ನಿನ್ನದೇ ಪ್ರತಿಬಿಂಬ!
ಕವನ
ಕಣ್ತೆರೆದು ನೋಡು
ಸೊಗಸಾಗಿ ಜೋಡಿಸಿದ
ಕಲ್ಲ ಸಾಲುಗಳಲಿ
ನವಿರಾಗಿ ಕೆತ್ತಿದ
ಸ್ಫುಟವಾದ ಶಿಲ್ಪಗಳನು
ತಲೆಯೆತ್ತಿ ನಿಂತ
ಸಧೃಢ ಗೋಪುರದಲಿ
ಮನುಕುಲವ ಬೆಳಗುವ
ಮಿಣುಕು ದೀವಿಗೆಯನು
ತನ್ನ ತಾನೇ ಸುಡುತ
ದೇವರ ಮುಖಾರವಿಂದವ
ಪ್ರಕಾಶಮಾನವಾಗಿ ಬೆಳಗುತಿರುವ
ಹಣತೆಯ ಧನ್ಯತೆಯನು
ಗೆಳೆಯ, ಕಣ್ತೆರೆದು ನೋಡು
ನನ್ನ ಮನದ ಗುಡಿಯಲಿ
ದೇವರನೇ ಹೋಲುವ
ನಿನ್ನದೇ ಪ್ರತಿಬಿಂಬವನು!
Comments
ಉ: ನಿನ್ನದೇ ಪ್ರತಿಬಿಂಬ!
ಉ: ನಿನ್ನದೇ ಪ್ರತಿಬಿಂಬ!