ಕಾಯಕ ಯೋಗಿ ಶ್ರೀ ಬಸವೇಶ್ವರ ಜಯಂತಿಯ ಶುಭಾಶಯಗಳು

ಕಾಯಕ ಯೋಗಿ ಶ್ರೀ ಬಸವೇಶ್ವರ ಜಯಂತಿಯ ಶುಭಾಶಯಗಳು

ಉಳ್ಳವರು ಶಿವಾಲಯ ಮಾಡುವವರು
ನಾನೇನು ಮಾಡಲಿ ಬಡವನಯ್ಯ
ಎನ್ನ ಕಾಲೇ ಕಂಭ, ದೇಹವೇ ದೇಗುಲ
ಶಿರವೇ ಹೊನ್ನ ಕಲಶವಯ್ಯ
ಕೂಡಲ ಸಂಗಮ ದೇವ ಕೇಳಯ್ಯ
ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ

ಎಂದ ಅನುಭವ ಮಂಟಪವನ್ನು ಸ್ಥಾಪಿಸಿದ ಬರವಣ್ಣನವರು ಸಮಾಜದ ಅಂಕುಡೊಂಕು ಮತ್ತು ಮೇಲು ಕೀಳಿನ ಅಂತರವನ್ನು ಜರೆಯುತ್ತ ಜಾತಿ ಮತಗಳನ್ನ ಅಳಿಸುವ ಕಾರ್ಯದಲ್ಲಿ ತೊಡಗಿ ಅಂತರಜಾತಿಯ ವಿವಾಹಗಳಿಗೆ ಪ್ರೋತ್ಸಾವನ್ನು ನೀಡಿದರು ಹಾಗೇ ಸಮಾಜದ ಆರೋಗ್ಯಕರ ಬಳವಣಿಗಗೆ ದುಡಿದ ಕಾಯಕ ಯೋಗಿಯಾದ ಬಸವಣ್ಣ.

ಲೇಸ ಕಂಡ ಮನ ಬಯಸಿ ಬಯಸಿ
ಆಶೆ ಮಾಡಿದರಿಲ್ಲ ಕಂಡಯ್ಯ
ತಾಳ ಮರಕ್ಕೆ ಕೈಯ ನೀಡಿ, ಮೇಲು ನೋಡಿ
ಗೋಣು ನೊಂದುದಯ್ಯ
ಕೂಡಲ ಸಂಗಮದೇವ ಕೇಳಯ್ಯ
ನೀನೀವ ಕಾಲಕ್ಕಲ್ಲದಿಲ್ಲ ಕಂಡಯ್ಯ.

ಎನ್ನುತ್ತ ತಮ್ಮ ಮಹತ್ ಕಾರ್ಯಗಳಿಗೆ ಸನಿಹದವರೇ ಕೇಡನ್ನುಬಯಸಿ ಬಸವ ಕುಲವನ್ನೇ ಅಳಿಸುವ ಯೋಜನೆಯನ್ನು ರೂಪಿಸುತ್ತಾರೆ. ಇದರಿಂದ ಮನನೊಂದ ಬಸವಣ್ಣನವರು 1196ರಲ್ಲಿ ಕೂಡಲಸಂಗಮಕ್ಕೆ ಮರಳಿ ಲಿಂಗೈಕ್ಯರಾಗುತ್ತಾರೆ. ಅಂದರೆ ಅವರಲ್ಲಿ "ನಮ್ಮ ಸಮಾಜಕ್ಕೆ ಬದಲಾವಣೆಯ ಅಗತ್ಯ ಬೇಕಿಲ್ಲ. ಮತ್ತಷ್ಟು ಜಾತಿ ಮತಗಳನ್ನು ಸೃಷ್ಟಿಸುತ್ತ ಮತ ಕಲಹಗಳನ್ನು ಬೆಳೆಸುವಂತ ಕಾರ್ಯವಾದರೆ ಚಾಮರವೀಸಿ ಕರೆಯುತ್ತಾರೆ" ಎಂಬ ನೋವು ಕಾಡುತ್ತದೆ.

ಒಲೆ ಹತ್ತಿ ಉರಿದರೆ ನಿಲಬಹುದು
ಧರೆ ಹತ್ತಿ ಉರಿದರೆ ನಿಲ್ಲಬಾರದು
ಏರಿ ನೀರುಂಬಡೆ ಬೇಲಿ ಕೈಯ ಮೇವಡೆ
ನಾರಿ ತನ್ನ ಮನೆಯಲ್ಲಿ ಕಳುವಡೆ
ತಾಯ ಮೊಲೆವಾಲು ನಂಜಾಗಿ ಕೊಲುವಡೆ
ಇನ್ನಾರಿಗೆ ದೂರುವೆ
ತಂದೆ ಕೂಡಲಸಂಗಮದೇವ
ನೀ ಹುಟ್ಟಿಸಿ ಜೀವನ ಭವದುಃಖಿಯ ಮಾಡಿದ ಬಳಿಕ
ಬಿಡಿಸುವರಾರುಂಟೆ?

ಎಂಬ ಪ್ರಶ್ನೆಗೆ ಉತ್ತರವನ್ನು ನಮ್ಮಲ್ಲಿ ನಾವೇ ಕೇಳಿಕೊಳ್ಳಬೇಕಾಗುತ್ತದೆ. ಒಲೆ ಹತ್ತಿ ಉರಿದರೆ ನಿಲ್ಲಬಹುದು ಆದರೆ ಭೂಮಿಯೇ ಹತ್ತಿ ಉರಿದರೆ ರಕ್ಷಣೆಗೆ ಎಲ್ಲಿ ಹೋಗುವುದು. ಕೆರೆಯೇ ನೀರನ್ನು ಕುಡಿದರೆ, ಬೇಲೇಯೇ ಎದ್ದು ಹೊಲ ಮೇಯ್ದರೆ, ತಾಯಿ ತನ್ನ ಮಗುವಿಗೆ ವಿಷವನ್ನು ಕೊಟ್ಟರೆ ನಾವು ಯಾರ ಬಳಿ ದೂರನ್ನು ಸಲ್ಲಿಸಬೇಕು. ಎಂದು ಕೂಡಲ ಸಂಗಮನಿಗೆ ತಮ್ಮ ಅತಾಶೆ, ನೋವನ್ನು ತೋರ್ಪಡಿಸಿಕೊಳ್ಳುತ್ತಾರೆ. ಹೀಗೆ ಅವರ ಪ್ರತಿಯೊಂದು ವಚನವೂ ಒಂದೊಂದು ಪರ್ವದಂತೆ ಪ್ರಶ್ನೆಯಂತೆ ನಮ್ಮನ್ನು ಕಾಡುತ್ತಾ ಸಾಗುತ್ತದೆ ಅಂಥ ಮಹಾತ್ಮನನ್ನು ಎಂದು ಕೊಂಡಾಡಿದರೂ ಸಾಲದೇನೋ...

 

Rating
No votes yet

Comments