುತ್ತೆ. ಒಂದು ವೇಳೆ ಕೇಳಿದಾಗ ಇಲ್ಲ ಅಂತ ನಮ್ಮ ಮಾವ ತುಂಡರಿಸಿ ಬಿಟ್ರೆ ನಮ್ಮ ತಂದೆಗೂ ನೋವಾಗುತ್ತೆ, ಮೊದಲೆ ಅವರು ಸೂಕ್ಷ್ಮ ಮನಸ್ಸಿನವರು. ಈ ಮನೆತನದ ಜಗಳದಿಂದಾಗಿ ಅಮ್ಮನನ್ನು ಕಳೆದು ಕೊಂಡಿದ್ದೇನೆ. ಮತ್ತ್ಯಾವುದೆ ಅನಾಹುತ ಆಗುವುದು ಬೇಡ. ಎಲ್ಲಿದ್ದರೂ ನನ್ನ ಶಾರದ ಚೆನ್ನಾಗಿದ್ದರೆ ಸಾಕು, ಅವಳ ನೆನಪಿನಲ್ಲೆ ಜೀವನ ಕಳೆದು ಬಿಡುತ್ತೇನೆ. _ ಅಂದು ಬಿಟ್ಟ ನಂಜುಂಡ.

ಅಂದು ಮದುವೆ ನಡೆಯುತ್ತಿದ್ದಾಗ, ಮದುವೆಗೆ ಊರಿನ ಎಲ್ಲರಿಗೂ ಆಹ್ವಾನವಿತ್ತಿದ್ದರೂ ವಿಶ್ವನಾಥ ರಾಯರ ಮನೆಯನ್ನು ಬಿಟ್ಟಿದ್ದರು, ನರಸಿಂಹ ಮೂರ್ತಿಗಳು. ಕಾರಣ ಊರಿನಲ್ಲಿ ತಂದೆಯ ಪ್ರತಿಷ್ಠೆ ಕಾಪಾಡುವ ಜವಾಬ್ದಾರಿ ಅವರದಾಗಿತ್ತು.

 ಊರಿನ ಒಳಗೆ ಛತ್ರದಲ್ಲಿ ಶಾರದಳ ಮದುವೆ ನಡೆಯುತ್ತಿದ್ದಾಗ, ಊರಮುಂದಿನ ಗುಡಿಯಲ್ಲಿ ತನ್ನ ಶಾರದಳ ಬಾಳು ಹಸನಾಗಿರಲಿ ಎಂದು ಪ್ರಾರ್ಥಿಸುತ್ತಾ, ಆರಾಧ್ಯ ದೈವ ವೀರಾಂಜನೇಯ ಸ್ವಾಮಿ ಗುಡಿಯಲ್ಲಿ ಕುಳಿತ್ತಿದ್ದ ನಂಜುಂಡ. ದನ ಕಾಯುವ ಗೊಲ್ಲರ ಕೃಷ್ಣ ಓಡಿ ಬಂದವನೆ ನಂಜುಂಡನ ಮುಂದೆ ನಿಂತು,

- ಅಯ್ನೋರೆ ಸತ್ರದ ತವ ಜನ ಮಾತಾಡ್ತಾ ಅವ್ರೆ, ಮತ್ತೆ ಸಾರ್ದಕ್ಕನ ಮದ್ವೆ ನಿಂತೋಗೈತಂತೆ. ಮಂಟ್ಪದಾಗೆ ಸಾರ್ದಕ್ಕ ಒಂತರ ಆಡಿ ಬಿದ್ಬಿಟೈತಂತೆ, ಅದ್ಕೆ ಗಂಡ್ನೋರು ಮದ್ವೆ ಬ್ಯಾಡ ಅಂದೌರಂತೆ, ನೀವೀಗ್ಲೆ ಬಿರ್ನೆ ಸತ್ರಕ್ಕೆ ಬನ್ನಿ, ನಿಮ್ಮ ಸಂಗಡಗಾರ್ರೆಲ್ಲ ಅಲ್ಲೆ ಅವ್ರೆ. ಹ್ಮು... ನಿಮ್ಗೆ ಈ ವಿಷ್ಯ ಹೇಳಕಂತಾನೇ ಓಡ್ಬಂದೆ. -

ಈ ಮಾತುಗಳು ಕಿವಿಗೆ ಬಿದ್ದೊಡನೆ, ಗಾಂಢೀವಿಯ ಶಬ್ಧವೇದಿ ಶರದಂತೆ ಗುಡಿಯಿಂದ ಹೊರಟವನು ಕ್ಷಣಮಾತ್ರದಲ್ಲಿ ಛತ್ರದ ಬಾಗಿಲಲ್ಲಿ ಕಾಣಿಸಿಕೊಂಡಿದ್ದ. ಇನ್ನು ಮುಂದುನದು ತಮಗೆ ಗೊತ್ತೆ ಇದೆ... ಸರಿ ನಾನಿನ್ನು ಬರ್ಲಾ...??... ಹ್ಮು ಮತ್ತೆ ಯಾವುದಾದರು ಕಥೆ ನನ್ನ ಗಮನಕ್ಕೆ ಬಂದರೆ ನಿಮ್ಮೊಂದಿಗೆ ಹಂಚಿ ಕೊಳ್ಳುತ್ತೇನೆ......ಬೈ.. ಮತ್ತೆ ಸಿಗೋಣ............ಯಾಕೆ..?? ಯಾಕೆ.!!?, ಎಳೆದು ನಿಲ್ಲಿಸುತ್ತಿದ್ದೀರ....??.. ಏನಂದ್ರಿ..?? ಆ ಮಾಧವಿ ದೆವ್ವ ಯಾವ್ದು ಅಂತ ಕೇಳ್ತಿದ್ದೀರ.
ನೋಡಿ ಈ ದೆವ್ವ ಗಿವ್ವ ಎಲ್ಲ ನನಗೆ ಗೊತ್ತಾಗೋಲ್ಲ. ಅದರ ಬಗ್ಗೆ ತಿಳ್ಕೋಬೇಕು ಅನ್ನೊ ಕುತೂಹಲ ನಿಮಗಿದ್ರೆ ಈ ಕೆಳಗಿನ ಘಟನೆಯನ್ನು ಹೇಳಿ ಬಿಡುತ್ತೇನೆ ಕೇಳಿ.

ಮದುವೆಯಾಗಿ ಒಂದೆರಡು ತಿಂಗಳು ಕಳೆದಿದೆ. ವಿಶ್ವನಾಥ ರಾಯರಿಗಂತು, ತಮ್ಮ ಮಗನ ಮದುವೆಯಾಗಿ, ಅವರ ಹೆಂಡತಿಯ ತವರಿನ ಕಡೆಯ ಸೊಸೆ ಬಂದದ್ದು ಸಂತೋಷ ತಂದಿತ್ತು, ಏಕೆಂದರೆ ಈ ರೀತಿಯಲ್ಲಾದರೂ ತಮ್ಮ ಹೆಂಡತಿಯ ಆತ್ಮಕ್ಕೆ ಶಾಂತಿ ಸಿಕ್ಕಿತಲ್ಲ ಎಂಬ ಸಮಾಧಾನದಿಂದ. ಅವರು ದುಡಿಮೆಯನ್ನು ನಂಬಿ ಬದುಕಿದವರು. ದುಡಿಮೆಯೆ ದೇವರು ಅನ್ನುವ ತತ್ವ ಹೊತ್ತು, ಕಾಲ ಕಾಲಕ್ಕೆ ಆಗಬೇಕಾದ ಕೆಲಸದ ಬಗ್ಗೆ ಗಮನ ಕೊಡುವವರೆ ಹೊರತು ದೇವಸ್ಥಾನಕ್ಕೆ ಹೋದವರಲ್ಲ.

ತನ್ನ ತವರಿನಿಂದ ತನ್ನ ವಸ್ತುಗಳನ್ನು ಹೊತ್ತು ತಂದಿದ್ದ ಶಾರದ, ತನ್ನ ಮಾವನ ಮನೆಯಲ್ಲಿ ಒಪ್ಪವಾಗಿ ಜೋಡಿಸಿಟ್ಟಿದ್ದಳು. ಆದರೆ ಇತ್ತೀಚೆಗೆ ತಾಯಿಯ ಮನೆಗೆ ಹೋಗಿ ಬಂದ ಶಾರದ, ಫ಼ೋಟೋ ಒಂದನ್ನು ತಂದು, ದಂಪತಿಗಳು ಮಲಗುವ ತಮ್ಮ ರೂಮಿನಲ್ಲಿ,  ಗೋಡೆಗೆ ತೂಗು ಹಾಕಿದ್ದಳು. ಅದು ಬೇರೆ ಯಾವುದೂ ಅಲ್ಲ, ಶಾರದ ಮತ್ತು ಮಾಧವಿ ಜೊತೆಯಾಗಿ ನಿಂತು ತೆಗೆಸಿ ಕೊಂಡಿದ್ದ ಫ಼ೋಟೋ. ಇದು ವಿಶ್ವನಾಥ ರಾಯರ ನಿದ್ದೆ ಕೆಡಿಸಿತ್ತು. ಮದುವೆಗೆ ಮುಂಚೆ ಶಾರದಳಲ್ಲಿ ಕಂಡು ಬಂದಿದ್ದ ತೊಂದರೆಗಳ ಬಗ್ಗೆ, ಅಲ್ಲಿಂದ ಇಲ್ಲಿಂದ ಸುದ್ದಿ ಗಾಳಿಯಲ್ಲಿ ಹರಡಿ ವಿಶ್ವನಾಥ ರಾಯರ ಕಿವಿಗೂ ಬಿದ್ದಿತ್ತು. ಈಗ ಈ ಫ಼ೋಟೋ ಅವರ ಮನೆ ಸೇರಿದ್ದು ಅವರಿಗೆ ಕಸಿವಿಸಿ ಉಂಟು ಮಾಡಿತ್ತು.

ಈ ವಿಚಾರವಾಗಿ ಮನದ ತಳಮಳವನ್ನು ತಡೆಯಲಾಗದೆ, ಶಾಸ್ತ್ರಿಗಳನ್ನು ಕೇಳೊಣವೆಂದು,  ಯಾವತ್ತು ಇಲ್ಲದ್ದು ಆ ದಿನ ಸಂಜೆ, ದೇವಸ್ಥಾನಕ್ಕೆ ಬಂದಿದ್ದರು.

 - ಅಂತೂ ನನ್ನ ಸ್ವಾಮಿ ನಿಮ್ಮ ಹೆಡೆಮುರಿ ಕಟ್ಟಿ ಇಲ್ಲಿಗೆ ತಂದೇ ಬಿಟ್ಟ ನೋಡಿ. - ಅಂದ ಶಾಸ್ತಿಗಳು, ರಾಯರ ದುಗುಡದ ಮುಖವನ್ನು ನೋಡಿ, - ಯಾಕೆ ವಿಶ್ವನಾಥ ರಾಯರೆ, ಏನೊ ಚಿಂತೆಯಲ್ಲಿದ್ದಂತಿದೆ. - ಎಂದರು.

ಶಾರದೆಯು ತಂದಿದ್ದ ಫ಼ೋಟೋ ಬಗ್ಗೆ ಹೇಳಿದಾಗ, ಶಾಸ್ತ್ರಿಗಳು ನಗುತ್ತಾ,
-..ಓ.... ಇದಾ ನಿಮ್ಮ ಸಮಸ್ಯೆ. ಅರ್ಥವಾಯ್ತು ಬಿಡಿ, ನೋಡಿ ವಿಶ್ವನಾಥ ರಾಯರೆ, ಈ ಶಾರದೆ ಮತ್ತು ಚೆನ್ನಯ್ಯನ ಮಗಳು ಮಾಧವಿ ಚಿಕ್ಕ ವಯಸ್ಸಿನಿಂದಲೂ ಜೊತೆ. ಒಬ್ಬರಿಗೊಬ್ಬರು ಬಿಟ್ಟಿರುತ್ತಿರಲಿಲ್ಲ. ಹಾಗಾಗಿ ಅವರನ್ನು ಊರಿನ ಜನರೆಲ್ಲ ಅವಳಿ ಜವಳಿ ಅಂತ ಕರೀತಿದ್ರು. ನಿಮಗೂ ಈ ವಿಷ್ಯ ಗೊತ್ತಿದ್ಯಲ್ಲ ರಾಯರೆ. -

- ಅದು ನನಗೂ ಗೊತ್ತು ಶಾಸ್ತ್ರಿಗಳೆ, ಆದರೆ ಈಗ ಸಮಸ್ಯೆ ಅದೇ ಆಗಿ ಕೂತಿದೆಯಲ್ಲ. ಅದೇನೊ ಆ ಮಾಧವಿ ಈ ಶಾರದೆಯ ಮೇಲೆ ಬರ್ತಾಳೆ ಅಂತ ಜನ ಮಾತಾಡ್ಕೋತಾ ಇದ್ದಾರೆ. ನಮ್ಮ ನಂಜುಂಡ ಏನೋ ಆತುರದಲ್ಲಿ ಮದುವೆ ಮಾಡ್ಕೊಂಬಿಟ್ಟ. ಅದೇನೋ ಸರಿ ಅನ್ಕೊಂಡು ಸುಮ್ಮನಾದೆ, ಆದ್ರೆ ಈಗ ಈ ಫ಼ೋಟೋ ತಂದಿದ್ದು ನನಗೆ ಸರಿ ಕಾಣ್ತಿಲ್ಲ. ಆದರೆ ಇದನ್ನು ಶಾರದಳಿಗೆ ಹೇಳಿದರೆ ಏನಾಗುತ್ತದೋ ಎಂಬ ಅಂಜಿಕೆ ಶಾಸ್ತ್ರಿಗಳೆ. ಅದಕ್ಕೆ ನಿಮ್ಮ ಬಳಿ ಬಂದೆ. -

- ಹ್ಮು.... ನಿಮ್ಮ ಮನಸ್ಸಿನ ಭಾವನೆಗಳು ನನಗೆ ಅರ್ಥವಾಗುತ್ತೆ ರಾಯರೆ. ಚಿಂತಿಸ ಬೇಡಿ. ಇಂಥಹ ಅನೇಕ ಘಟನೆಗಳನ್ನು ಕಂಡಿದ್ದೇನೆ. ನೀವು ನಿಶ್ಚಿಂತೆಯಿಂದಿರಬಹುದು. ಮಾಧವಿ ಮತ್ತೆ ಶಾರದಳನ್ನು ಕಾಡಲು ಸಾಧ್ಯವಿಲ್ಲ.... ಅದು ಹೇಗೆ ಅಂತ ನೀವು ಕೇಳಬಹುದು.  ಹ್ಮು..ಶಾರದ ತನ್ನ ಮನಸ್ಸಿನಲ್ಲಿ ಮಾಧವಿಯನ್ನು ತುಂಬಾ ಹಚ್ಚಿಕೊಂಡಿದ್ದಳು.  ಮಾಧವಿ ಮದುವೆಯಾಗಿ ಅವಳ ಗಂಡನ ಮನೆಗೆಂದು ಬೆಂಗಳೂರಿಗೆ ಹೋದಮೇಲೆ ಒಂಟಿಯಾದಳು. ಮಾಧವಿಯ ಗಂಡನ ಮನೆಯಲ್ಲಿ ವರದಕ್ಷಿಣೆ ಕಿರುಕುಳದಿಂದ ನೊಂದು, ಮಾಧವಿ ಆತ್ಮ ಹತ್ಯೆ ಮಾಡಿಕೊಂಡಿದ್ದು ಸೂಕ್ಷ್ಮ ಸಂವೇದಿ ಮನಸ್ಸಿನ ಭಾವನಾಜೀವಿ ಶಾರದಳನ್ನು ತೀವ್ರವಾಗಿ ಘಾಸಿಗೊಳಿಸಿತ್ತು. ಜೊತೆಗೆ ಈಗ್ಗೆ ಆರು ತಿಂಗಳ ಹಿಂದೆ ಮಾಧವಿ ಸಾಯುವುದಕ್ಕೆ ಮುಂಚೆ ಊರಿಗೆ ಬಂದಾಗ ಶಾರದಳೊಡನೆ ಮಾತನಾಡಿ, -` ನೋಡು ಬೆಂಗಳೂರಿನ ಹುಡುಗ ಅಂತ ನಮ್ಮಪ್ಪ ಮದ್ವೆ ಮಾಡ್ದ ಈಗ ನನ್ನ ಪಾಡು ಹೇಗಾಗಿದೆ. ಅದಕ್ಕೆ ಶಾರದ ನೀನು ಇಲ್ಲೆ ಸುತ್ತ ಮುತ್ತ ಯಾವುದಾದರು ಒಳ್ಳೆ ಹುಡುಗನನ್ನು ನೋಡಿ ಮದುವೆ ಮಾಡ್ಕೋ, ಚೆನ್ನಾಗಿರು,ನಿನ್ನ ಬಾಳು ನನ್ನಂತಾಗಬಾರದು. ಮತ್ತೆ ಬದುಕಿದ್ದರೆ ನಿನ್ನ ನೋಡುತ್ತೇನೆ - ಅಂದು ಹೋಗಿದ್ದಳಂತೆ, ಈ ವಿಚಾರವನ್ನು ಸಮಸ್ಯೆಗೆ ಪರಿಹಾರ ಹುಡುಕುವಾಗ, ಲಲಿತಮ್ಮ ನನಗೆ ತಿಳಿಸಿದ್ದರು.

ನರಸಿಂಹ ಮೂರ್ತಿಗಳು, ಬೆಂಗಳೂರಿನ ಗಂಡು ಗೊತ್ತು ಮಾಡಿದಾಗ, ತಂದೆಗೆ ಎದುರಾಡಲಾಗದೆ,  ನೀನು ಇಲ್ಲೆ ಯಾರನ್ನಾದರೂ ಮದುವೆಯಾಗು ನನ್ನ ಪಾಡು ನಿನಗೆ ಬೇಡ,- ಅಗಲಿದ ಮಾಧವಿಯ ಮಾತುಗಳು. ತನ್ನ ಮನಸನ್ನು ಹಂಚಿ ಕೊಳ್ಳಲು ಮಾಧವಿಯೂ ಜೊತೆಗಿಲ್ಲ. ಈಗ ಈ ಮದುವೆಗೆ ಒಪ್ಪಲೋ ಬೇಡವೋ..?? ಹೀಗೆ ಹತ್ತು ಹಲವಾರು ತೊಳಲಾಟಗಳು ಶಾರದೆಯ ಮನಸ್ಸಿನಲ್ಲಿ ಹರಿದಾಡಿ, ಸಮಸ್ಯೆಗಳಿಗೆ ಪರಿಹಾರ ಸಿಗದಾದಾಗ, ಭಾವನಾಜೀವಿ ಶಾರದೆಗೆ ಆಸರೆ ಮತ್ತು ಸಮಾಧಾನ ದೊರೆತದ್ದು ಸತ್ತು ಹೋಗಿರುವ ಮಾಧವಿ ನನ್ನೊಡನಿದ್ದಾಳೆ ಅಂದುಕೊಂಡಾಗ. ಅವಳ ಮಹಡಿಯ ಕೊಠಡಿಯಲ್ಲಿ ಅವರು ಜೊತೆಯಾಗಿ ತೆಗೆಸಿಕೊಂಡಿರುವ ಫ಼ೋಟೋದ ಕೆಳಗೆ ಗೋಡೆಯ ಮೇಲೆ, ಅದೆ ಈಗ ನಿಮ್ಮ ಮನೆಗೆ ಆಕೆ ತಂದಿರುವ ಫ಼ೋಟೋ, - `ಮಾಧವಿ` ನನ್ನನೇಕೆ ತೊರದೆ, ನೀ ನನ್ನೊಡನಿರಬಾರದಿತ್ತೆ. - ಈ ಸಾಲುಗಳನ್ನು ಓದಿದಾಗ ಶಾರದಳ ಸೂಕ್ಷ್ಮ ಸಂವೇದಿ ಮನಸ್ಸು ತೊಳಲಾಡುತ್ತಿದೆ, ಸಮತೋಲನ ಕಳೆದು ಕೊಂಡಾಗ `ಅವಳ ಆತ್ಮ ಕಂಪನಕ್ಕೆ` ಸಿಲುಕಿ, ಶಾರದಳೆ ಮಾಧವಿಯಾಗಿ ಬದಲಾಗುತ್ತಿದ್ದಾಳೆ ಎಂಬುದು ನನಗೆ ಅರ್ಥವಾಯ್ತು. ಅಂದು ಅವಳಿಗೆ ತಾಯತ ಕಟ್ಟಿ ಇನ್ನು ಮೂರು ತಿಂಗಳು ಯಾವುದೆ ಕಾರಣಕ್ಕೆ ತಾಯ ಬಿಚ್ಚಬಾರದು ಎಂದು ಆದೇಶಿಸಿದೆ, ಮದುವೆಯಾಗಿ ಗಂಡನ ಪ್ರೀತಿ ಸಿಕ್ಕರೆ ಆ ಪ್ರೀತಿಯಲ್ಲಿ ಅವಳು `ಮಾಧವಿಯನ್ನು` ಮರೆಯುತ್ತಾಳೆ ಅಂದು ಕೊಂಡಿದ್ದೆ. ಆದರೆ ನನಗೆ ಅನುಮಾನವಿತ್ತು...!!?? ಶಾರದ ಅದನ್ನು ಬಿಚ್ಚುತ್ತಾಳೆ ಎಂದು.  ಏಕೆಂದರೆ ಇಲ್ಲಿನ ವಾತಾವರಣ, ಬಿಡಲು ಅವಳಿಗೆ ಇಷ್ಟವಿದ್ದಂತಿರಲಿಲ್ಲ, ಜೊತೆಗೆ `ಮಾಧವಿಯ` ಸಾಯುವ ಮುಂಚಿನ ಮಾತುಗಳು, ಅವಳಿಂದ ಆ ಕೆಲಸ ಮಾಡಿಸಬಹುದು ಎಂಬ ಅನುಮಾನವಿತ್ತು. ಹಾಗೆಯೆ ಅವಳು ಮದುವೆ ಮನೆಯಲ್ಲಿ ಅದನ್ನು ಬಿಚ್ಚಿ ಹಾಕಿದ್ದಾಳೆ.

ಆದರೆ ಈಗ ಅವಳಿಗೆ ತನ್ನಿಷ್ಟದಂತೆ ಇಲ್ಲಿಯೆ ಗಂಡ ಸಿಕ್ಕಿದ್ದಾನೆ, ಅದರಲ್ಲಿ ಮಾಧವಿಯ ಮಾತನ್ನು ತಾನು ಮೀರಿಲ್ಲ ಎಂಬ ಸಮಾಧಾನವಿದೆ. ಇದಲ್ಲದೆ ನಂಜುಂಡ ಆಕೆಯನ್ನು ಭರಪೂರವಾಗಿ ಪ್ರೀತಿಸುತ್ತಾನೆ. ಶಾರದ ಅವನ ಪ್ರೀತಿಯಲ್ಲಿ ಮುಳುಗಿ ಮಾಧವಿಯನ್ನು ಮರೆಯುತ್ತಾಳೆ. ಅವಳಿಗೆ ಈಗ ಸರಿಯಾದ ಆಸರೆ ದೊರಕಿದ್ದಾಗಿದೆ, ಹಾಗಾಗಿ `ಮಾಧವಿ` ಶಾರದಳನ್ನು ಮತ್ತೆ ಕಾಡುವುದಿಲ್ಲ. ಇದು ವೀರಾಂಜನೇಯ ಸ್ವಾಮಿ ಸಂಕಲ್ಪಿಸಿ ನಡೆಸಿರುವ ಮದುವೆ. ಮತ್ತ್ಯಾವುದೆ ತೊಂದರೆಯಾಗುವುದಿಲ್ಲ ನಿಶ್ಚಿಂತೆಯಿಂದಿರಿ ವಿಶ್ವನಾಥ ರಾಯರೆ.

ಅಷ್ಟೆ ಅಲ್ಲ ರಾಯರೆ, ನೋಡಿ ಈ ಒಂದು ಮದುವೆ ಮಾಡಿಸಿ, ಶಾರದೆಯ ಮನಸ್ಸಿನ ಭಾವನೆಗೆ ತಕ್ಕಂತೆ, ನಂಜುಂಡನ ತ್ಯಾಗಮಯ ಪ್ರ್‍ಈತಿಯ ಮನಸ್ಸಿಗೆ ತಕ್ಕಂತೆ, ಲಲಿತಮ್ಮ ತಮ್ಮ ಮಕ್ಕಳು ತಮ್ಮೆದುರು ನೆಮ್ಮದಿಯಾಗಿರಲಿ ಅಂದುಕೊಂಡಂತೆ, ಅಂತೆಯೆ ದೂರದಬೆಟ್ಟ ಕಣ್ಣಿಗೆ ನುಣ್ಣಗೆ ಎಂಬ ಮಾತನ್ನು ನರಸಿಂಹ ಮೂರ್ತಿಗಳಿಗೆ ಅರ್ಥ ಮಾಡಿಸುವಲ್ಲಿ, ಮತ್ತು ನಿನ್ನ ಮಡದಿಯ ತವರಿನ ಸಂಬಂಧ ಬೆಸೆಯುವ ಆಸೆ ಪೂರೈಸಿದ ಸಂತಸ ನಿಮಗೆ ಕೊಡುವಲ್ಲಿ, ನನ್ನ ವೀರಾಂಜನೇಯ ಸ್ವಾಮಿ ಸಫಲನಾಗಿದ್ದಾನೆ. ಹ್ಮು...... ಅವನಿಚ್ಛೆ ಇಲ್ಲದೆ ಏನೂ ನಡೆಯದು. ಬನ್ನಿ ಅಪರೂಪಕ್ಕೆ ಸನ್ನಿಧಾನಕ್ಕೆ ಬಂದಿದ್ದೀರ ಸ್ವಾಮಿಗೆ ಮಂಗಳಾರತಿ ಮಾಡಿ ಪ್ರಸಾದ ಕೊಡುತ್ತೇನೆ. - ಮೇಲೆದ್ದರು ಶಾಸ್ತ್ರಿಗಳು.

ಶಾಸ್ತ್ರಿಗಳ ಮಾತಿನಿಂದ ಸಮಾಧಾನಗೊಂಡು ವಿಶ್ವನಾಥರಾಯರು ಮನೆಯಕಡೆ ಹೆಜ್ಜೆ ಹಾಕಿದರು. ಮನೆಯ ರಸ್ತೆಗೆ ತಿರುಗಿದ್ದೆ ತಡ ತಮ್ಮ ಮನೆಯ ಮುಂದೆ ಜನರ ಗುಂಪು ನಿಂತಿರುವುದನ್ನು ಕಂಡು ಗಾಬರಿಯಾಗಿ ಬೇಗ ಬೇಗ ಹೆಜ್ಜೆಗಳನ್ನಿಟ್ಟು....................................
...............................................................................................................................................................................................................................................................ಸಮೀಪಕ್ಕೆ ಬಂದರು.

ಮನೆಯ ಒಳಗಿನಿಂದ ಸುಶ್ರಾವ್ಯವಾಗೆ ಕೇಳಿಬರುತ್ತಿದೆ ಶಾರದಳ ಕಂಠ ಸಿರಿಯಲ್ಲಿ

`ಕೇಳನೋ.. ಹರಿ ತಾಳನೋ...... ತಾಳ ಮೇಳಗಳಿದ್ದು ಪ್ರೇಮವಿಲ್ಲದ ಗಾನ... ಕೇಳನೋ ಹರಿ ತಾಳನೋ......`

ಗಾನ ಸಿರಿಯನ್ನು ಕೇಳುತ್ತಾ ಜನಗಳ ಜೊತೆ ತಾವೂ ಮೈ ಮರೆತರು ವಿಶ್ವನಾಥ ರಾಯರು..

***************************** ಶುಭಂ ***************** ಮುಗಿಯಿತು *************



ರಾಮಮೋಹನ




 

Rating
No votes yet

Comments