ಮಣ್ಣ ತಿಂದವರಾರು?
ಕವನ
ಮಣ್ಣ ತಿಂದವರಾರು?
ಮಣ್ಣು ತಿನ್ನುವುದಿನ್ನೊ
ಪ್ರಚಲಿತವಂತೆ,
ಬಿಹಾರ, ಮಧ್ಯಪ್ರದೇಶಗಳಲ್ಲಿ,
ಕಪ್ಪು ಜನರ ಹಲವು ನಾಡುಗಳಲ್ಲಿ
ಸೋಸಿದ ಮಣ್ಣು
ಸೇವಿಸಿ ಜೀವ ಹಿಡಿದವ
ರುಂಟೆಂದು ಕೇಳಿದರೆ ಜೀವ
ಜಲ್ ಎನ್ನದಿರದೆ!
ಕೇಳಿದ್ದೇನೆ ಹಲವು ಸಲ
ಶರೀರದಲಿ, ಧಾತುಗಳ ಕೊರತೆಯಿರಲು
ಬಳಪದ ಕಲ್ಲು, ಜೇಡಿ-ಕೆಂಮ್ಮಣ್ಣುಗಳ
ಬಸರಿ-ಬಾಣಂತಿ ಎಳೆಯ ಮಕ್ಕಳು ತಿನ್ನುವುದನ್ನ,
ಕೆಲವು ಸಲ ಸಂಸ್ಕೄತಿಯ
ಭಾಗವಾಗಿರುವುದನ್ನ,
ಮತ್ತೆ, ಕೆಲವು ಮಾನಸಿಕ ರೋಗಕ್ಕೆ
ತುತ್ತಾದವರಲ್ಲಿ ಮಣ್ಣು ತಿನ್ನುವ ಚಟ ಇರುವುದನ್ನ.
ಬರದ ಬೇಗೆಗೆ
ಬೆಂದ ಬಡ ಜನರ ಮೂಗಿಗೆ
ಮತ್ತೆ ಮಣ್ಣಿನ ವಾಸನೆ,
ಮತ್ತೆ ಕೆಲವರಿಗೆ
ಮಣ್ಣನು ಮಾರಿ,
ಬಂಗಾರ ತಿನ್ನುವ ಯೋಚನೆ!
Comments
ಉ: ಮಣ್ಣ ತಿಂದವರಾರು?
In reply to ಉ: ಮಣ್ಣ ತಿಂದವರಾರು? by ashoka_15
ಉ: ಮಣ್ಣ ತಿಂದವರಾರು?
ಉ: ಮಣ್ಣ ತಿಂದವರಾರು?
In reply to ಉ: ಮಣ್ಣ ತಿಂದವರಾರು? by venkatb83
ಉ: ಮಣ್ಣ ತಿಂದವರಾರು?