ನಿನ್ನ ಸ್ನೇಹದ ಪರಿಯ ನಾನರಿಯೆ

ನಿನ್ನ ಸ್ನೇಹದ ಪರಿಯ ನಾನರಿಯೆ

          "ಸ್ನೇಹದ ಕಡಲಲ್ಲಿ ನೆನಪಿನ ದೋಣಿಯಲೀ ಪಯಣಿಗ ನಾನಮ್ಮಾ" ಎಸ್ಟೊಂದು ಮಧುರ ಕಲ್ಪನೆ . ಸ್ನೇಹ ನಿರಂತರ . ಅಲ್ಲಿ ಸ್ವಾರ್ಥದ ಸೋಂಕಿಲ್ಲ,ಅಂತಸ್ತಿನ ಲೆಕ್ಕಾಚಾರವಿಲ್ಲ, ಬಾಲ್ಯ,ಯವ್ವನ,ಮುಪ್ಪಿನ ಭೇಧವಿಲ್ಲ. ಓ ಗೆಳತಿ ನಿನ್ನ ಸ್ನೇಹ ಶ್ರೀಗಂಧದ ಪರಿಮಳದಂತೆ.ಬಾಲ್ಯದ ಆ ಸವಿನೆನಪು ನನ್ನ ಬದುಕನ್ನು ಹಸಿರಾಗಿಸಿದೆ.ಸ್ನೇಹ ಜುಳು ಜುಳು ಹರಿಯುವ ಜಲಧಾರೆಯ ಹಾಗೆ. ಕೃಷ್ಣ-ಸುದಾಮ,ಕರ್ಣ-ಧುರ್ಯೋಧನರೂ ಸ್ನೇಹದ ದೋಣಿಯ ಪಯಣಿಗರೇ....

ಒಮ್ಮೆ ಹೀಗಾಯ್ತು .ಕರ್ಣ ಮತ್ತು ಧುರ್ಯೋಧನನ ಅರಸಿ ಪಗಡೆಯಾಟದಲ್ಲಿ ತೊಡಗಿದ್ದರು. ಆಟಕ್ಕೆ ಕಳೆ ಬಂದಿತ್ತು. ಆಗಲೇ ಧುರ್ಯೋಧನ ಆಗಮಿಸಿದನು.ಪತಿಯನ್ನು ಕಂಡು ರಾಣಿಯು ಆಟವನ್ನು ಅರ್ಧಕ್ಕೆ ನಿಲ್ಲಿಸಿ ಹೊರಟಾಗ ಕರ್ಣನು ಅವಳ ಕೈ ಹಿಡಿದು ಎಳೆದು ಆಟವನ್ನು ಪೂರ್ತಿ ಮಾಡಬೇಕೆಂದನು.ಅವನು ಎಳೆದ ರಭಸಕ್ಕೆ  ರಾಣಿಯ ಮುತ್ತಿನ ಹಾರ ಕಿತ್ತು ಮುತ್ತು ಚಲ್ಲಾ ಪಿಲ್ಲಿಯಾದವು. ಆಗ ಕರ್ಣನು ಸ್ನೇಹಿತನು ತನ್ನ ಬಗ್ಗೆ ಏನನ್ದುಕೊಳ್ಳುವನೋ ಎಂಬ ಆತಂಕದಲ್ಲಿದ್ದಾಗ ಮುತ್ತುಗಳನ್ನು ಪೋಣಿಸಿಕೊದಲೋ ಇಲ್ಲಾ ಆರಿಸಿಕೊದಲೋ ಎನ್ನುತ್ತಾ ದುರ್ಯೋಧನನು ವಾತಾವರಣವನ್ನು ತಿಳಿಗೊಳಿಸಿದನು. ಇಲ್ಲಿ ಕರ್ಣ ದುರ್ಯೋಧನರ ಸ್ನೇಹದ ಆಳ ಎಷ್ತಿತ್ಟೆಂಬುದು ಅರಿವಾಗುತ್ತದೆ.
               ಇನ್ನು ಒಂದೇ ಗುರುಕುಲದಲ್ಲಿ ಕಲಿತ ಕೃಷ್ಣ -ಸುಧಾಮ ಒಂದೇ ಜೀವ ಎರಡು ದೇಹಗಳಂತೆ ಬದುಕಿದವರು. ಸುಧಾಮನ  ಸ್ನೇಹಸಂಪತ್ತು ಅಪರಿಮಿತವಾದುದು.ಕೃಷ್ಣನು ಪ್ರೇಮದಾಸ.ಸ್ನೇಹವು ಇಬ್ಬರನ್ನು ಬೆಸೆಯಿತು.ಸುಧಾಮನು ಪ್ರೀತಿಯಿಂದ ಕೊಟ್ಟ ಅವಲಕ್ಕಿ ತಿಂದು ಅವನು ಕೇಳದೆಯೇ ಅಷೈಶ್ವರ್ಯವನ್ನು ಕರುಣಿಸಿದನು. ಸ್ನೇಹ ಕಲ್ಪವೃಕ್ಷದಂತೆ. ಯಾರ ತೋಟದಲ್ಲಿ ಅರಳಿದರೇನು ಹೂವಿನ   ಪರಿಮಳ ಎಲ್ಲರನ್ನು ಆಹ್ವಾನಿಸುತ್ತದೆ, ಕವಿಗಳಿಗೆ ಸ್ಫೂರ್ತಿ ನೀಡುತ್ತದೆ,
                                             ಸ್ನೇಹಕ್ಕೊಂದು ನಮನ,

 

Rating
No votes yet

Comments