ಐ ಪಿ ಎಲ್ ಮತ್ತೂ ಸಂಪದ ಟೀಮೂ - ೧

ಐ ಪಿ ಎಲ್ ಮತ್ತೂ ಸಂಪದ ಟೀಮೂ - ೧

ಸಂಪದ ಟೀಮ್ ಜೊತೆ ಒಂದು ಐ ಪಿ ಎಲ್ ಮ್ಯಾಚ್ ನೋಡ್ಕೊಂಡ್ ಬಂದ್ರೆ ಹೆಂಗೆ ಅಂತ ಅಂದ್ಕೊಂಡು ಎಲ್ಲರನ್ನೂ ಕೇಳೋಣ ಅಂತ ಒಬ್ಬೊಬ್ರಿಗೆ ಕಾಲ್ ಮಾಡಿದೆ. ಮೊದಲು ಪಾರ್ಥವ್ರಿಗೆ. ನಾ: ನಾಳೆ ಸಂಜೆ ಮ್ಯಾಚಿಗೆ ಹೋಗೋಣ ಸಂಪದ ಟೀಮ್ ಸಮೇತ, ಬರ್ತೀರಾ? ಪಾ: ಓ ಚಿಕ್ಕು, ಎಂಥ ಕೆಲಸ ಆಯ್ತು. ನಾನು ಆಗ್ಲೇ ಅಣ್ಣಿಗೇರಿಗೆ ಟ್ರೈನ್ ಬುಕ್ ಮಾಡಿದೀನಿ. ನೋಡೋಣ ಇನ್ನೊಂದ್ಸಲ ಹೋಗೋಕಾಗತ್ತಾ ಅಂತ ಯೋಚನೆ ಮಾಡಿ ಕ್ಯಾನ್ಸಲ್ ಮಾಡಿ ಬರೋದಕ್ಕೆ ಪ್ರಯತ್ನ ಮಾಡ್ತೀನಿ ನಾ: !@#$%&*()... (ಅಯ್ಯೋ ಪುಣ್ಯಾತ್ಮ, ನಮ್ಗೆ ಬುರುಡೆ ಬ್ಲಾಗ್ ನೋಡೇ ಒಂದು, ಎರಡು ಆಗೋ ಹಾಗೆ ಮಾಡಿದ್ದೀರಾ, ಈ ವಯಸ್ಸಲ್ಲಿ ಇದೆಂಥಾ ಹುಚ್ಚಪ್ಪಾ). ಅಲ್ಲಿಗೆ ಮತ್ತೆ ಏನಕ್ಕೆ ಹೋಗ್ತಿದೀರಾ? ೨ನೇ ವರ್ಶನ್ ತಲೆ ಬುರುಡೆಗಳು ಬಂದಿದಾವಾ? ಪಾ: ಹೂನಪ್ಪಾ, ಅದ್ಕೆ ಮತ್ತೆ ಹೋಗ್ತಿರೋದು. ನಂಗಂತೂ ಕುತೂಹಲ ತಡೆಯೋಕಾಗ್ತಿಲ್ಲ. ಯಾವಾಗ ಹೋಗ್ತೀನೋ ಅನ್ನೋ ಹಾಗೆ ಆಗಿದೆ. ಇಲ್ಲಿ ನೀನು ನೋಡಿದ್ರೆ ಮ್ಯಾಚಿಗೆ ಕರಿತಿದೀಯಾ. ನಾ: (ಅಯ್ಯೋ ಶಿವನೆ, ನಮ್ಗೆ ಬುರುಡೆ ಕಂಡ್ರೆ ಕಿತ್ಕೊಂಡು ಓಡ್ತೀವಿ ಆದ್ರೆ ಈ ಯಪ್ಪಂಗೆ ಬುರುಡೆ ನೋಡೋದಕ್ಕೆ ಈ ಲೆವೆಲ್ಲಿಗೆ ಕುತೂಹಲ ಆಗಿದ್ಯಲ್ಲಪ್ಪ) ಹಾಗಿದ್ರೆ ನೀವು ಹೋಗಿ ಬನ್ನಿ, ಅಕಸ್ಮಾತ್ ಬುರುಡೆಗಳು ಬೇರೆ ಏರಿಯಾಕ್ಕೆ ಹೋದ್ರೆ ಕಷ್ಟ. ಪಾ: ಹ್ಹ ಹ್ಹ ಹ್ಹ, ಅದೇ ಯೋಚನೆ ಮಾಡಿ ಹೇಳ್ತೀನಿ. ನಾ: ಸರಿ, ಮೊದಲನೇ ವರ್ಶನ್ ರಾಜ ಮಹಾರಾಜರ ಕಾಲದ್ದು, ೨ನೆಯದ್ದು ಯಾರದ್ದು? ಪಾ: ಸರ್ಕಾರಿ ನೌಕರರದ್ದಂತೆ ಚಿಕ್ಕು. ನಾ: ಯಪ್ಪಾ, ನೀವು ಅದೃಷ್ಟವಂತರು ಬಿಡಿ. ಒಂದು ಜನ್ಮದಲ್ಲೇ ೨ ವರ್ಶನ್ ಬುರುಡೆ ಸಂತೆ ನೋಡಿದ್ರಿ. ಪಾ: ೨ ಏನು ೩ನೆಯದ್ದು ಸಹ ನೋಡ್ತೀನಿ. ನಾ: !!!!!! ಅದ್ಯಾರದ್ದು? ಪಾ: ಸಾಫ್ಟ್ವೇರ್ ಇನ್ಜಿನಿಯರ್ಸ್ದು. ನಾ: (ಬ್ಬೆ ಬ್ಬೆ ಬ್ಬೆ ಬ್ಬೆ ಬ್ಬೆ) ಆಂ, ಏನಂದ್ರಿ? (ಇವರ್ಯಾಕೋ ನನ್ನ ಬುರುಡೆಗೆ ಕೈ ಹಾಕ್ತಿದ್ದಾರೆ), ಪಾರ್ಥವ್ರೆ ನೀವು ನಂಜೊತೆ ಬರೋದು ಬೇಡ. ನಿಮ್ಮ ಪಾಡಿಗೆ ನೀವು ಹೋಗಿಬನ್ನಿ, ಮ್ಯಾಚ್ ಇನ್ಯಾವಾಗಲಾದ್ರೂ ನೋಡ್ಬಹುದು. ಬುರುಡೆ ಮಿಸ್ ಆಗೋ ಚಾನ್ಸ್ ಇರತ್ತೆ ಅಂದು ಸಡನ್ನಾಗಿ ಕಾಲ್ ಕಟ್ ಮಾಡಿ ನಿಟ್ಟುಸಿರೆಳೆದೆ ಈ ವಯ್ಯನ್ನ ಮುಂದೆ ಭೇಟಿ ಮಾಡಬೇಕಾದಂಥ ಸಂಧರ್ಭ ಬಂದ್ರೆ ಹೆಂಗಪ್ಪ ಅಂತ ಅಂದ್ಕೊಂಡು, ಮುಂದಿನ ಕರೆ ಮಾಡಲಿಕ್ಕೆ ರೆಡಿಯಾದೆ. ಜಯಂತ್ಗೆ ಕಾಲ್ ಮಾಡಿದೆ ನಾ: ನಾಳೆ ಸಂಜೆ ಮ್ಯಾಚಿಗೆ ಹೋಗೋಣ ಟೀಮ್ ಸಮೇತ, ಬರ್ತೀರಾ? ಜ: ಇಲ್ಲ ಚಿಕ್ಕು, ನಾಳೆ ಶೂಟಿಂಗ್ ಇದೆ. ನಾ: ಅಲ್ರೀ ವೀಕೆಂಡ್ ಆರಾಮಾಗಿ ಇರೋದು ಬಿಟ್ಟು ಇದೆನ್ತಂದು ಹೊಸಾ ಕೆಲ್ಸ? ಜ: ಲಾಸ್ಟ್ ಟೈಮ್ ರಿಸೆಶನ್ ಆಯ್ತಲ್ಲ ಅದ್ಕೆ ಈ ಸಲ ಕೇರ್ಫುಲ್ ಆಗಿರೋಣ ಅಂತ. ನಾ: ಒಳ್ಳೆ ನಿರ್ಧಾರನೇ ಬಿಡಿ, ಅದಿರ್ಲಿ ಯಾವ ಫಿಲ್ಮ್ದು? ಜ: ಫಿಲಂ ಅಲ್ಲ. ರಿಯಾಲಿಟಿ ಷೋ. ನಾ: ಓಹೋ, ನೀವು ಆಗ್ಬಹುದು ಬಿಡ್ರೀ, ತಡೀರಿ ನಿಮ್ಮ ಮನೆಯವರಿಗೆ ಕಂಪ್ಲೇಂಟ್ ಮಾಡ್ತೀವಿ! ಜ: ಏನಕ್ಕೆ? ನಾ: ಅದೇ ನಿಮ್ಮೆಜಮಾನ್ರು ರಿಯಾಲಿಟಿ ಷೋ ಅಂತ ಹೋಗ್ತಾರಲ್ಲ ಅಲ್ಲೆಲ್ಲ ಹುಡ್ಗೀರು ಶಾರ್ಟ್ ಸ್ಕರ್ಟ್ ಹಾಕೊಂಡು ಬರ್ತಾರೆ, ನಿಮ್ಗೆ ಇದೆಲ್ಲಾ ಗೊತ್ತಿಲ್ವಾ ಅಂತ. ಜ: ಸುಮ್ನಿರಪ್ಪ, ಹುಳಿ ಯಾಕೆ ಹಿಂಡ್ತೀಯಾ. ಅವ್ಳಿಗೆ ಗೊತ್ತು ಆ ಷೋ ಬಗ್ಗೆ. ನಾ: ಸರಿ ಬಿಡಿ ಹಾಗೆ ಆಗ್ಲಿ. ಶೂಟಿಂಗಿಗೆ ಹೋಗಿ. ಜ: ಸರಿ ಚಿಕ್ಕು, ಇನ್ನೊಮ್ಮೆ ಮಾತಾಡ್ತೀನಿ. ಹೊರಗೆ ಮಳೆ ಬರ್ತಿದೆ ನಾನೀಗ ಮೋಡಕ್ಕೆ ನೇತಾಕೋಬೇಕು. ನಾ: ****** ನನ್ನ ಮೈಯೆಲ್ಲಾ ಬೆವರೋದಕ್ಕೆ ಶುರುವಾಯ್ತು, ಆಗಲಿ ಅಂದು ಮೊಬೈಲ್ನ ಮಂಚದ ಮೇಲೆ ಎಸೆದೆ. ಮನೆಯವರಿಗೆ ಒಂದು ಲೋಟ ಕಾಫಿ ಕೊಡು ಅಂತ ಹೇಳಿ ಸಾವರಿಸಿಕೊಳ್ಳಲು ಸೋಫಾ ಮೇಲೆ ಕುಳಿತೆ. ಕಾಫಿ ಕುಡಿದು ಮುಂದಿನ ಕರೆಗೆ ರೆಡಿಯಾದೆ (ಮೊಬೈಲ್ ಕಾಲ್ ಪ್ರೇರಣೆ ಗಣೇಶಣ್ಣನ ಲೇಖನದ ಇನ್ನೂ ಒಂದು ಕಥೆ. ಚಿತ್ರಕೃಪೆ: ಅಂತರ್ಜಾಲ )
Rating
No votes yet

Comments