"ಕ್ಯಾತೆ"ಗೊಂದು Befitting ಉತ್ತರ ಸಿಗಲಿ

"ಕ್ಯಾತೆ"ಗೊಂದು Befitting ಉತ್ತರ ಸಿಗಲಿ

ಬರಹ

ಪ್ರೊ. ಸುಧಾಕರ ಹರಿ ದಾಸ ಸಾಹಿತ್ಯ ಕುರಿತಂತೆ, ತಮ್ಮ ಹಳೆ ಕ್ಯಾತೆಯನ್ನು ಹೊಸದಾಗಿ ತೆರೆದಿದ್ದಾರೆ. ಹರಿದಾಸ ಸಾಹಿತ್ಯದ ಪುನರುತ್ಥಾನದ ರೂವಾರಿಗಳೆನ್ನಲಾಗುವ ವಿಜಯದಾಸಾದಿಗಳು, ಕನಕದಾಸರ ಹಾಡುಗಳನ್ನೆಲ್ಲಾ ಕದ್ದು ಪುರಂದರ-ವಾದಿರಾಜ ಮತ್ತು ಸ್ವಯಂ ಖಾತೆಗಳಿಗೆ ಜಮಾ ಮಾಡಿಕೊಂಡಿದ್ದಾರೆನ್ನುವುದು ಸುಧಾಕರರ ಮೂಲಭೂತ ಆರೋಪ. ಕನಕ-ಪುರಂದರ-ವಾದಿರಾಜ-ಅಣ್ಣಮಾಚಾರ‍್ಯಾದಿ ಸಮಕಾಲೀನರ ಕೆಲವು  ಹಾಡುಗಳಲ್ಲಿ "ಭಾವಸಾಮ್ಯ"ವಷ್ಟೇ ಅಲ್ಲದೇ ಕೃತಿಸಾಮ್ಯವೇ ಕಂಡುಬರುವುದುಂಟು! ಇಷ್ಟಕ್ಕೂ ವಿಜಯದಾಸರದೇ ಎನ್ನಲಾಗುವ ಹಾಡುಗಳಲ್ಲಿ ಅನುಭಾವದ ಪಕ್ವತೆ ಮತ್ತು ಪ್ರೌಢಿಮೆಗಳು ಅಷ್ಟಾಗಿ ಅನುಭವಕ್ಕೆ ಬರುವುದಿಲ್ಲವೆನ್ನುವುದು ಯಾವುದೇ ಅಧ್ಯಾಯಿಗಳಿಗೂ ಗೊತ್ತಾಗುವ ವಿಷಯ. ಇಡೀ ದಾಸಸಾಹಿತ್ಯ, ವೈದಿಕ ಪ್ರತಿಪಾದಕವಾದ ಸುಧಾದಿ ಮಾಧ್ವ ವಾಙ್ಮಯದ ಸರಳಾನುವಾದ ಸಾರ ಎನ್ನುವ ಕಂಕಣಬದ್ಧ ಪ್ರತಿಪಾದನೆಯಲ್ಲಿ ವಿಜಯದಾಸರ ಪರಿಶ್ರಮ ಅಪಾರವಾದದ್ದೇ ಇದ್ದೀತು. ದಸಸಾಹಿತ್ಯದ ಕೃತಿಮೇರು ಎಂದು ನಂಬಿಸಲಾಗುವ ಹರಿಕಥಾಮರತಸರದಲ್ಲಿ, ಜಗನ್ನಾಥದಾಸರು ಈ ಪ್ರಯತ್ನವನ್ನು ವ್ಯವಸ್ಥಿತವಾಗಿ, ಸಮರ್ಥವಾಗಿ ಮಾಡಿದ್ದಾರೆ. ತದನಂತರದ ಜೊಳ್ಳು-ಪೊಳ್ಳುಗಳಿಗೂ ಹರಿದಾಸಸಾಹಿತ್ಯದ ಪರಿಧಿಯಲ್ಲಿ ಪಟ್ಟ ಸಿಕ್ಕುತ್ತಿದೆ. ಅದೇ ಶಿಶುನಾಳ ಷರೀಫರು, ಗೌರಿಬಿದನೂರಿನ ಅಂಜನಪ್ಪಸ್ವಾಮಿ, ಕೈವಾರದ ನಾರಣಪ್ಪನಂಥ "ಹರಿ-ಅನುಭಾವಿ"ಗಳ ವಿನಿಕೆಗಳಿಗೆ ಇಲ್ಲಿ ಸ್ಥಾನವಿಲ್ಲ! ಇದರ ಬಗ್ಗೆ ಯಾವುದೇ ಪ್ರಾಮಾಣಿಕ ’ಭಾಗವತ’ರಿಗೂ ಕಳಕಳಿಯಾಗದಿರುವುದು ಆಶ್ಚರ್ಯ 
ಸುಧಾಕರರಂತಹ ಪೂರ್ವಗ್ರಹಿಗಲೆತ್ತುವ ಸಂದೇಹಗಳಿಗೆ ಉತ್ತರ ಮತ್ತು ಅದೇ ಮತ್ತಿನಲ್ಲಿ ಹೊರಡಿಸುವ ಫರ್ಮಾನುಗಳಿಗೆ ತಿದ್ದುಪಡಿ ಸಿಕ್ಕದಿರುವುದೂ ಇದೇ ಕಾರಣಕ್ಕೆ!
  

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet