ಭಾರತ ಸರಕಾರದ 'ಟೆಕ್ನಾಲಜಿ ಡೆವಲಪ್‌ಮೆಂಟ್ ಆಫ್ ಇಂಡಿಯನ್ ಲಾಂಗ್ವೇಜಸ್ ಸಂಸ್ತೆ' ಯ ಕನ್ನಡದ ಭಾಷಾ -ಸೀ ಡೀ ನಿಮ್ಮ ಮನೆ ಬಾಗಿಲಿಗೆ ..!!

Submitted by venkatb83 on Mon, 04/30/2012 - 18:13

  

 

ತುಂಬಾ ದಿನಗಳ ಹಿಂದೆ ವಿಜಯ ಕರ್ನಾಟಕದಲಿ ಭಾರತ ಸರಕಾರದ 'ಟೆಕ್ನಾಲಜಿ ಡೆವಲಪ್‌ಮೆಂಟ್ ಆಫ್ ಇಂಡಿಯನ್  ಲಾಂಗ್ವೇಜಸ್  ಸಂಸ್ತೆ'  ಕನ್ನಡದ ಭಾಷಾ ಬೆಳವಣಿಗೆಗಾಗಿ (ಹಾಗ್ಯೆ ಇನ್ನಿತರ ಭಾರತೀಯ ಭಾಷೆಗಳಿಗಾಗಿ ಸಹಾ)  ಉಚಿತ ಕನ್ನಡ ಫಾಂಟ್- ಮತ್ತಿತರ ಉಪಯುಕ್ತ ತಂತ್ರಜ್ಞಾನದ  ಸೀ ಡೀ ಶೀಘ್ರದಲ್ಲಿಯೇ ಬರಲಿದೆ ಎಂದು ಓದಿದ್ದೆ, ಅದಕಾಗಿ ಕಾಯ್ತಿದ್ದೆ...


ಅದು ಈಗ ಸಿದ್ದವಾಗಿ ನಮ್ ಮನೆಗೆ ಉಚಿತವಾಗಿ ತಲುಪಿಸುವರು ಅಂತ ಗೊತ್ತಾಗಿ ಖ್ಸುಷಿ ಆಗಿ ನಾ ಅಲ್ಲಿ ಇವತ್ತು ನೊಂದಾಯಿಸಿರುವೆ...
ನಾವ್ ಹೆಚ್ಚಿನ ಸಂಖ್ಯೆಯಲ್ಲಿ  ಅದನ್ನು  ಉಪಯೋಗಿಸಿದರೆ- ಅದಕ್ಕಾಗಿ ಕೋರಿಕೆ ಸಲ್ಲಿಸಿದರೆ ಬಹುಶ ಅದನ್ನು ತಯಾರಿಸಿದವರಿಗೆ ಸಮಾಧಾನ-ತೃಪ್ತಿ ತರಬಹುದು.. ಹಾಗಂತ ಅದನು ಸುಖಾ ಸುಮ್ಮನೇ ಉಪ್ಯೋಗಿಸಿ ಎನ್ನುವುದು ನನ್ನ ಉದ್ದೇಶ ಅಲ್ಲ, ಅದು ಖಂಡಿತ 'ಮುಂದೊಮ್ಮೆ' ನಿಮಗೆಲ್ಲ ಉಪಯೋಗಕ್ಕೆ ಬರಬಹುದು ಎಂಬ ಭರವಸೆ ಎನದು...


ನನ್ನ ಊಹೆ ನಿಜವಾಗಿದ್ದಾರೆ ಈಗಾಗಾಲೆ ತಮಿಳಿಗರು -ತೆಲುಗರು ಎಲ್ಲರೂ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಅವರವರ ಭಾಷಾ ಸೀ ಡೀ ಗಾಗಿ  ನೋಂದಾಯಿಸಿರಬಹುದು...!!


ಈ ತರಹದ ಸಂದರ್ಭದಲ್ಲಿ ಅದರ ಅತಿ ಹೆಚ್ಚಿನ ಉಪಯೋಗ ಮಾಡಿದರೆ ಆಗ ಅದನ್ನು  ತಯಾರಿಸುವವರಿಗೂ ಮತ್ತಸ್ತು ಉತ್ತೇಜನ ಸಿಕ್ಕು  ಇನ್ನಸ್ತು ಅಭಿವೃದ್ಧಿ ಮಾಡಬಹುದು ಅಲ್ಲವೇ?....


ನೋಂದಾವಣಿಯೂ ಸುಲಭ-ಮೊದಲು ನೀವ್ ಇಸ್ಟ ಪಡುವ ಹೆಸರು ಸಿಗುವುದೋ ನೋಡಿ! ಸಿಗದಿದ್ದರೆ ಬೇರೆ ಬೇರೆ ವಿಧವಾಗಿ ಹೆಸರಿಗೆ ಪ್ರಯತ್ನಿಸಿ ,ಸಿಕ್ಕಾದ ಮೇಲೆ ಮುಂದಿನ ಹಂತಗಳಿಗೆ ಹೋಗಿ ವಿಳಾಸ ನಮೂದಿಸಿ..
 ಕೆಲವೇ ದಿನಗಳಲ್ಲಿ ಸೀ ಡೀ ನಿಮ್ಮ ಮನೆ  ತಲುಪಬಹುದು...
ನೋಂದಾಯಿಸುವಿರಾ??????


ಶುಭವಾಗಲಿ....


---------------------------------------------------
ನೋಂದಾವಣೆಗೆ ಮತ್ತು ಇನ್ನಿತರ ಮಾಹಿತಿಗೆ  ಕ್ಲಿಕ್ಕಿಸಿ..
ಲಿಂಕ್:
http://www.ildc.gov.in/
ವಿಜಯ ಕರ್ನಾಟಕ(೩೦-೦೪-೨೦೧೨)ದ ಈ ಕುರಿತ ಸುದ್ಧಿ ಪುಟಕ್ಕಾಗಿ ಕ್ಲಿಕ್ಕಿಸಿ
 
 
http://www.vijaykarnatakaepaper.com/svww_index1.php

http://www.vijaykarnatakaepaper.com/svww_zoomart.php?Artname=20120430a_011101003&ileft=683&itop=582&zoomRatio=130&AN=20120430a_011101003

 

Rating
No votes yet

Comments