ಸಬಲೆ
ಹೆಣ್ಣಾದರೇನು ಹಡೆದವ್ವಾ ನೀನು
ನೀನಿರದ ಜೀವನ ಕಾಳ್ಗಿಚ್ಚು ಕಾಣು
ನವಮಾಸ ಗರ್ಭದಲಿ ನೀನಿಟ್ಟುಕೊಂಡೆ
ಸಾವೀನ ದವಡೆಯಲು ಸಂತಸವ ಕಂಡೆ
ಸಂಸಾರ ಸಾಗರದಿ ನೌಕೆಯು ನೀನಾಗಿ
ಸೇರಿಸುವೆ ದಡಕೆಮ್ಮನು ಸರಾಗವಾಗಿ
ಕಷ್ಟಕೂಟದಲಿ ಬೆಂದರು ನೀನು
ಸ್ಪಷ್ಟ ಗುರಿಯನಿಟ್ಟು ಗೆದ್ದವಳು ಕಾಣು
ಹೆಣ್ಣಾದರೇನಾತ ನಾನಲ್ಲ ಅಬಲೆ
ಜಗದಲಿ ನಾನಿಂದು ಆಗಿರುವೆ ಸಬಲೆ
ಸಾಧನೆಯ ಹಾದಿಯಲಿ ನಾನಿಂದು ಮುಂದು
ಇದಕಿಲ್ಲ ಜೀವನದಿ ಕೊನೆಯೆಂಬುದೆಂದೆಂದು
ಬಾಳೀಗೆ ಗುರುವಾದೆ ಜ್ಞಾನದ ಸೆಲೆಯಾದೆ
ಸಾಧನೆಯ ಸುಖ ಹಾದಿಗೆ ಸೋಪಾನ ನೀನಾದೆ
ಅಲ್ಲಗಳೆಯದಿರು ಎಂದೂ ಹೆಣ್ಣು ನಾನೆಂದು
ಇಲ್ಲವಾದಿತು ಭುವಿಯಲಿ ನೆಲೆಯು ನಿನಗೆಂದು
ನಿಮ್ಮ ಸುಮಂಗಲಾ ಪ್ರಕಾಶ್
Rating
Comments
ಉ: ಸಬಲೆ
In reply to ಉ: ಸಬಲೆ by makara
ಉ: ಸಬಲೆ
In reply to ಉ: ಸಬಲೆ by makara
ಉ: ಸಬಲೆ
In reply to ಉ: ಸಬಲೆ by makara
ಉ: ಸಬಲೆ
ಉ: ಸಬಲೆ
In reply to ಉ: ಸಬಲೆ by venkatb83
ಉ: ಸಬಲೆ