ಪರಿ(ಪರಿಯ)ಶೋಧ
ಮುಂಜಾವಿನ ಕನಸಲ್ಲಿ ಮುಗುಳ್ನಗೆಯ ಮುಕ್ಕಳಿಸಿ
ಬಳುಬಳುಕುತಾ ಬಂದು ನನ್ನೆದೆಯ
ಹರೆಯವನ್ನಪ್ಪಿಕೊಂಡವಳೇ
ಎಲ್ಲಿ ಹೋದೆಯೇ ನೀನು ಬೆಳಗಾಗುವುದರಲ್ಲಿ?
ಕಂಗಳಲಿ ಕಾಮನ ಬಿಲ್ಲನು ಮೂಡಿಸಿ
ತುಂಬುಗಲ್ಲಗಳಲಿ ರಂಗೋಲಿ ಬಿಡಿಸಿ
ತೊಂಡೆತುಟಿಗಳಾ ತುದಿಯಲಿ ಮುತ್ತು ಪೋಣಿಸಿ
ಬಡನಡುವಲ್ಲಿ ಸೆರೆಹಿಡಿದವಳೇ ಎಲ್ಲಿರುವೆಯೇ?
ಮಾತುಮೌನದ ಬಿಸಿಯುಸಿರಲಿ ನನ್ನರೆಯವ ಕಾಯಿಸಿ
ಕುಲುಕುಲು ನಗೆಯಲ್ಲಿ ಚಂಡಮದ್ದಲೆ ಬಾರಿಸಿ
ನಿನ್ನ ಚಲುವಿನ ರಂಗನ್ನೆಲ್ಲಾ ನನ್ನೆದೆಗೆ ತೀಡಿ ಕುಣಿದವಳೇ
ಎಲ್ಲಿ ಹುಡುಕಲೇ ನಾ ನಿನ್ನನು?
ಎಳೆಬಿಸಿಲ ರವಿಯಲ್ಲಿ ಹುಣ್ಣಿಮೆಯ ಶಶಿಯಲ್ಲಿ
ಮಿನುಗುವ ತಾರೆಗಳಲಿ ಮಿರುಗುವ ಧರೆಯ ಮೈಸಿರಿಯಲಿ
ಮುಂಜಾವಿನ ಇಬ್ಬನಿಯ ಹನಿಹನಿಗಳಲಿ ಹುಡುಕಿದೆ ನಲ್ಲೆ
ಎಲ್ಲಿರುವೆಯೇ ನೀನು ಈ ಭುವಿಯಲ್ಲಿ?
ನನ್ನೆದೆಯ ಅಂಬಾರಿ ಸಿಧ್ಧವಾಗಿದೆ ಸಿಂಗಾರಿ
ಎಲ್ಲಿದ್ದರೂ ಬಂದು ಅಲಂಕರಿಸಿಬಿಡೆ
ಜಾತಿಮತಗಳ ದಾಟಿ ಪ್ರೀತಿಪ್ರೇಮಗಳ ಮೀಟಿ
ಹೊರಟುಬಿಡೋಣ ಶೃಂಗಾರಲೋಕಕ್ಕೆ
(ಸುಮಾರು ಇಪ್ಪತ್ತಾರು ವರುಷಗಳ ಹಿಂದೆ ನಾನು ಶ್ರೀ ಜಯಚಾಮರಾಜೇಂದ್ರ ಕಾಲೇಜ್ ಆಫ್ ಎಂಜನೀರಿಂಗ್ ಮೈಸೂರು
ಇಲ್ಲಿ ಪ್ರಥಮ ವರುಷದಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಯೌವನದ ಸುಳಿಗೆ ಸಿಲುಕಿ ಬರೆದಿದ್ದ ಕವನವಿದು. ನನ್ನ ಜೊತೆ ಆದಿಚುಂಚನಗಿರಿ ವಿದ್ಯಾರ್ಥಿನಿಲಯದಲ್ಲಿದ್ದ
ಮಾನಸಗಂಗೋತ್ರಿಯ ಕೆಲವು ಗೆಳೆಯರು ಹೊರತಂದಿದ್ದ ಕವನಸಂಕಲನವೊಂದರಲ್ಲಿ ಪ್ರಕಟವಾಗಿತ್ತು.)
Comments
ಉ: ಪರಿ(ಪರಿಯ)ಶೋಧ
In reply to ಉ: ಪರಿ(ಪರಿಯ)ಶೋಧ by nanjunda
ಉ: ಪರಿ(ಪರಿಯ)ಶೋಧ
ಉ: ಪರಿ(ಪರಿಯ)ಶೋಧ
In reply to ಉ: ಪರಿ(ಪರಿಯ)ಶೋಧ by venkatb83
ಉ: ಪರಿ(ಪರಿಯ)ಶೋಧ
ಉ: ಪರಿ(ಪರಿಯ)ಶೋಧ
In reply to ಉ: ಪರಿ(ಪರಿಯ)ಶೋಧ by H A Patil
ಉ: ಪರಿ(ಪರಿಯ)ಶೋಧ
ಉ: ಪರಿ(ಪರಿಯ)ಶೋಧ
In reply to ಉ: ಪರಿ(ಪರಿಯ)ಶೋಧ by siddhkirti
ಉ: ಪರಿ(ಪರಿಯ)ಶೋಧ