ನಿಮ್ಮೆದೆಯತಟ್ಟುತ್ತಾ! ನೆಮ್ಮದಿಯನರಸುತ್ತಾ!

ನಿಮ್ಮೆದೆಯತಟ್ಟುತ್ತಾ! ನೆಮ್ಮದಿಯನರಸುತ್ತಾ!

ಕವನ

 ಪ್ರಿಯ ಓದುಗರಲ್ಲಿ ನನ್ನದೊಂದು ಮನವಿ ;-  ನನ್ನ ಜೀವನದ ನಲಿವಿಲ್ಲದ ನೋವುಗಳ

ಬಿಚ್ಹಿಡಲು ಯತ್ನಿಸಿದ್ದೆನೆ, ನಿಮ್ಮೆದೆಯತಟ್ಟುತ್ತಾ! ನೆಮ್ಮದಿಯನರಸುತ್ತಾ!

 

ಗುನುಗುತ್ತಾ ಗೀಚುತ್ತಾ

ಓಡೋಡಿ ಬಂದಿರುವೆ

ನಿಮ್ಮೆದೆಯತಟ್ಟುತ್ತಾ!

 ನೆಮ್ಮದಿಯನರಸುತ್ತಾ!

 

ಕಳೆದೋಯಿತು ಬಾಲ್ಯ

ಊರಾಚೆ ತೋಪಲ್ಲಿ

ಕುರಿಕಾಯುವ ಕುರುಬನಂತೇ,

ಮರೆತೋಯಿತು ವಿದ್ಯೆ

ಬಡತನದ ಬೇಗೆಯಲಿ

ಹೇತ್ತವರ ಗೋಳಲ್ಲಿ,

ನೂರಾರು ಆಸೆಗಳ

ನಿಂದನೆಯ ನೋವುಗಳ

ಓಂದೋಂದಾಗಿ ಬಿಚ್ಹಿಡುತ್ತಿರುವೆ

ನಿಮ್ಮೆದೆಯ ತಟ್ಟುತ್ತಾ!

ನೆಮ್ಮದಿಯನರಸುತ್ತಾ!

 

ಇನ್ನೆಲ್ಲಿಯ ಬಾಲ್ಯ

ಇನ್ನೆಲ್ಲಿಯ ಕನಸು

ಹಸಿವು ಕಿತ್ತು ತಿನ್ನುವ ಜನ್ಮ

ಕಡಿಯುವ ಕಡುಕನಾದನಾಬ್ರಹ್ಮ,

ಛಲವೊಂದೆ  ಬೆಂಬಿಡದ  ಸಂಗಾತಿ

ಬಲವೋಂದೆ ನಿಮ್ಮೆಲ್ಲರ ಅನುಬೂತಿ,

ಅರಸುತ್ತಾ ಬಂದಿರುವೆ 

ನೆಮ್ಮದಿಯನರಸುತ್ತಾ ಬಂದಿರುವೆ

ನಿಮ್ಮೆದೆಯತಟ್ಟುತ್ತಾ!

 

ಮರೆಯುವ ಸಲುವಾಗಿ

ನಿಮ್ಮೊಡಲ ಮಗುವಾಗಿ

ಗೀಚುತ್ತಾ ಬಂದಿರುವೆ

ತೊಚಿದ್ದ ಸೋಗಸಾಗಿ,

ಮರೆಯದಿರಿ ನನ್ನನ್ನು

ಹುಡುಕುತ್ತಾ ಬಂದಿರುವೆ

ನಿಮ್ಮೆದೆಯ ತಟ್ಟುತ್ತಾ!

ನೆಮ್ಮದಿಯನರಸುತ್ತಾ!