ಭಾರತೀಯ ಸಂಸ್ಕೃತಿಗೆ ಕನ್ನಡಿಗರ ಕೊಡುಗೆ
ಶತಮಾನಗಳಿಂದ ಗಳಿಸಿ ಉಳಿಸಿ ಬೆಳೆಸಿಕೊಂಡು ಬಂದಿರುವ ಭಾರತೀಯ ಸಂಸ್ಕ್ರತಿಗೆ ಕನ್ನಡಿಗರಾದ ನಾವು ಮರೆಯಲಾಗದ ಬಹುಸಂಖ್ಯಾತ ಕೊಡುಗೆಗಳನ್ನಿಟ್ಟಿದ್ದೆವೆ, ಇದು ಕನ್ನಡಿಗರ ಕೊಡುಗೆ ಕನ್ನಡಿಗರಾದ ನಾವೇ ಇದನ್ನು ರಕ್ಷಿಸಬೇಕು,ಬಲು ವಿಷಾಲವಾದ ಕಲಾ ಪ್ರಪಂಚದ ಒಂದು ಭಾಗ ಕರಾವಳಿಯ ಯಕ್ಷಗಾನ ಪ್ರಪಂಚ. ಬಾವಪ್ರಚೊದನೆ, ಸಮಯಸ್ಪೂರ್ತಿ,ವೇಶಭೂಷಣಗಳಿಂದ ಮಾಡುವ ಕಲೆ ಯಕ್ಷಗಾನ, ಬಯಲಾಟವಾಗಲಿ ತಾಳಮದ್ದಳೆಯಾಗಲಿ ಇತರೆ ರಂಗಭೂಮಿಗಳಂತೆ ಪ್ರದರ್ಶನದ ಜೊತೆಗೆ ಅತ್ಯಮೂಲ್ಯವಾದ ಪೌರಣಿಕ ಕತೆಗಳನ್ನು ತಿಳಿಸುತ್ತದೆ. ಅದೆಲ್ಲದಕ್ಕೂ ಮೊದಲು ನಿಮಗೆ ಕಲೆಯ ಪರಿಚಯವನ್ನು ಉಣಬಡಿಸುತ್ತೆನೆ.
ಯಕ್ಷಗಾನದ ಮೊದಲ ವ್ಯಕ್ತಿ 'ಭಾಗವತ'(ಹಾಡುಗಾರ ಮತ್ತು ನಿರ್ದೆಶಕ) ಪ್ರಸಂಗವನ್ನು ಹಾಡುವುದು ಅವನ ಮುಖ್ಯ ಕೆಲಸವಾದರೂ,ಅಷ್ತಕ್ಕೆ ಸೀಮಿತವಾಗದೆ ಕತೆ, ಕಾಲ,ಬಾಷೆ, ಪಾತ್ರಗಳು, ಅಬಿನಯಿಸುವ ನಟರು,ಮತ್ತು ಪ್ರೇಕ್ಷಕರು ಇವುಗಳಲ್ಲದರ ಕಡೆ ಅವನ ಗಮನವಿರಬೇಕು, ಯಕ್ಷಗಾನದಲ್ಲಿ ವ್ರತ್ತಿ ಮೇಳ ಮತ್ತು ಹದಕೆ ಮೇಳಗಳನ್ನು ಕಾಣಬಹುದು. ಎರಡನೆಯದಾಗಿ ' ಸ್ತ್ರೀ ಪಾತ್ರ'ದಾರಿಯತ್ತ ಬಂದರೆ ನಿಮಗೆ ತಿಳಿದಿದೆ ಗಂಡಾಗಿ ಹೆಣ್ನಂತೆ ನಟಿಸುವುದು ಎಷ್ಟು ಕಷ್ಟಕರ ಎಂದು ನೀವೂ ಕೂಡ ಪ್ರಯತ್ನಿಸಬಹುದು (ಯಾರು ಇಲ್ಲದಿರುವಾಗ), ಮನೆಯಲ್ಲಿ. ಚಲನಚಿತ್ರಗಳಿಗಿಂ ಯಕ್ಷಗಾನವನ್ನು ಬಿನ್ನವಾಗಿ ಕಾಣಬೇಕು, ಸಿನಿಮಾದಂತಹ ಸಿದ್ದ ಸಂಬಾಷಣೆ ಇಲ್ಲಿ ಸಿಗದು ಭಾವಬಲ ಮತ್ತು ಭಾಷಾಬಲದಿಂದ ಮೂಡಿದ ಸಂಬಾಷಣೆ ರಸಿಕರ ಮನ ತಟ್ಟುತ್ತದೆ, ಒಮ್ಮೆ ಯೋಚಿಸಿನೋಡಿ ಪೌರಣಿಕ ಕತೆಗಳನ್ನು ನೃತ್ಯ ಮತ್ತು ತಾಳವಾದ್ಯಗಳ ರೂಪದಲ್ಲಿ ರಂಗಕ್ಕೆ ಇಳಿಸುವುದು ಎಷ್ಟು ಕಷ್ಟಕರವೆಂದು.
ಪ್ರಮುಖ ಹಿಮ್ಮೇಳವೆಂದರೆ ;- ಚಂಡೆ, ಮದ್ದಲೆ, ಮೃದಂಗ, ತಾಳ, ಜಾಗಟೆ ಮುಂತಾದ ಸಂಗೀತ ಉಪಕರಣಗಳನ್ನು ಇಲ್ಲಿನ ನೃತ್ಯ, ಭಾಗವತಿಕೆ ಮತ್ತು ಮಾತುಗಾರಿಕೆಯ ವೇಳೆ ಸಂದರ್ಭೋಚಿತವಾಗಿ ಬಳಸಲಾಗುತ್ತದೆ, ಫ್ರಮುಖ ಯಕ್ಷಗಾನ ಮೇಳಗಳನ್ನು ಪರಿಚಯಿಸುತ್ತಿದ್ದೆನೆ :ಶ್ರೀ ದುರ್ಗಾಪರಮೆಶ್ವರೀ ದಶಾವತಾರ ಯಕ್ಷಗಾನ ಮಂಡಳಿ, ಶ್ರೀ ಇಡಗುಂಜಿ ಮಹಾಗನಪತಿ ಯಕ್ಷಗಾನ ಮಂಡಳಿ ಕೆರೆಮನೆ, ಸಾಲಿಗ್ರಾಮ ಮೇಳ, ಪೆರ್ಡುರು ಮೇಳ, ಕೊಂಡದಕುಳಿ ಮೇಳ, ಧರ್ಮಸ್ಥಳ ಮೇಳ,ಇತ್ಯಾದಿ ಇತ್ಯಾದಿ,,,,,,,,,,,
ಕನ್ನಡಿಗರಾದ ನಾವು ಯಾವುದಕ್ಕೂ ಕಮ್ಮಿಯಿಲ್ಲವೆಂಬುದು ನನ್ನ ಅಬಿಪ್ರಾಯ,
ಮರೆಯದೆ ತಿಳಿಸಿ ನಿಮ್ಮ ಅಬಿಪ್ರಾಯ.