ಕುರುಬ ಸಮಾವೇಶದ ಸಂದೇಶ

ಕುರುಬ ಸಮಾವೇಶದ ಸಂದೇಶ

Comments

ಬರಹ

 ಹಾಲುಮತದ ಸಿದ್ದರಾಮಯ್ಯನವರನ್ನು ಮುಂದಿನ ಮುಖ್ಯಮಂತ್ರಿಯಗಿ ಬಿಂಬಿಸುವುದು ಕುರುಬ ಸಮಾವೇಶದ ಸಂದೇಶ ಎಂದು ರಾಜಕೀಯ ಪಂಡಿತರು ವಿಶ್ಲೇಷಿಸಿದ್ದಾರೆ.
 ಸಿದ್ದರಾಮಯ್ಯನವರು, ದೇಶದ ಸತ್ಪ್ರಜೆಯಾಗಿ, ಕಾಂಗ್ರೆಸ್ ಪಕ್ಷದ ನಿಷ್ಠಾವಂತ ನಾಯಕನಾಗಿ, ರಾಜ್ಯದ ಚುಕ್ಕಾಣಿ ಹಿಡಿಯುವುದು ಸ್ವಾಗತರ್ಹವೇ. ಆದರೆ ಇದು ’ಕುರುಬ’ ಹಣೆಪಟ್ಟಿಯಿಂದಾಗುವುದು, ಲೋಕಸತ್ತೆಗೆ ಕಸಿವಿಸಿಯಾಗುತ್ತದೆ.
 ಅಂತರಂಗದಲ್ಲೂ, ಆಚಾರದಲ್ಲೂ ಇಂದು ಯಾರೂ ಬ್ರಾಹ್ಮಣರಿಲ್ಲ; ಶೂದ್ರರಿಲ್ಲ. ಇದು, ಸ್ವತಂತ್ರ ಭಾರತದ ಪ್ರಜೆಗಳು ಸುಶಿಕ್ಷಿತರಾಗುತ್ತಿರುವ ಒಳ್ಳೆಯ ಬೆಳವಣಿಗೆ. ಆದರೆ ಜಾತಿ ಹೆಸರಿನ ಬಲೆ-ಬೇಲಿಗಳನ್ನು ಭದ್ರಪಡಿಸಿಟ್ಟುಕೊಳ್ಳುತ್ತಿರುವುದು, ರಾಜಕೀಯದ ನರಿ-ತೋಳಗಳು (ನಾಯಿ-ನರಿಗಳು ಎಂದೂ ಬೇಕಾದರೆ ಓದಿಕೊಳ್ಳಿ!) ಮಾತ್ರಾ.
 ಹಿಂದೆ ಹರಿಜನ ಕೇರಿ ಎಂದು ಕರೆಯಲಾಗುತ್ತಿದ್ದ ಕಡೆ ವಾಸಿಸುವ ನಾನು, ’ಆಚಾರವರಿತ’ ಬ್ರಾಹ್ಮಣ; ಈ ಜನ, ಹಿಂದೆ ಕುಡಿತ, ಜೂಜು, ಹಾದರದ ವಿಚಾರವಾಗಿ ಕಡಿದು-ಮಡಿದಿದ್ದನ್ನು ಕಂಡು ಜಿಗುಪ್ಸೆಗೊಂಡಿದ್ದೇನೆ; ಆದರೆ ಈಗಿನ ಹುಡುಗರು, ಸ್ವಂತ ಉದ್ಯೋಗದಿಂದ (ಐಟಿ-ಬಿಟಿ ಅನೇರ ಪರಿಣಾಮವಾಗಿ ಅಂತಲೇ ಎನ್ನಿ) ಮರ‍್ಯಾದೆಯಿಂದ ಬಾಳಿ-ಬದುಕುತ್ತಿರುವುದನ್ನು ಕಂಡು ಹೆಮ್ಮೆಯೆನಿಸುತ್ತದೆ. ಇದೇ ಹುಡುಗರು, ಆಪತ್ಕಾಲದಲ್ಲಿ ನನ್ನ ರಕ್ಷಣೆಗೂ ಧಾವಿಸಿ ಬಂದಿದ್ದಿದೆ!
 ಮನುಷ್ಯರು ಮನುಷ್ಯರಾಗಿ ಬದುಕಲು ’ಜಾತಿ’ ಅಡ್ಡ ಬರುವುದಿಲ್ಲ. ಇದಕ್ಕಡಿ, ವೋಟಿನ ಅಮಾನುಷ ರಾಜಕಾರಣ . ಈಗಿನ ಆದ್ಯ ಅಗತ್ಯ, ರಾಜಕಾರಣಿಗಳನ್ನು ಮನುಷ್ಯರನ್ನಾಗಿ ಮಾಡಬೇಕಾದ್ದು!
 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet