ಹ್ಯಾಪ್ ಮೋರೆ ರಾಜಕೀಯ
ಶಿವಾಜಿ ಮಹಾರಾಜರ ಸಾಹಸ, ಸ್ಫೂರ್ತಿ, ಸ್ವಾಭಿಮಾನಗಳ ಬಗ್ಗೆ ಎರಡು ಮಾತಿಲ್ಲ. ಆದರೆ ಬೆಳಗಾವಿಯಲ್ಲಿ, ಮುಖ್ಯಮಂತ್ರಿ ಸದಾನಂದಗೌಡರು ಶಿವಾಜಿ ಮಹರಾಜರನ್ನು ಮುಂದಿಟ್ಟುಕೊಂಡು ಎಂದಿನ ಆಡಂಭರದ ಪೋಸ್ ನೀಡಿರುವುದು, ಅಸಲಿನಲ್ಲಿ ಹ್ಯಾಪ್ ಮೋರೆ ರಾಜಕೀಯವಾಗಿದೆ.
ಮರಾಠಿಗರು ತಮ್ಮ ಪದತಲಕ್ಕೆ ತೆಗೆದುಕೊಳ್ಳಲು ದಂಡೆತ್ತಿ ನಿಂತಿರುವ ತಾಣ, ಬೆಳಗಾವಿ. ಅವರನ್ನು ಓಲೈಸಲು ಶಿವಾಜಿ ಮಹರಾಜರ ಹೆಸರೆತ್ತಿಕೊಂಡು, ಅಲ್ಲಿ ಉದ್ಯಾನ, ಸ್ತಬ್ಧಚಿತ್ರ ಮಗದೊಂದನ್ನು ನಿರ್ಮಿಸುವ ಬೂಟಾಟಿಕೆ ಕನ್ನಡಿಗರ ಸೋಲಷ್ಟೇ ಅಲ್ಲ್ಲ, ಶಿವಾಜಿ ಮಹಾರಾಜರ ಸಾಹಸೀ ವ್ಯಕ್ತಿತ್ವಕ್ಕೇ ಅವಹೇಳನವಾಗುತ್ತದೆ. ಸರ್ವಜ್ಞ, ಕನಕದಾಸ, ಮಹಲಿಂಗರಂಗಾದಿ ಕನ್ನಡದ ಆಚಾರ್ಯರುಗಳನ್ನು ಮೆರೆಸಬೇಕಾದ ಸ್ಥಳ ಅದು. ಮರಾಠೀ ಪ್ರತಿಷ್ಠೆಯ ಹೆಮ್ಮೆಯ ಸಂಕೇತ ಎಂದು ಭಾವಿಸುವ ಶಿವಾಜಿ ಮಹಾರಾಜರನ್ನು ಅಲ್ಲಿ ಎತ್ತಿಹಿಡಿಯುವುದು, ಕನ್ನಡ ಸರಕಾರದ ಶರಣಾತಿ ಅಥವಾ ಪಲಾಯನ ಸೂತ್ರವಾದೀತು.
ಶಿವಾಜಿ ಮಹಾರಾಜರ ಮೌಲ್ಯಗಳ ಮೇಲೆ ಪ್ರಾಮಾಣಿಕ ಗೌರವ ಇರುವುದೇ ಆದಲ್ಲಿ, ಅದನ್ನು ತುಮಕೂರು, ಕೋಲಾರ ಅಥವಾ ಬಳ್ಳಾರಿಯಂಥಾ ಸ್ಥಳಗಳಲ್ಲಿ ಮೆರೆಸಿ.