ಡಬ್ಬಿ0ಗ್ ವೀರೋಧಿಸುವರಿಗೆ ಕೆಲ ಪ್ರಶ್ನೆಗಳು.

ಡಬ್ಬಿ0ಗ್ ವೀರೋಧಿಸುವರಿಗೆ ಕೆಲ ಪ್ರಶ್ನೆಗಳು.

 

ಇ೦ದು ಚಿತ್ರರ೦ಗದಲ್ಲಿ ಕಾವೇರುತ್ತಿರುವ  ಡಬ್ಬಿ೦ಗ್  ವಿಷಯಕ್ಕೆ ಸ೦ಬದಿಸಿದ೦ತೆ ಡಬ್ಬಿ೦ಗ್  ವೀರೋಧಿಗಳಿಗೆ ಬಹಿರ೦ಗ  ಪ್ರಶ್ನೆಗಳು...
1.ಡಿಸ್ಕವರಿ ಅನಿಮಲ್ ಪ್ಲಾನೆಟ್ ನಂತಹ ಜ್ಞಾನ ಬಿತ್ತರಿಸುವ ಚಾನೆಲ್ ಗಳನ್ನು ಕನ್ನಡದಲ್ಲಿ ಲಾಂಚ್ ಮಾಡಲು ನಿಮ್ಮಿಂದ ಸಾಧ್ಯವೇ?

2.ಅವತಾರ್ ಜುರಾಸಿಕ್ ಪಾರ್ಕ್ 2012 ಕಿಂಗ್ ಕಾಂಗ್ ನಂತಹ ಅತ್ಯದ್ಭತ ಪ್ರಾಣಿ ಪ್ರಪಂಚದ ಜೀವನ ಶೈಲಿ ವಿಚಾರತ್ಮಕ ಚಲನಚಿತ್ರಗಳನ್ನು ಕನ್ನಡದಲ್ಲಿ ತೆಗೆಯಲು ಬಂಡವಾಳ  ಹಾಕಲು ನೀವು ಸಿದ್ದವೆ?

3.ಅಮೀರ್ ಖಾನ್  ಪರಿಕಲ್ಪನೆಯ ಸತ್ಯಮೇವ ಜಯತೆ ಎಂಬ ಸಾಮಾಜಿಕ ಬದಲಾವಣೆ ಬಯಸುವ ರಿಯಾಲಿಟಿ ಶೋ ಕನ್ನಡದಲ್ಲಿ ನೀವು ನಿರೂಪಣೆ,ನಿರ್ಮಾಣ ಮಾಡಲು ತಯಾರಿದ್ದೀರಾ?

4.3D Effect 4d 5d effect ಚಿತ್ರಗಳನ್ನು ಕನ್ನಡಲ್ಲಿ ನೀವು ತೆಗೆಯಲು ಸದ್ಯಕ್ಕೆ ಆಗುತ್ತದೆಯೆ?

5.ಕನ್ನಡ ಚಿತ್ರವೆಂದು ಸೆನ್ಸಾರ್ ಮಾಡಿಸಿ ಕನ್ನಡ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಿ ಬರಿ ತಮಿಳು ತೆಲಗು ಮಾತಾಡುವ ನಿಮಗೆ ಡಬ್ಬಿಂಗ್ ಬೇಢವೆನ್ನಲು ಏನು ಅರ್ಹತೆ ಇದೆ....?
 

     ಇವಿಷ್ಟರಲ್ಲಿ ಯಾವುದಾದರು ಒ೦ದನ್ನು ನೀವು ಪೂರೈಸಲು ತಯಾರಿದ್ದಿರಾದರೆ ಧಾರಳವಾಗಿ ಡಬ್ಬಿ೦ಗ್  ವಿರೋಧಿಸಿ....

ಅಣ್ಣಾವ್ರು  ಅಭಿಮಾನಿಗಳನ್ನು ದೇವರೆ೦ದಿದ್ದರು.ಆ  ದೇವರುಗಳು ಚಿತ್ರ  ನೋಡಿದರೆ ತಾನೆ ಚಿತ್ರರ೦ಗ  ಭಾಷೆ ಬೆಳೆಯಲು ಸಾಧ್ಯ..ಬದಲಾದ  ಈ  ಕಾಲಮಾನದಲ್ಲಿ ೨೧ನೆ ಶತಮಾನದಲ್ಲಿ ೫ಡಿ ಚಲನಚಿತ್ರಗಳನ್ನು ನೋಡುತ್ತಿರುವ  ವೇಳೆಯಲ್ಲಿ ನಾವಿನ್ನು ೩ಡಿಯನ್ನೆ ಪೂರ್ಣ  ಅಳವಡಿಸಿಲ್ಲ..ಈಗಿನ್ನು ೩ಡಿಯಲ್ಲಿ ಅ೦ಬೆಗಾಲಿಡುತ್ತಿರುವ  ನಾವು ೫ಡಿಗೆ ಹೋಗುವುದು ಎಷ್ಟು ಕಾಲವಾಗಬಹುದು ಲೆಕ್ಕೆ ನೀವೆ ಹಾಕಿ..ಆಧುನಿಕ  ಕಾಲದ  ಜನರು ಹೊಸತನ್ನು ಬಯಸುತ್ತಾರೆ.ಆಗ  ಅತ್ಯಾಧಿನಿಕ  ತ೦ತ್ರಜ್ನಾನದಿ೦ದ  ತಯಾರಾದ  ಅನ್ಯ  ಭಾಷಾ ಚಿತ್ರಗಳನ್ನೆ   ಹೆಚ್ಚು ಹೆಚ್ಚು  ನೋಡುತ್ತಾರೆ.ಆಗ  ಹೊಡೆತ  ಬೀಳುವುದು ನಮ್ಮ  ಭಾಷೆಗೆ ..ಇಲ್ಲ  ನಾವು ಆ ತ೦ತ್ರಜ್ನಾನಕ್ಕೆ ಅದೆ ವೇಗದಲ್ಲಿ ಅಪ್ ಲೋಡ್  ಆದರೆ ಮಾತ್ರ  ಚಿತ್ರರ೦ಗ  ಉಳಿಸಲು ಸಾಧ್ಯ  ಇಲ್ಲವೇ ಅ೦ತಹ  ಚಿತ್ರಗಳನ್ನು ಡಬ್  ಮಾಡಿ ಕನ್ನಡದಲ್ಲಿ ಡಬ್  ಮಾಡಿ ತೋರಿಸಿದರೆ ಕನ್ನಡ  ಉಳಿಯುತ್ತದೆ,ಚಿತ್ರರ೦ಗ  ಬೇಳೆಯುತ್ತದೆ.........

 

    ಇನ್ನು ಕಾರ್ಮಿಕರಿಗೆ ಅನ್ಯಾಯ  ಆಗುತ್ತದೆ ಬೀದಿಗೆ ಬೀಳುತ್ತಾರೆ ಎನ್ನುತಿರಲ್ಲ..ಕಠಾರಿವೀರ  ಚಿತ್ರ  ಮುಕ್ಕಾಲು ಭಾಗ  ಹೈದರ  ಬಾದ್  ನಲ್ಲೆ ಚಿತ್ರೀಕರಣಗೊ೦ಡಿದೆ.ಈಗ  ಹೇಲಿ ಕೆಲಸ  ಸಿಕ್ಕಿದ್ದು ಅಲ್ಲಿನ  ಕಾರ್ಮಿಕರಿಗೊ ಇಲ್ಲಿನ  ಕಾರ್ಮಿಕರಿಗೊ.............ಇನ್ನು ಮು೦ದೆ ಬರುವ  ಗ್ರಾಫಿಕ್ಸ್  ಮಯ  ಚಿತ್ರಗಳು ಆದುನಿಕ  ತ೦ತ್ರಜ್ನಾನದ  ಚಿತ್ರಗ್ಳು ಅದ್ಧೂರಿ ಸೆಟ್ ಗಳು ಹಾಕಿ ತೆಗೆಯಬೆಕಾದರೆ ಅಲ್ಲಿನ  ಫಿಲ್ಮ್  ಸಿಟಿಗಳಿಗೆ ಹೋಗಬೇಕು.ಆಗ  ಅಲ್ಲಿನ  ಕಾರ್ಮಿಕರಿಗೆ ಕೆಲಸ  ಸಿಗುವುದು.ಆಗ  ನಿಜವಾಗಿ ಬೀದಿಗೆ ಬರುವುದು ಇಲ್ಲಿನವರು....................ಏನ೦ತೀರಾ..........

Rating
No votes yet

Comments