ಬೇಲಿಯೇ ಎದ್ದು ಹೊಲ ಮೇಯ್ದಂತೆ
ಬರಹ
ನಮ್ಮ ದೇಶ ಕಂಡ ಅನೇಕ ಅರಸೊತ್ತಿಗೆಗಳು ಜನರ ಬದುಕಿನ ಮೇಲೆ ತಮ್ಮ ಸಾಮ್ರಾಜ್ಯಗಳನ್ನು ಕಟ್ಟಿಅವರ ಬೆವರನ್ನು ತಮ್ಮ ಸಂಪತ್ತಾಗಿಸಿಕೊಂಡು ,ನಡೆಸಿದ ವೈಭೋಗದ ಜೀವನ ನಮ್ಮ ಕಲ್ಪನೆಗೆ ಮೀರಿದ್ದು. ರಕ್ತಪಿಪಾಸುತನ ಕ್ರೌರ್ಯಗಳನ್ನು ಮೈಗೂಡಿಸಿಕೊಂಡಿದ್ದ ಅವರಿಗೆ ಪಾಪಕರ್ಮದ ಭಯವಿರಲಿಲ್ಲವೆ? ತಮ್ಮನ್ನು ತಾವೇ ದೇವರ ಪ್ರತಿನಿಧಿಗಳೆಂದು ಭಾವಿಸಿದ್ದ ಅವರಿಗೆ ತಮ್ಮ ತಪ್ಪಿನ ಅರಿವಾಗುವುದೆಂತು?
ಜನ ಸೇವಕನಾಗಬೇಕಿದ್ದ ಅರಸನೇ ಭಕ್ಷಕನಾಗಿ ಜನರನ್ನು ನಿರಂತರ ಬಡತನದ ಕೂಪಕ್ಕೆ ತಳ್ಳಿ ರಾಜ್ಯದ ಕೋಶಗಳನ್ನು ತಮ್ಮ ವಿಲಾಸಕ್ಕೆ ವ್ಯಯಿಸುತ್ತಾ ಅಧರ್ಮ ಸಮಾಜದ ರೂವಾರಿಗಳಾದರು.'ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ನುಡಿ' ಎಷ್ಟೊಂದು ಸತ್ಯ ಅಲ್ಲವೇ?. ಅಂತಹವರಿಂದ ಲೋಕ ಕಲ್ಯಾಣ ಹೇಗಾದೀತು? ಅಂತಹವರಿಂದ ನಮ್ಮ ತಾಯ್ನೆಲದ ಬಿಡುಗಡೆ ಎಂದೋ? ಉತ್ತರ ನೀಡುವವರಾರು? ....
"ಸತ್ಯ ಮೇವ ಜಯತೇ"
ಕಮಲಬೆಲಗೂರ್