ಎದೆಯಲ್ಲಿರುವನಲ್ಲ
ಬಾಳನೆಲ್ಲವು ನೀನು ಮುಗುದೆತನದಲ್ಲಿಯೇ
ಹಾಳು ಮಾಡಲು ಹೊರಟಿರುವೆಯೇಕೆ ಹೆಣ್ಣೆ?
ಬಿಟ್ಟು ನೇರದ ದಾರಿ ತುಸುಸೆಡವು ತೋರಿಸುತ
ದಿಟ್ಟೆಯಾಗುವುದಿಂದು ನಿನಗೆ ಬಹು ಒಳಿತು!
ಮುದದಿ ಗೆಳತಿಯು ಹೀಗೆ ಕಿವಿಮಾತು ಹೇಳಿರಲು
ಬೆದರುಮೊಗದಲ್ಲೀಕೆ ಮರುನುಡಿಯುತಿಹಳು;
ಮೆಲ್ಲ ನುಡಿ ಸಖಿ ನೀನು! ಕೇಳಿಬಿಟ್ಟಾನವನು
ನಲ್ಲ ನೆಲೆನಿಂತಿರುವನೆನ್ನ ಎದೆಯಲ್ಲೆ!
ಸಂಸ್ಕೃತ ಮೂಲ (ಅಮರುಶತಕ -೭೦):
ಮುಗ್ಧೇ ಮುಗ್ಧತಾಯೈವ ನೇತುಮಖಿಲಃ ಕಾಲಃ ಕಿಮಾರಭ್ಯತೇ
ಮಾನಂ ಧತ್ಸ್ವ ಧೃತಿಮ್ ಬಾಧನ ಋಜುತಂ ದೂರೇ ಕುರು ಪ್ರೇಯಸಿ |
ಸಖ್ಯೈವಂ ಪ್ರತಿಬೋಧಿತಾ ಪ್ರತಿವಚಸ್ತಾಮಾಹ ಭೀತಾನನಾ
ನೀಚೈಃ ಶಂಸ ಹೃದಿ ಸ್ಥಿತೋ ಹಿ ನನು ಮೇ ಪ್ರಾಣೇಶ್ವರಃ ಶ್ರೋಸ್ಯತಿ ||
ಕೊ: ಇದಕ್ಕೆ ತಲೆಬರಹ ಕೊಡುವುದಕ್ಕೆ ತಿಣುಕಾಡುತ್ತಿದ್ದಾಗ, ಸಲಹೆ ನೀಡಿದ ಗೆಳೆಯ ಅನಿಲ್ ಜೋಶಿ ಅವರಿಗೆ ಧನ್ಯವಾದಗಳು.
Rating
Comments
ಉ: ಎದೆಯಲ್ಲಿರುವನಲ್ಲ
ಉ: ಎದೆಯಲ್ಲಿರುವನಲ್ಲ
In reply to ಉ: ಎದೆಯಲ್ಲಿರುವನಲ್ಲ by nanjunda
ಉ: ಎದೆಯಲ್ಲಿರುವನಲ್ಲ
In reply to ಉ: ಎದೆಯಲ್ಲಿರುವನಲ್ಲ by nanjunda
ಉ: ಎದೆಯಲ್ಲಿರುವನಲ್ಲ
In reply to ಉ: ಎದೆಯಲ್ಲಿರುವನಲ್ಲ by hariharapurasridhar
ಉ: ಎದೆಯಲ್ಲಿರುವನಲ್ಲ
In reply to ಉ: ಎದೆಯಲ್ಲಿರುವನಲ್ಲ by nanjunda
ಉ: ಎದೆಯಲ್ಲಿರುವನಲ್ಲ