ಅಮ್ಮ

ಅಮ್ಮ


ಅಮ್ಮ


ನಿನ್ನೊಳಗಿದ್ದು


ನಿನ್ನೂಟದ


ಸಾರವನೆ ಹೀರಿ


ರೂಪ ತಳೆದೆ


ನವಮಾಸ ತುಂಬಲು


ಅಸಹನೀಯ ನೋವನುಂಡು


ಇಳಿಸಿದೆನ್ನ ಇಳೆಗೆ


ದಿವ್ಯಬೆಳಕಿನೆಡೆಗೆ



 


 



 


ಅಮೃತಧಾರೆಯನುಣಿಸಿ


ವಾತ್ಸಲ್ಯದ ಸವಿಮುತ್ತ


ತುತ್ತ ನೀಡಿ


ಬೆಳೆಸಿದೆನ್ನ ಶಕ್ತಿಮೀರಿ



 


 



 


ಎಡವಿದೊಡನೆ


ಅಕ್ಕರೆಗೆ ಮುಸುಕೆಳೆದು


ಗದರಿ ಸರಿನಡೆಯ ತೋರಿ


ಕಾದೆ ಮಸುಕಾಗದಂತೆ ಬಾಳು



 


 



 


ಧೈರ್ಯವ ತುಂಬುತ


ಸವಾಲನೆದುರಿಸಲು ಕಲಿಸಿ


ಖುಷಿಯ ಹಂಚಲು


ನುಡಿಯದೆ ತಿಳಿಸಿ


ಹಾಕಿದೆ ಪ್ರೀತಿ ವಿಶ್ವಾಸದ


ಭದ್ರ ಬುನಾದಿ


ನೋವ ಮರೆಯಲಿರಿಸಿ


ನಗುವ ಮೆರೆಯಿಸಿ


ನೀ ತೇದೆ ಗಂಧದಂತೆ


ನನ್ನೇಳಿಗೆಗೆ ನೀ ಆದೆ ಏಣಿ


ಹಿರಿದು ಹಿಗ್ಗಿದೆ


ನನ್ನುನ್ನತಿಗೆ


ಅಮ್ಮಾಎನುವ


ಜೇನದನಿಗೆ ಕರಗುವ


ಕರುಣಾಮಯಿ ನೀನು


ಕಣ್ಣೆದುರಿಗಿರುವ ದೇವತೆ


ನಿನ್ನಾಶಯದಂತೆ ನಡೆವೆ


 

Rating
No votes yet

Comments