ಮಗನೆಲ್ಲಿ ಬೇರೆ ಹೋದ...
ಆತ ಬರುವ ಗತ್ತು ನೋಡಿ
ಅವ ನಮ್ಮ ಮಗನಲ್ವೆ
ಮಲ್ಲಿಗೆ ಕಂಪು ಕಾಲ್ಗೆಜ್ಜೆ ನಾದ
ನಿಮ್ಮ ಪ್ರೀತಿಯ ಸೊಸೆಯದಲ್ವೆ?
ಆಡುವ ಮಕ್ಕಳ ನಡುವೆ
ಕೈಬೀಸಿದಾತ ಪುಟ್ಟನಲ್ವೆ?
ಅಳಬೇಡ ಮುದ್ದು ಮುನ್ನ
ಇಗೊ ಈಗ ಬಂದೆ ಚಿನ್ನ
ಹೇಳ್ರೀ ಮಗನೆಲ್ಲಿ ಬೇರೆ ಹೋದ?
ಎಲ್ಲಾ ಇರುವರಿಲ್ಲೇ ಅಲ್ವಾ?
Rating