ಒಮ್ಮೊಮ್ಮೆ ಅನ್ಸುತ್ತೆ _ ೫ ( ಛಿ... ಬೆಂಗಳೂರು)

ಒಮ್ಮೊಮ್ಮೆ ಅನ್ಸುತ್ತೆ _ ೫ ( ಛಿ... ಬೆಂಗಳೂರು)

 ರಾತ್ರಿ ಬೇಗ ಮಲಗೋಣ ಎಂದರೆ 

ಬಲಪಕ್ಕದ ಮನೆಯವರು ಐ.ಟಿ. ನವರು ಅವರ ಮನೆ ಚಟುವಟಿಕೆ ಪ್ರಾರಂಬವೆ ರಾತ್ರಿ ೧೦ ರ ನಂತರ
ಜೋರು ಟೀವಿ. ರಾತ್ರಿ ಅಮೇರಿಕದಲ್ಲಿರುವ ಮಗನೊಂದಿಗೆ ಜೋರು ಮಾತು (ಅಕ್ಕ ಪಕ್ಕದ ಮನೆಗು ಕೇಳುವಂತೆ)
ಹಗಲಲ್ಲಿ ಮಾತಾಡ್ಲಿ ಅಂದರೆ ಅಲ್ಲಿ ರಾತ್ರಿಯಂತೆ ಪಾಪ ಅಮೇರಿಕದಲ್ಲಿರುವರಿಗೆ ತೊಂದರೆ
ಇಲ್ಲಿ ರಾತ್ರಿಯಾಗಿದ್ದು ತೊಂದರೆ ಆದರೆ ಪರವಾಗಿಲ್ಲ! ದಿನ ಪ್ರತಿ ಎಲ್ಲ ಮುಗಿಯುವಾಗ ರಾತ್ರಿ ಒಂದು ಘಂಟೆ 
ಈ ಕಿರಿಕಿರಿಯ ಜೋರು ಶಬ್ದದಲ್ಲಿ ನನಗೆ ನಿದ್ದೆ ಬರುವುದು ರಾತ್ರಿ ಹನ್ನೆರಡರ ನಂತರೆ 
ಮತ್ತೆ ಆ ಶನಿದೇವರ ಕತೆಯ ಕೃಪೆಯಾದಲ್ಲಿ ಕೆಲವರು ಶನಿವಾರ / ಮಂಗಳವಾರ ರಾತ್ರಿ ಪೂರ ಮೈಕ್ ಹಾಕಿ ಓದುವರೆ 
 
ಮತ್ತೆ ಬೆಳಗ್ಗೆ ಇನ್ನು ನಾಲಕ್ಕು ಘಂಟೆ ಆಗುವಂತಿಲ್ಲ 
ಎಡಪಕ್ಕದ ಮನೆ ಚಟುವಟಿಕೆ ಜೋರು, ಆ ಹೊತ್ತಿಗೆ ಬಟ್ಟೆ ಒಗೆಯುವ ರಪ್ ರಪ್ ಶಬ್ದ , ಹಾಳು ಕಾರ್ಪೊರೇಶನ್ ನೀರು ಬಿಡೋದೆ ಬೆಳಗೆ ಐದಕ್ಕೆ
 
ನನಗೆ ಬೆಳಗ್ಗೆ ಎಂಟಕ್ಕೆ ಮನೆ ಬಿಟ್ಟರೆ ರಾತ್ರಿಯೆ ಮನೆ ಹೀಗಾಗಿ ಏಕೊ ಸದಾ ನಿದ್ದೆಯದೆ ಖೋತ
"ನಿದ್ದೆಗೆಟ್ಟವನು ಬುದ್ದಿಗೆಟ್ತವನಂತೆ" ಬೆಂಗಳೂರಿನ ಜನ ಸದಾ ಬುದ್ದಿಗೆಟ್ಟವರೆ ಆಗಿರುತ್ತಾರೆ ನನ್ನಂತೆ
 
ಮನಸಿನ ಸೂಕ್ಷ್ಮಗಳನ್ನು , ಬೇರೆಯವರಿಗೆ ತೊಂದರೆ ಕೊಡಬಾರದು ಎನ್ನುವ ಸಣ್ಣ ಅಲೋಚನೆಯು ಹೊಳೆಯದವರು 
ಬೆಂಗಳೂರಿನವರು.
ಕೀಇಇಇಇಇಇಇಇಇಇಇಇ.... ಛೇ! ಸಿಗ್ನಲ್ ನಲ್ಲಿ ನಿಂತಿದ್ರು ಯಾರೋ ಪಕ್ಕದಲ್ಲಿ ಹಾರ್ನ್ ಮಾಡುತ್ತಿದ್ದಾರೆ...
ಗ್ರೀನ್ ಬಂತೇನೊ!
 
... ಛೀ...  ಳು... ಬೆಂಗಳೂರು...
Rating
No votes yet

Comments