ಒಂದು ರಾತ್ರಿ
ಒಂದು ರಾತ್ರಿ
ನಿಮಗೆ ನಮಸ್ಕಾರ, ನಿಮಗೆ ನಾನು ನನ್ನ ವೊದಲ ಕಾದಂಬರಿಗೆ ಸ್ವಾಗತಿಸುತ್ತೇನೆ. ಇದು ನನ್ನ “ನನ್ನ ನಡೆ” ಸರಣಿಯ ವೊದಲ ಕಾದಂಬರಿ.
ಎಲ್ಲರ ಜೀವನದಲ್ಲಿ ಘಟನೆಗಳು ಸಹಜ, ಒಂದೊಂದು ದಿನವು ನಮಗೆ ಹೊಸದನ್ನೆ ತೋರಿಸುತ್ತದೆ. ಆದರೆ ಅದನ್ನ ನಾವು ನೆನೆಪಿನಲ್ಲಿ ಇರಿಸುವುದಿಲ್ಲ, ಕಾರಣ ಅದರಲ್ಲಿ ನಾವು ಹೊಸತನ್ನು ಕಾಣುವುದಿಲ್ಲ.
ಆದರೆ ಇಂದು ನಾನು ಈ ಕಾದಂಬರಿಯನ್ನು ಬರೆಯಲು ಕಾರಣ, ನನ್ನ ಜೀವನದ ರೈಲಿನ ವಿಷೇಶ ಅನುಭವವನ್ನು ನಿಮಲ್ಲಿ ಹಂಚಿಕೊಳ್ಳಲು ಇಚ್ಚಿಸುತ್ತೆನೆ. ಆ ಇಚ್ಚೆಯೇ ನನ್ನ ರೈಲಿನ “ಒಂದು ರಾತ್ರಿ”ಯ ಘಟನೆಯು ಇಂದು ನಿಮ್ಮ ಮುಂದೆ ಕಾದಂಬರಿಯಾಗಿ ಬರುತ್ತಿದೆ. ಬಹುಶಃ ನೀವು ಈ ಕಾದಂಬರಿಯನ್ನು ಇಷ್ಟಪಡುತ್ತಿರೇನೊ ಎಂದು ನಂಬಿ ಬರೆದ್ದಿದೇನೆ.
ನಿಮಲ್ಲಿ ಒಂದು ಕೊರಿಕೆ, ಈ ಕಾದಂಬರಿಯನ್ನು ವೊದಲ ಸಾಲಿನಿಂದ ಕೊನೆಯ ಸಾಲಿನವರೆಗು ಓದಿ, ನೀವು ನನಗೆ ಎನನ್ನನಾದರು ಹೇಳಲು ಇಚ್ಚಿಸಿದರೆ ನೀವು ನನ್ನನು ಸಮೀಪಿಸುವ ಸ್ಥಳವು ಈ ಕಾದಂಬರಿಯಲ್ಲಿ ಸಿಗುತ್ತದೆ. ತಪ್ಪದೆ ನಿಮ್ಮ ಅನಿಸಿಕೆಯನ್ನು ತಿಳಿಸಿ.
ನಿಮ್ಮ ಅನಿಸಿಕೆಗಳಿಗಾಗಿ ಕಾಯುತ್ತಿರುವ ನಿಮ್ಮ ಸ್ನೇಹಿತ
ಸಂವೆಂಕು
(ಸಂತೋಷ್ ವೆಂಕಟೇಶ್ ಕುರ್ಡೇಕರ್)
ಅಂದು ದಿನಾಂಕ 01/03/2011 ಮಂಗಳವಾರ, ನನ್ನ ಜೀವನದ ವಿಷೇಶ ರೈಲಿನ ಪಯಣ. ಪಯಣಕ್ಕೆ ಹೋಗುವ ಒಂದು ದಿನದ ಹಿಂದೆ ಪಯಣಕ್ಕೆ ಹೋಗಲು ಎಲ್ಲಾ ಸಿದ್ದತೆಯನ್ನು ಮಾಡಿಕೊಂಡೆ. ನನಗೆ ರೈಲಿನಲ್ಲಿ ಹೊಗಬೇಕೆಂದರೆ ತುಂಬಾ ಇಷ್ಟ. ಅದೇನೂ ಗೊತ್ತಿಲ್ಲಾ ನನಗೂ, ರೈಲಿಗೂ ತುಂಬಾ ನಂಟನವಿದೆ. ಬಹುಶಃ ಇಂದಿನ ರೈಲು ನನ್ನ ಹಿಂದಿನ ಜನ್ಮದ ನಂಟನಿರಬಹುದು, ಏಕೆಂದರೆ ನಂಟರು ಅಪರುಪಕ್ಕೆ ಬಂದರೆ ಚಂದ, ಹಾಗೆ ನಾನು ಕೂಡಾ ರೈಲಿನಲ್ಲಿ ಹೋಗುವುದು ಅಪರೂಪ, ಅದಕ್ಕೆ ಏನೋ ನಾನು ಅದನ್ನು ತುಂಬಾ ಇಷ್ಟಪಡುತ್ತೆನೆ.
ಅಂದು ನಾನು ತುಂಬಾ ಖುಷಿಯಾಗಿದ್ದೆ, ಏಕೆಂದರೆ ನಾನು ನನ್ನ ಮನೆಗೆ ಹೋಗುತ್ತಿದ್ದೆ. ನನ್ನ ಮನೆ ಇರುವುದು ಕರ್ನಾಟಕದ ಮ್ಯನ್ಚೆಸಟರ್, ಬೆಣ್ಣೆ ಹಾಗು ಮಂಡಕ್ಕಿಯ ಊರಾಗಿರುವ ದಾವಣಗೆರೆ. ಇದು ಕರ್ನಾಟಕದ ಹೃದಯ ಭಾಗದಲ್ಲಿದೆ. ನಾನು ಕರ್ನಾಟಕದ ರಾಜಧಾನಿಯಾಗಿರುವ ಬೆಂಗಳೂರಿನ ಒಂದು software ಕಂಪನಿಯಲ್ಲಿ ಕೆಲಸ ಮಾಡುತ್ತಿದೆನೆ. ಅಂದು ವಿಪರಿತ ಕೆಲಸ, ನಾನು ಮನೆಗೆ ಹೋಗುತ್ತೆನೋ ಇಲ್ಲವೋ ಗೊತ್ತಿರಲ್ಲಿಲ್ಲಾ, ನನ್ನ ಬಾಸ್ ಸ್ವಲ್ಪ ಒಳ್ಳೆಯವರಾಗಿದ್ದರು ಹೆಗೋಮಾಡಿ 3 ದಿನ ರಜೆ ಕೊಟ್ಟರು. ಅಲ್ಲಿಗೆ ನನ್ನ ಪಯಣ ಶುರು...
ಬೆಂಗಳೂರಿನಿಂದ ದಾವಣಗೆರೆಗೆ 2 ಮಾರ್ಗಗಳಿವೆ, ಒಂದು ರೈಲು ಮಾರ್ಗ ಹಾಗು ರಸ್ತೆ ಮಾರ್ಗ. ರೈಲಿನಲ್ಲಾದರೆ ನೀವು 320 ಕಿಲೋಮಿಟರ್ ಕ್ರಮಿಸಬೇಕು. ಹಾಗೆ ರಸ್ತೆಯಲ್ಲಾದರೆ 260 ಕಿಲೋಮಿಟರ್. 2 ಮಾರ್ಗಗಳು ತೆಗೆದುಕೊಳ್ಳುವ ಸಮಯ 5 ರಿಂದ 6 ಘಂಟೆ. ಆ ದಿನದ ಮಟ್ಟಿಗೆ, ಸಾಮಾನ್ಯ ರೈಲಿನ ಪಯಣಕ್ಕೆ 50 ರು, ಇಂಟರ್ ಸಿಟಿ ರೈಲಿನಲ್ಲಾದರೆ 89 ರು, ಮಲಗುವುದಾದರೆ 102 ರು ಹಾಗೆ ಸಾಮಾನ್ಯ ಬಸ್ಸಿನಲ್ಲಾದರೆ 190 ರು. ಬಹುಷಃ ಇದು ಕೊಡ ಒಂದು ಕಾರಣ ಇರಬಹುದು ನಾನು ರೈಲಿನಲ್ಲಿ ಹೋಗಲು.
ನಾನು ಇಷ್ಟು ಇಷ್ಟ ಪಡುವ ರೈಲಿನ ಬಗ್ಗೆ ಸ್ವಲ್ಪ ಮಾಹಿತಿ ಕೊಡಲು ಇಷ್ಟ ಪಡುತ್ತೆನೆ. ಏಕೆಂದರೆ ನನ್ನ ಮುಂದಿನ ಕಥೆಗೆ ಇದು ತುಂಬಾ ಉಪಕಾರಿ. ನೀವು ಏನಾದರು ರೈಲಿನಲ್ಲಿ ಮಲಗಿಕೊಂಡು ಹೋಗಿದ್ದೆ ಆದರೆ ಇದು ನಿಮಗೆ ಗೊತ್ತಿರಬಹುದು. ಒಂದು ರೈಲಿನ ಭೋಗಿಯಲ್ಲಿ 72 ಜನ ಮಲಗಬಹುದು, ಅಂದರೆ 8 ಜನ ಮಲಗುವ 9 ಕಂಪಾರ್ಟಗಳಿರುತ್ತವೆ. ಹೀಗೆ 8 ಜನ ಮಲಗುವ ಒಂದು ಕಂಪಾರ್ಟ ಅನ್ನು ರೈಲಿನಲ್ಲಿ ಹೀಗೆ ವಿಂಗಡಿಸುತ್ತಾರೆ. LB-Lower Berth, MB-Middle Berth,UB-Upper Berth,SL- Side Lower, SU- Side Upper. ಅಂದರೆ ಒಂದು ಕಂಪಾರ್ಟನಲ್ಲಿ ಒಟ್ಟು 2-LB,2-MB,2-UB,1-SL,1-SU ಇರುತ್ತದೆ. ರೈಲಿನಲ್ಲಿ ಮಲಗುವುದೆಂದರೆ, ಮಗುವನ್ನು ತೋಟ್ಟಿಲ್ಲಲ್ಲಿ ಮಲಗಿಸಿ, ತೋಗಾಡಿಸಿ, ಸಣ್ಣಕ್ಕೆ ಕೂಗುವ ರೈಲಿನ ಶಬ್ಧ ನಿಮ್ಮ ತಾಯಿಯು ನಿಮಗೆ ಮಲಗಿಸುವಾಗ ಕಥೆ ಹೇಳಿದಹಾಗೆ ಆಗುತ್ತದೆ. ಇಷ್ಟು ರೈಲಿನ ವಿವರ ಸಾಕು ನನ್ನ ಕಥೆಗೆ.
ಅಂದು ಮಂಗಳವಾರ ಎಲ್ಲವು ಮಂಗಳಕರವಾಗಲಿ ಎಂದು ಆಫಿûಸ್ನಿಂದ ಸಂಜೆ 6 ಗಂಟೆಗೆ ಹೊರಟೆ, ರೂಮಿಗೆ ಬಂದು ಸ್ವಲ್ಪ ಮರೆತಿರುವ ಬಟ್ಟೆಗಳನ್ನು ಬ್ಯಾಗಿನಲ್ಲಿ ಹಾಕಿಕೊಂಡೆ. ನನ್ನ ಬೆನ್ನು ಅಳಲು ಆರಂಬಿಸಿತು. ಸಣ್ಣಕ್ಕೆ ಒಂಟೆಯ ಹಾಗಿದ್ದ ನನ್ನ ಬ್ಯಾಗು, ಆನೆಯ ಹಾಗೆ ಊದಿಕೊಂಡಿತ್ತು. ಅಂದು ನನ್ನ ಬೆನ್ನಿಗೆ ಅಮಂಗಳವಾರ. ಹೋಗುವುದು ರಾತ್ರಿಯ ರೈಲಿನ ಮಲಗುವ ಪಯಣವಾದರು ನಾನು 80 ಹಾಗು 90 ರ ಹಿರೋಗಳಹಾಗೆ ಡ್ರೆಸ್ಸ್ ಮಾಡಿಕೋಂಡೆ. ತಲೆಗೆ ತಿಳಿಯಾದ ಎಣ್ಣೆ, ನಿರಿನಿಂದ ಮುಖಕ್ಕೆ ಸ್ನಾನ, ನೀಲಿ ಬಣ್ಣದ ಟಿ-ಶರ್ಟ್, ಅದರ ಮೇಲೆ ಸ್ವೆಟ್ಟೆರ್, ನೀಲಿ ಬಣ್ಣದ ಶರಾಯಿ, ಕಾಲಿಗೆ ಬೂಟು ಹೇಳಲು ನನಗೆ ನಾಚಿಕೆಯಗುತ್ತದೆ. ಮಲಗಲು ಇಷ್ಟೆಲ್ಲಾ ಮಾಡಿಕೊಳ್ಳಬೇಕೆ ಎಂದು.
ಅಂತು ನಮ್ಮ ಹಿರೋನ ಡ್ರೆಸ್ಸಿನ್ಗ್ ಆಯಿತು. ಬನ್ನಿ ಈಗ ನನ್ನ ಪಯಣ ಬೆಂಗಳೂರಿನ ಬಿ.ಎಮ್.ಟಿ.ಸಿ ಬಸ್ಸಿನಲ್ಲಿ. ಬೆಂಗಳೂರಿನ ತಾವರೆಕೆರೆಯಲ್ಲಿ ವಾಸವಾಗಿದ್ದ ನಾನು, ಅಲ್ಲಿಂದ ಮೆಜೆಸ್ಟಿಕ್ನ ರೈಲು ಸ್ಟೆಶನ್ಗೆ ಇರುವ ಅಂತರ ಕೇವಲ 8 ಕಿಲೋಮಿಟರ್, ಆದರೆ ಬೆಂಗಳೂರಿನ ಬಿ.ಎಮ್.ಟಿ.ಸಿ ಯಲ್ಲಿ ನೀವು ಕನಿಷ್ಟವೆಂದರು 1 ಗಂಟೆ ಕೂರಬೇಕು. ಅಂದರೆ 1 ಗಂಟೆಯಲ್ಲಿ 30 ರಿಂದ 40 ಕಿಲೋಮಿಟರ್ ಚಲಿಸುವ ಬಸ್ಸುಗಳು, ಬೆಂಗಳೂರಿನ ಒಳಗೆ 8-10 ಕಿಲೋಮಿಟರ್ ಚಲಿಸುತ್ತವೆ. ಬಹುಶಃ ಬೆಂಗಳೂರಿನ ನಿದಾನಗತಿಯ ಮುನ್ನಡೆಗೆ ಇದು ಒಂದು ಕಾರಣವಿರಬಹುದು. ಇದನ್ನು ತಿಳಿದ ನಾನು ಸಂಜೆ 8 ಗಂಟೆಗೆ ರೂಮ್ನ್ನು ಬಿಟ್ಟೆ ಬಿ,ಎಮ್.ಟಿ.ಸಿ ಯಲ್ಲಿ ಪಯಣಕೂಡ ಆಯಿತು, ನಾನು ರೈಲ್ವೆ ಸ್ಟೆಶನ್ಗೆ ಬಂದಾಗ ಬರೂಬ್ಬರಿ ರಾತ್ರಿ 9:30 ಘಂಟೆ.
ವಿಶಾಲವಾದ ಜಾಗದಲ್ಲಿ ಹರಡಿಕೂಂಡಿರುವ ಬೆಂಗಳೂರಿನ ರೈಲು ನಿಲ್ದಾಣ, ಅಲ್ಲೆ ಮುಲೆಯಲ್ಲಿ ಇದ್ದ ಒಂದು ಉಪಹಾರ ಮಂದಿರದಲ್ಲಿ ನನ್ನ ರಾತ್ರಿಯ ಊಟ ಮಾಡಿಕೊಂಡೆ. ದಿನಕ್ಕೆ ಕಡಿಮೆಯಾದರು 5-6 ಲಕ್ಷ ಜನರು ಅಡ್ಡಾಡುವ ಬೆಂಗಳೂರಿನ ರೈಲು ನಿಲ್ದಾಣವದು.
ನನ್ನ ರೈಲು ದಿನಾಲು ಬಿಡುವ ಸಮಯ 10:15 ಎಂದು ನನ್ನ ಟಿಕೆಟಿನಲ್ಲಿ ಬರೆದಿತ್ತು. ಹಾಗೆ ಅದು ಬರುವುದು ಪ್ಲಟ್ಫಾರ್ಮ್ 9 ಅಥವಾ 10 ಎಂದು ಎಲ್ಲರಿಗು ಗೂತ್ತಿರುವ ವಿಷಯ. ಅದರಂತೆಯೆ ನಾನು ಪ್ಲಟ್ಫಾರ್ಮ್ 10 ರಲ್ಲಿ ನಿಂತೆ. ರೈಲಿನಲ್ಲಿ ತಿನಲ್ಲು ಕೆಲವು ಕುರುಕಲು ತಿಂಡಿ ಹಾಗು ಜೂಸ್ ಅನ್ನು ತೆಗೆದುಕೂಂಡೆ ಆಗ ಸಮಯ 10 ಘಂಟೆ. ಮೆಲ್ಲಗೆ ಚಳಿಯಾಗುತಿತ್ತು. ಕಣ್ಣಿನಲ್ಲಿ ನಿದ್ದೆಯು ಬರುತಿತ್ತು. ಎಲ್ಲರು ಆ ರೈಲಿಗಾಗಿ ಕಾಯುತ್ತಿದರು. ಅದು ಹುಬ್ಬಳ್ಳಿ Fast Passenger ರೈಲು 10:05 ಕ್ಕೆ ಮೆಲಕ್ಕೆ ಶಬ್ಧ ಮಾಡುತ್ತ ಬಂದು ನಿಂತ ರೈಲನ್ನು ಹತ್ತಲು ಹೆದರಿದೆ. ಎಕೆಂದರೆ ಅಲ್ಲಿ ಇರುವ ಎಲ್ಲರಿಗು ಗೂಂದಲ, ಅದು ನಿಜವಾಗಿಯು ಹುಬ್ಬಳ್ಳಿ Fast Passenger ಎಂದು ? ಆಗ ಅಲ್ಲಿ ಯಾರು ರೈಲಿಗೆ ಪೆಪರ್ ಹಚ್ಚುತ್ತಾ ಬಂದ, ಎನೆಂದು ನೋಡಿದರೆ ಅದರಲ್ಲಿ ಯಾರು ಪಯಣ ಮಾಡಬಹುದು ಎಂದು ಬರೆದಿತ್ತು. ನನ್ನ ಟಿಕೆಟ್ ಪ್ರಕಾರ ನನ್ನ ರಿಜರ್ವೆಶ್ನ್ S6/0006/UB ಎಂದು ಇತ್ತು. ಅದನ್ನು ಆ ಲಿಸ್ಟ್ನಲ್ಲಿ ಹುಡುಕಿದೆ, ನನ್ನ ಹೆಸರಿತ್ತು. S6/0006/UB ಎಂದರೆ S6 ಬೋಗಿಯಲ್ಲಿ, 6 ಎಂಬ ಸಂಖೆಯ Upper Berth ನಲ್ಲಿ ನಾನು ಮಲಗಿಕೊಳ್ಲಬೇಕು ಎಂದು. ಅಲ್ಲಿಗೆ ನನ್ನ ಒಂದು ರೈಲಿನ ರಾತ್ರಿ ಈಗ ಶುರು.
ನಾನು ನನ್ನ ಟಿಕೆಟ್ ಅನ್ನು ಹಿಡಿದು ರೈಲಿನ ಒಳಗೆ ನಡೆದೆ, ನನ್ನ ಮಲಗುವ ಸಿಟ್ ಅನ್ನು ಹುಡುಕಿದೆ. ನನ್ನ ಮಲಗುವ ಸಿಟ್ ಕಂಪಾರ್ಟನಲ್ಲಿ ಆಗಲೆ ಇಬ್ಬರು ವಯಸ್ಸಾದವರು ಇದ್ದರು. ಅವರಿಬ್ಬರು ಬಹುಷಃ 60 ರಿಂದ 70 ವಯಸ್ಸಿನ ಗಂಡ ಹೆಂಡತಿ. ಅವರು ನನ್ನನ್ನು ನೋಡಿ ಮೆಲ್ಲಗೆ ನಕ್ಕರು, ನಾನು ಕೂಡ ಅವರಿಗೆ ಸಣ್ಣ ನಗೆಯನ್ನು ಬಿರಿದೆ. ನಾನು ಅಗಲೆ ಹೇಳಿದ ಹಾಗೆ ನನ್ನ ಸಿಟ್ S6/0006/UB ಅಂದರೆ ನಾನು ಆ ಕಂಪಾರ್ಟನ ಮೇಲಿನ ಸಿಟಿನಲ್ಲಿ ಮಲಗಬೇಕು ಹಾಗಾಗಿ ನಾನು ನನ್ನ ಆನೆಯನ್ನು ಅಲ್ಲಿ ಇಟ್ಟು ಕೆಳಗೆ ಕುಳಿತುಕೂಂಡೆ.
ನಾನು ತುಂಬಾ ಸೈಲೆಂಟ್ ಹುಡುಗ, ನಾನು ನಾನಾಗಿ ಯಾರನ್ನು ಮಾತನಾಡಿಸುವುದಿಲ್ಲ, ಆದರೆ ಯಾರಾದರು ನನ್ನನ್ನು ಮಾತನಾಡಿಸಿದರೆ ನಾನು ಅವರಿಗೆ ಕೊನೆಯವರೆಗು ಮಾತನಾಡಿಸುತ್ತೆನೆ. ಒಂದು ಅವರಿಗೆ ಅವರ ಊರು ಸಿಗಬೇಕು ಅಥವಾ ಅವರಿಗೆ ನನ್ನ ಮಾತಿನಲ್ಲಿ ಬೋರ್ ಆಗಬೇಕು ಅಲ್ಲಿಯವರೆಗೆ.
ನಾನು ಅಲ್ಲಿಗೆ ಕೂತಾಗ, ಆ ಇಬ್ಬರು ವಯಸ್ಸಾದವರು ನನ್ನನೆ ನೋಡುತ್ತಿದರು. ಅವರು ನನಗೆ ನನ್ನ ಹೆಸರನ್ನು ಕೇಳಿದರು, ನಾನು ಹೇಳಿದೆ ‘ಸಂತೋಷ್’, ನಂತರ ನಾನು ಅವರಿಗೆ ಅವರ ಹೆಸರನ್ನು ಕೆಳಲ್ಲಿಲ್ಲ. ವಯಸ್ಸಿನಲ್ಲಿ ತುಂಬಾ ಹಿರಿಯರಾದ ಅವರನ್ನು ನೋಡಲು ತುಂಬಾ ಖುಷಿಯಾಯಿತು. ನನ್ನ ಕಥೆಯಲ್ಲಿ ಅವರ ತುಂಬಾ ಪಾತ್ರವಿದೆ. ಅದಕ್ಕೆ ಸದ್ಯಕ್ಕೆ ನಾನು ಅವರನ್ನು ಎಕ್ಸ್ (ವಯಸ್ಸಾದ ಗಂಡಸು) ಹಾಗು ವಾಯ್ (ವಯಸ್ಸಾದ ಹೆಂಗಸು) ಎಂದು ಕರೆಯುತ್ತೆನೆ. ಎಕ್ಸ್ ತುಂಬಾ ಮಾತುಗಾರರಾಗಿದ್ದರು ನನ್ನ ತಂದೆಯ ಹಾಗೆ, ಅವರಿಗೆ ಯಾರನ್ನು ಹೇಗೆ ಮಾತನಾಡಿಸಬೇಕೆಂದ ತಿಳಿದ್ದಿತ್ತು. ಎಕ್ಸ್ ಮಲಗಿಕೂಂಡು ಮಾತನಾಡುತ್ತಿದ್ದರು ಹಾಗೆ ವಾಯ್ ನನ್ನ ಪಕ್ಕದಲ್ಲಿ ಕೂತ್ತಿದ್ದರು. ಸಣ್ಣಗೆ ಕುಶಲೂಪರಿ ಶುರುವಾಯಿತು.
ನಾವು ಮಾತನಾಡಿದ್ದು ಹೀಗೆ.
ಎಕ್ಸ್: ನಿನ್ನ ಊರು ?
ನಾನು: ದಾವಣಗೆರೆ
ಎಕ್ಸ್: ಇಲ್ಲಿ(ಬೆಂಗಳೂರು) ಇರಲು ಕಾರಣ ?
ನಾನು: ಇಲ್ಲಿ ನಾನು Software Engineer ಆಗಿ ಕೆಲಸ ಮಾಡುತ್ತಿದ್ದೆನೆ.
ಎಕ್ಸ್: ವಯಸ್ಸು ?
ನಾನು: ಅಲ್ಲಿ ಹೇಳಿದೆ (ಇಲ್ಲಿ ಬೇಡ)
ಎಕ್ಸ್: ಕಂಪನಿಯ ಹೆಸರು ?
ನಾನು: ಅಲ್ಲಿ ಹೇಳಿದೆ (ಇಲ್ಲಿ ಬೇಡ)
ಹೀಗೆ ಮಾತನಾಡುತ್ತಿರುವಾಗ , ಅವರಿಬ್ಬರ ಬಗ್ಗೆ ನಾನು ಕೇಳಿದೆ, ಅವರು ಬೆಂಗಳೂರಿನಿಂದ ಚಿಕ್ಕಜಾಜುರಿಗೆ ಹೋಗುತ್ತಿದರು. ನಾನು ಹೇಳಿದ ಹಾಗೆ ನನ್ನ ಕಂಪಾರ್ಟನಲ್ಲಿ 8 ಜನ ಮಲಗಬಹುದು, ಅದರಲ್ಲಿ ಸದ್ಯಕ್ಕೆ 3 ಜನ ಮಾತ್ರ ಇದ್ದೆವು.
ವಾಯ್: ನಿನ್ನ ಮನೆಯಲ್ಲಿ ಎಷ್ಟು ಜನ ಇದ್ದಾರೆ ?
ನಾನು: ನಮ್ಮದು ಅವಿಭಕ್ತ ಕುಟುಂಬ, 30 ಜನ ಇದ್ದಾರೆ.
ವಾಯ್: ಹೋ!!! 30 ಜನ, ತುಂಬಾ ದೂಡ್ಡ ಕುಟುಂಬ ನಿಮ್ಮದು.
ನಾನು: ಹೌದು ಎ
ವಾಯ್: ಮದುವೆ ?
ನಾನು: ಯಾರದು ?
ವಾಯ್: ನಿನ್ನದಪ್ಪ ?
ನಾನು: ನೋಡಲು ನನ್ಗೆ ಮದುವೆಯಾಗಿದೆ ಅನಿಸುತ್ತದೆಯಾ ?
ವಾಯ್: ಇಲ್ಲ, ಯಾವಾಗ ಆಗುತ್ತಿಯ ಎಂದು ?
ನಾನು: ಇಷ್ಟು ಬೇಗ ಇಲ್ಲ.
ಹೀಗೆ ಮಾತನಾಡುತ್ತಿರುವಾಗ ನನಗೆ ಆಶ್ಚರ್ಯವಾಯಿತು. ಅವರು ನನ್ನನು ತುಂಬಾ ನಂಬಿದ್ದರು. ಅವರ ಪರಸನಲ್ ವಿಷಯಗಳನೆಲ್ಲಾ ನನ್ನ ಹತ್ತಿರ ಹೇಳುತ್ತಿದ್ದರು. ನನಗು ಏನೋ ಖುಷಿ.
ವಾಯ್ ಗೆ ಸರಿಯಾಗಿ ಮಾತನಾಡಲು ಬರುತಿರಲ್ಲಿಲ್ಲಾ, ಮಾತನಾಡುವಾಗ ತೂದಲುತ್ತಿದ್ದರು. ಅವರಿಗೆ ಪ್ಯರಲಿಸಿಸ್ ಆಗಿತ್ತು ಎಂದು ತಮ್ಮ ಹಿಂದಿನ ಮಾತಿನಲ್ಲಿ ಹೇಳಿದ್ದರು. ಹೀಗೆ ನಮ್ಮ ಮನೆಯ ಬಗ್ಗೆ, ಅವರ ಮನೆಯ ಬಗ್ಗೆ ಮಾತನಾಡುತ್ತಿದೆವು. ನಾನು ಯಾವತ್ತು ರೈಲಿನಲ್ಲಿ ಇಷ್ಟೇಲ್ಲಾ ಮಾತನಾಡಿರಲ್ಲಿಲ್ಲ. ಹೀಗೆ ಮಾತನಾಡುತಿರುವಾಗ ನಮ್ಮ ಕಂಪಾರ್ಟಾಗೆ ಮತ್ತೆ 3 ಜನ ಬಂದರು. ಅವರು ಒಬ್ಬ ಗಂಡಸು, ಇಬ್ಬರು ಹೆಂಗಸು.
ಅವರು 3 ಜನ ನನ್ನ ಎದುರಿಗೆ ಬಂದು ಅವರ ಮಲಗುವ ಜಾಗವನ್ನು ಹುಡುಕುತ್ತಿದ್ದರು. ಆ ಗಂಡಸು ನನಗೆ ತನ್ನ ಟಿಕೇಟ್ ಅನ್ನು ತೋರಿಸಿ ಇ ಸೀಟು ಎಲ್ಲಿದೆ ಎಂದು ಕೇಳಿದನು. ನೋಡಲು ತುಂಬಾ ಡಿಸೆಂಟ್ ಆಗಿ ಇದ್ದ ಅವನ್ನನ್ನು ನೋಡಿ ಹಾಗೂ ಅವನು ನನಗೆ ಕೇಳಿದ್ದರಿಂದ ನನಗೆ ನನ್ನ ಬಗ್ಗೆ ಹೆಮ್ಮೆ ಆಯಿತು. ನಾನು ಅವರಿಗೆ ಸೀಟು ಹುಡುಕಿಕೋಟ್ಟೆ. ಅವರು ನನಗೆ ತ್ಯಂಕ್ಸ್ ಎಂದರು. ಆದರೆ ಇದರಲ್ಲಿ ವಿಚಿತ್ರ ಅಂದರೆ ಆ ಮೂರು ಸಿಟು ನನ್ನ ಎದುರಲ್ಲೆ ಇತ್ತು. ಆಗ ನಮ್ಮ ಕಂಪಾರ್ಟ 3+3 = 6 ಜನರಿಂದ ಕೂಡಿತು. ಹೀಗೆ ನಡೆಯುತಿರುವಾಗÀ ನಮ್ಮ ರೈಲು ಹೋರಡಲು ಆರಂಬಿಸಿತು.
ನಂತರ ನಾನು ಆ ಹೊಸಬರನ್ನು ಮಾತನಾಡಲು ಪ್ರಾರಂಬಿಸಿದೆ
ನಾನು: ನಿಮ್ಮ ಹೆಸರೆನು ?
ಗಂಡಸು: ರಮನಾಥ
ನಾನು: ಗಂಡಸು = ರಮನಾಥ (ಮನಸಿನ್ನಲ್ಲಿ), ಎಲ್ಲಿಗೆ ಹೋಗಬೇಕು ?
ರಮನಾಥ: ಚಿಕ್ಕಜಾಜುರಿಗೆ, ನಿಮ್ಮ ಹೆಸರೆನು?
ನಾನು: ನನ್ನ ಹೆಸರನ್ನು ಹೇಳಿದೆ.
ರಮನಾಥ: ಯಾವ ಊರು ?
ನಾನು: ನನ್ನ ಊರು ಹೇಳಿದೆ.
ರಮನಾಥನು ಚಿಕ್ಕಜಾಜುರಿಗೆ ಎಂದ ಕೂಡಲೆ ಎಕ್ಸ್ ಅವರನ್ನು ತುಂಬಾ ಮಾತನಾಡಿಸಿದ. ಅದು ಇಲ್ಲಿ ಬೇಡ. ಆದರೆ ಎಕ್ಸ್ ಅವನನ್ನು, ಆ ಇಬ್ಬರು ಹೆಂಗಸರು ಯಾರೆಂದು ರಮನಾಥನಿಗೆ ಕೇಳಿದ. ಆಗ ಅವನು, ತನ್ನ ಹೆಂಡತಿ ಹಾಗು ನಾದಿನಿ ಎಂದ. ಹಾಗೆ ಅವರು ಮಾತನಾಡುತ್ತಿದರು.
ಆದರೆ ನಾನು ರಮನಾಥನ ಹೆಂಡತಿಯನ್ನು ನೋಡಿದೆ. ನೋಡಲು ಸುಂದರವಾಗಿದ್ದರು, ಅವರ ಶ್ವೇತವರ್ಣದ ಮೂಖ, ತಿಳಿ ನೀಲಿ ಹಾಗು ಬಿಳಿ ಬಣ್ಣದಿಂದ ಕೂಡಿದ ಸೀರೆ, ಹಣೆಯಲ್ಲಿ ಕೆಂಪು ಕುಂಕುಮ, ತಲೆಯಲ್ಲಿ ಊದ್ದನೆಯ ಕೂದಲು ಮೂಖದಲ್ಲಿ ತುಂಬಾ ಲಕ್ಷಣವಿತ್ತು. ನಾನು ಮನಸಿನಲ್ಲಿ ಅಂದುಕೋಂಡೆ. ನನ್ನ ಬಾಳ ಸಂಗಾತಿಯೂ ಹೀಗೆ ಇದ್ದರೆ ಸಾಕು ಎಂದು. ಏಕೆಂದರೆ ನಾನು ನನ್ನ ಹೆಂಡತಿಯ ಗುಣವನ್ನು ಬದಲಿಸಬಲ್ಲೆ ಆದರೆ ಸೌದರ್ಯವನ್ನಲ್ಲ ಆದ್ದರಿಂದ. ಇನ್ನು ನಾದಿನಿಯು ಕೃಷ್ಣ ಸುಂದರಿ, ಅವರ ಅಕ್ಕನ ಹಾಗೆ ಇಲ್ಲದ್ದಿದ್ದರು ಚುಡಿದಾರದಲ್ಲಿ ಚೆನ್ನಾಗಿಯೇ ಕಾಣುತ್ತಿದರು. ಅವರಿಬ್ಬರ ಹೆಸರು ನಾನೂ ಕೇಳಲ್ಲಿಲ್ಲ ಅವರೂ ಹೇಳಲಿಲ್ಲ ಐ.
ಹೀಗೆ ಮಾತನಾಡುತ್ತಿರುವಾಗ ನಮ್ಮ ಕಥೆಯ ಕಳನಾಯಕನ ಆಗಮನ. ಯಾರಿರಬಹುದು ಎಂದು ಹುಹಿಸುತ್ತಿದ್ದಿರಾ ? ಹುಡುಕಬೇಡಿ ಅವನ್ನನ್ನು ಹುಹಿಸಲು ಆಗುವುದ್ದಿಲ್ಲ. ಹುಹಿಸುತ್ತಿರಾ ? ಹುಹಿಸಿ 1,2,3. . . 100 ಆಗಲ್ಲಿಲ್ಲವಲ್ಲಾ ಹೇಳುತ್ತೆನೆ ಕೇಳಿ. ಎಷ್ಟೋಂದು ಚೆನ್ನಾಗಿ ಮಾತನಾಡುತ್ತಿದ್ದ ನಾನು ಸುಮ್ಮನಾಗಲು ಆ ಕಳನಾಯಕನೆ ಕಾರಣ. ಅವನನ್ನು ಅವನು ಎನಲ್ಲಾ ? ಅಥವಾ ಅವಳು ಎನ್ನಲ್ಲಾ ? ಏಕೆ ಕಂನ್ಫುಸ್ ಆ ? ಎಕೆಂದರೆ ಅವನು + ಅವಳು = ಅವನವಳು (ಮಂಗಳಮುಖಿ, ಹಿಜ್ಡ). ಅವನು ನಮ್ಮ ಕಂಪಾರ್ಟಗೆ ಬಂದು ಎಲ್ಲರ ಹತ್ತಿರ ದುಡ್ದು ಕೇಳುತ್ತಿದ್ದ ಕೂಡಲ್ಲಿಲ್ಲ ಎಂದರೆ ಬಯ್ಯುತ್ತಿದ್ದ ಹಾಗೆ ನನ್ನನ್ನು ಕೇಳಿದ.
ಹಿಜ್ದ: ಹಾಯ್, ಹಾಯ್ ಪೈಸಾ ?
ನಾನು: ಇಲ್ಲಾ
ಹಿಜ್ಡ: ಕೂಡು ಮಾಮ ?
ನಾನು: ಇಲ್ಲ ಹೂಗು.
(ಅಷ್ಟರಲ್ಲಿ ನನ್ನ ವೊಬೈಲ್ ರಿಂಗಾಯಿತು, ನಾನು ಅದನ್ನು ಕಿವಿಯಲ್ಲಿ ಹಿದಿದುಕೋಂಡು ಹಾಗೆ ಅಲ್ಲಿದ ಸ್ವಲ್ಪ್ ದೂರ ಹೋಗಲು ನೋಡಿದೆ)
ಹಿಜ್ಡ: ದುಡ್ಡು ?
ನಾನು: ಸರಿ, ನನಗೆ ಪೂನ್ ಬಂದಿದೆ ?
ಹಿಜ್ಡ: ದುಡ್ಡು ಕೂಡಲ್ಲಿಲ್ಲಾ ಎಂದರೆ ಬಿಡುವವರು ಯಾರು ?
ನಾನು: ಚಿಲ್ಲರೆ ಇಲ್ಲಾ
ಹಿಜ್ಡ: 100 ರೂ ಇದೆಯಾ ? 50 ರೂ ಕೂಡುತ್ತಿನಿ.
ನಾನು: ಏನೂ 50 ರೂ ನಿನಗೆ ಚಿಲ್ಲರೆ ನಾ ?
ಹಿಜ್ಡ: ಮತ್ತೇ ಎಷ್ಟಿದೆ ?
ನಾನು: (ಅವನ ಕಾಟವನ್ನು ತಾಳಲಾರದೆ) ತಗೂ ಎಂದು 5 ರು ಕೊಟ್ಟೆ.
ಹಿಜ್ಡ: ಕೂಡಲ್ಲಿಲ್ಲಾ ಅಂದಿದ್ದರೆ (****) ತಗೆದುಬಿಡುತ್ತಿದ್ದೆ.
ನಾನು: ಹೂಗು ಹೂಗು ಎಂದು (ಮನಸಿನ್ನಲ್ಲಿ ಅಂದುಕೋಂಡೆ).
ನನ್ನ ಜೀವನದಲ್ಲಿ ಅಂತಹ ಘಟಣೆ ನಡೆದಿರಲ್ಲಿಲ್ಲ. ಅದು ರೈಲಿನಲ್ಲಿ ಆಯಿತು. ನನ್ನ ಜೀವನದಲ್ಲಿ ಒಂದು ಡಿಪರೆಂಟ್ ಮಂಗಳಮುಖಿಯ ಜೂತೆ.
ಮಂಗಳಮುಖಿ ಹೋದಾಗಿನಿಂದ ಎಲ್ಲರೂ ನನ್ನನ್ನು ನೋಡುವ ರೀತಿಯೆ ಬೇರೆಯಾಯಿತು. ಕೇಲವರು ನೋಡಿ ನಗುತ್ತಿದರು, ಕೆಲವರು ಮನಸಿನಲ್ಲಿ ಪಾಪ ಎಂದರು. ಅಗ ನಾನು ಎಲ್ಲರಿಗೂ ಮಂಗಳಮುಖಿಯ ಬಗ್ಗೆ ಒಂದು ಸಣ್ಣ ಬಾಷಣ ಕೊಟ್ಟೆ. ಎಲ್ಲರೂ ಸುಮ್ಮನೆ ಕೇಳುತಿದ್ದರು. ಅದು ಹಾಗೆ ನಡಿಯಿತು. ನಿಮಗೆ ತಿಳಿದಿರುವ ಹಾಗೆ ನಮ್ಮ ಕಂಪಾರ್ಟನಲ್ಲಿ 6 ಜನ ಇದ್ದಿವಿ ಮತ್ತೆ 8-6=2 ಜನ ಯಾರು ? ಎಕೆಂದರೆ ನಮ್ಮ ಕಂಪಾರ್ಟ ತುಂಬಲು ಇಬ್ಬರು ಬೇಕು ಅಲ್ಲವೆ ? ಹಾಗಾದರೆ ಕೇಳಿ.
ಏನೊ ನನಗು ಗೊತ್ತಿಲ್ಲಾ ಎಲ್ಲರು ನನ್ನನು ಮಾತನಾಡಿಸುತ್ತಿದ್ದರು. ಆಗ ಎಕ್ಸ್ ನನಗೆ ಹೀಗೆ ಕೇಳಿದ.
ಎಕ್ಸ್: ನೀನು ಮಲಗುವುದು ಎಲ್ಲಿ ?
ನಾನು: ಇಲ್ಲೆ UB006 ನಲ್ಲಿ
ಎಕ್ಸ್: ಹೋ ಮೇಲೆ ?
ನಾನು: ಹಾ... ನನ್ನ ರೈಲಿನ ಇಷ್ಟವಾದ ಜಾಗ. ಹಾಗು ತುಂಬಾ ಸೆಪ್ ಕೂಡಾ. ತುಂಬಾ ಮೇಲಾಗಿರುವುದರಿಂದ ಯಾರ ತೊಂದರೆಯು ಇರುವುದಿಲ್ಲಾ. ಕೆಳಗೆ ಮಲಗುವುದಾದರೆ ಹೀಗೆ ಸಮ್ಮನೆ ಕೋತಿರಬೇಕು. ಮತ್ತೆ ಜನರು ಮೇಲಿಂದ ಇಳಿಯುವಾಗ ಮತ್ತು ಹತ್ತುವಾಗ ಅವರ ಪಾದವನ್ನು ನೋಡಬೇಕಾಗುತ್ತದೆ.
ಎಕ್ಸ್: ನೀನು ಯುವಕ ಹತ್ತುತ್ತಿಯ, ನಮ್ಮಲ್ಲಿ ಆಗುವುದಿಲ್ಲ.
ನಾನು: ಅದು ಕೂಡ ನಿಜ.
ಎಕ್ಸ್: ಆದರೆ ಮೇಲೆ ಮಲಗಿದರೆ ಯಾರು ಎಬ್ಬಿಸುವುದಿಲ್ಲಾ ?
ನಾನು: ಯಾರು ಯಾಕೆ ಎಬ್ಬಿಸಬೇಕು ? ನಾನು ಯಾವಾಗಲು ಕರೆಕ್ಟ ಆಗಿ ಎದ್ದಿದ್ದೆನೆ.
ಎಕ್ಸ್: ಹುಶಾರ್ ಈಸಲಿ ಹುಬ್ಬಳ್ಳಿಗೆ ಹೋದರು ಹೋದೆ.
ನಾನು: ಸಾದ್ಯನೆ ಇಲ್ಲಾ.
ಹೀಗೆ ನಾನು ಅವರಿಗೆ ನನ್ನ ಬಗ್ಗೆ ಹೇಳುತ್ತಿದ್ದೆ. ಹಾಗೆ ಮದ್ಯ ಮದ್ಯ ನನಗೆ ಎನೋ ಖುಷಿ. ನನಗೆ ಇಷ್ಟ್ಟೆಲ್ಲಾ ಮಾತನಾಡಿಸುವವರು ಇದ್ದಾರಲ್ಲವೆ ಎಂದು. ಹೀಗೆ ಮಾತನಾಡುತ್ತಿರುವಾಗ ಎಕ್ಸ್ ತನ್ನ ಮೂಮ್ಮಗಳ ಬಗ್ಗೆ ಹೇಳಲು ಶುರು ಮಾಡಿದ.
ಎಕ್ಸ್: ನನಗೆ ಒಬ್ಬ ವೋಮ್ಮಗಳು ಇದ್ದಾಳೆ ಹೆಸರು ಶ್ರುತಿ ಎಂದು. ಅವಳು ಕೂಡಾ ಬೆಂಗಳೂರಿನಲ್ಲಿ ಸಾಪ್ಟ್ವೇರ್ ಇಂಜಿನಿಯರ್, ಎಲೆಕ್ತ್ರಾನಿಕ ಸಿಟಿಯಲ್ಲಿ ಕೆಲಸಮಾಡುತ್ತಿದ್ದಾಳೆ.
ನಾನು: ಹೂ ಹೌದೆ, ಯಾವ ಕಂಪನಿ ?
ಎಕ್ಸ್: ಗೋತ್ತಿಲ್ಲಾ, ನನಗೆ ಅದು ನೆನಪಿಲ್ಲ.
ನಾನು: ಆಯಿತು.
ಎಕ್ಸ್: ನೀನೆ ಆಕೆಗೆ ಕೆಳುವೆಯಂತೆ.
ನಾನು: ಕೆಳುವೆಯಂತೆ ? ಅಂದರೆ ನಾನು ಅವರನ್ನು... ಹೇಗೆ ?
ಎಕ್ಸ್: ನನ್ನ ಮೂಮ್ಮಗಳು ಇಲ್ಲೆ ತುಮಕೂರಿನಲ್ಲಿ ರೈಲನ್ನು ಹತ್ತುತ್ತಿದ್ದಾಳೆ, ಮೇಲಿನ ಒಂದು ಜಾಗ ಅವಳದೆ.
ನಾನು: ಅವರು ಎಲ್ಲಿ ಇಳಿಯುತ್ತಾರೆ ?
ಎಕ್ಸ್: ಚಿಕ್ಕಜಾಜುರು.
ನಾನು: ಒಳ್ಲೆಯದೆ ಆಯಿತು.. ನಿಮಗು ನಿಮ್ಮ ಮೂಮ್ಮಗಳ ಜೂತೆ ಹೋಗುವಂತಾಯಿತು.
ಎಕ್ಸ್: ಹ್ಮ್.. ಹೌದು.
ನಾನು: ನೀವೆ ಹೇಳಿದ ಹಾಗೆ, ನಿಮ್ಮ ವೋಮ್ಮಗಳು ಬಂದ ಕೋಡಲೆ ನನ್ನನು ಎಬ್ಬಿಸಿ ನಾನೇ ಅವರನ್ನು ಕೇಳುತ್ತೆನೆ.
ಎಕ್ಸ್: ನಿನ್ನ ವೋಬೈಲ್ ನಂಬರ್ ಏನು ?
ನಾನು: ಏಕೆ ?
ಎಕ್ಸ್: ಹೀಗೆ ಮುಂದೆ ಸಿಕ್ಕಾಗ ಬೇಕಾಗಬಹುದು..
ನಾನು: ತಗೆದುಕೂಳ್ಳಿ 9********4 (9********4)
ಎಕ್ಸ್: ಒಳ್ಳೆಯದು.
ಹೀಗೆ ಮಾತನಾಡುತ್ತಿರುವಾಗ...
ನಾನು: ತುಂಬಾ ಹೋತ್ತಾಯಿತು ನಾನು ಮಲಗಲು ಹೋಗುತ್ತೆನೆ.
ಎಕ್ಸ್: ಹೌದಾ, ನನಗು ತುಂಬಾ ಹೊತ್ತಾಯಿತು.
ರಮನಾಥ: ಹೌದು ತುಂಬಾ ರಾತ್ರಿ ಆಯಿತು.
ಹೀಗೆ ಮಾತನಾಡಿದ ಮೇಲೆ, ಎಲ್ಲರು ತಮ್ಮ ತಮ್ಮ ಜಾಗಕ್ಕೆ ಮಲಗಲು ಹೋದರು. ಎಕ್ಸ್- ನನ್ನ ಎದರುಗಡೆಯ LB ವಾ0iÀiï- ನನ್ನ ಸಾಲಿನ LB ರಮನಾಥ- ನನ್ನ ಸಾಲಿನ MB, ರಮನಾಥನ ಹೆಂಡತಿಯು - ನನ್ನ ಎದರುಗಡೆಯ SU ಹಾಗು ರಮನಾಥನ ನಾದಿನಿಯು - ನನ್ನ ಎದರುಗಡೆಯ SL ನಲ್ಲಿ ಮಲಗಿದರು. ಎಕ್ಸ್ ದೇಹಕ್ಕೆ ಸುಸ್ತಾಗಿತ್ತೇ ಹೋರತ್ತು ತಮ್ಮ ಬಾಯಿಗೆ ಅಲ್ಲ. ಅವರು ನನಗೆ ಏನನ್ನೋ ಹೇಳಲು ಇಚ್ಚಿಸುತ್ತಿದರು. ಹೀಗೆ ಮಲಗುತ್ತಿರುವಾಗ ಮನಸ್ಸಿನಲ್ಲಿ ಅಂದುಕೋಂಡೆ, ಬೆಂಗಳೂರಿನಿಂದ ತುಮಕೂರಿಗೆ 60 ಕಿಲೋಮಿಟರ್, ಆಗಲೆ ಒಂದು 30 ಕಿಲೋಮಿಟರ್ ನಮ್ಮ ರೈಲು ಬಂದಿರಬಹುದು. ಎಕ್ಸ್ ವೋಮ್ಮಗಳು ನಿಜವಾಗಿಯು ಬರುತ್ತಾಳ ? ಬಂದರು ಎಕ್ಸ್ ನನನ್ನು ಎಬ್ಬಿಸುತ್ತಾರ ? ಯಾರಾದರು ಒಬ್ಬನನ್ನು ಇಷ್ಟು ನಂಬುತ್ತಾರ ? ಅದು ಹುಡುಗಿಯರ ವಿಷಯದಲ್ಲಿ ? ಅಕ್ಸ್ಮಾತ್ ಎಬ್ಬಿಸಿದರು ನಾನು ಅವರನ್ನು ಕೇಳುತ್ತೆನಾ ?
(ನೋಡಿ ಚಿಕ್ಕ ಬ್ರೇಕ್ ನ ನಂತರ)
ನಾನು ಮಲಗಿದ್ದಾಗ ನನ್ನ ವೊಬೈಲಗೆ ಮೆಸೆಜ್ ಶಬ್ದ ಬಂತು. ಯಾರದು ಎಂದು ನೋಡಿದಾಗ ಅದು ಅನ್ನೌನ ನಂಬರ್ ಆಗಿತ್ತು. ಅದರಲ್ಲಿ ಬರೆದಿತ್ತು.
ವೊಬೈಲ: ಹಾಯ್
ನಾನು: ನೀವು ಯಾರು ?
ವೊಬೈಲ: ನೀನು ಕಾಯುತ್ತಿರುವವಳು..
ನಾನು: ...ವಳು ? ಅಂದರೆ, ನೀನು ಹುಡುಗೀನಾ ?
ವೊಬೈಲ: ಹೋ ನಿನಗು ಕನ್ನಡ ಬರುತ್ತೆ. . . ತುಂಬಾ ಷಾರ್ಪ್.
ನಾನು: ಆದರೆ ನಾನು ಯಾರನ್ನು ಕಾಯುತ್ತಿಲ್ಲವಲ್ಲ ?
ವೊಬೈಲ: ಸುಳ್ಳು ಹೆಳಬೇಡ, ನಿಜವಾಗಿ ಹೇಳು ?
ನಾನು: ಹೇ ಯಾರು ನೀನು ? ನನಗನಿಸ್ಸುತ್ತೆ ನೀನು ನನ್ನ ಗೆಳೆಯನೆಂದು. ಸುಮ್ಮನೆ ನಾಟಕ ಮಾಡಬೇಡ. ಏನು ಹೋಸ ನಂಬರ್ ತಗೂಂಡಿದ್ದಿಯಾ ?
ವೊಬೈಲ: ಹಳೆ ನಂಬರೇ, ಆದರೆ ನಿನಗೆ ಹೋಸದು. ಯಾಕೆಂದರೆ ಇವತ್ತೆ ನಾನು ನಿನಗೆ ಮೆಸೆಜ್ ಮಾಡಿರುವುದು. ಹಾಗೆ ನಾನು ನಿನ್ನ ಗೆಳತಿ ಇವತ್ತಿನಿಂದ.
ನಾನು: ನೋಡಿ ನೀವು ಯಾರು ಎಂದು ಗೂತ್ತಿಲ್ಲಾ, ನೀವು ಹೇಳುತ್ತಿಲ್ಲಾ, ನನಗೆ ಗೂತ್ತಿಲ್ಲದವರ ಹತ್ತಿರ ಮಾತನಾಡುವುದು ಎಂದರೆ ಆಗುವುದಿಲ್ಲಾ, ಆದರೆ ಒಂದಂತು ನೀಜ ನೀನು ನನ್ನ ಗೆಳೆಯನೆ, ನಿನಗೆ ಇಷ್ಟ ಇದ್ದರೆ ಹೇಳು ಇಲ್ಲದ್ದಿದರೆ ಬಿಡು.
ವೊಬೈಲ: ನಿನ್ನ ಹೆಸರು ಸಂತೋಷ್ ತಾನೆ ?
ನಾನು: ಹೌದು
ವೊಬೈಲ: ಊರು ದಾವಣಗೆರೆ ತಾನೆ ?
ನಾನು: ಹೌದು.
ನಾನು: ಹೇ ನಿನ್ನ ಹೆಸರೆನು ?
ವೊಬೈಲ: ಹೇ ಇಷ್ಟ ಬೇಗ ಮರೆತೆಯಾ ?
ನಾನು: ಮರೆತೆಯಾ ?, ನೀನು ಯಾವಾಗ ಹೇಳಿದೆ ?
ವೊಬೈಲ: ನಾನು ಹೇಳಲ್ಲಿಲ್ಲ ಆದರೆ ನಿನಗೆ ಗೂತ್ತು.
ನಾನು: ಗೂತ್ತಾ ?
ವೊಬೈಲ: ಹಾ, ನೆನಪಿಸಿಕೂ
ನಾನು: ಏನಾದರು ಸುಳಿವು ?
ವೊಬೈಲ: ಹಾ ನನ್ನ ಹೆಸರು ಸಂಗೀತದಲ್ಲಿದೆ.
ನಾನು: ಸಂಗೀತದಲ್ಲಿ ? ಮತ್ತೆನಾದರು ಸುಳಿವು ?
ವೊಬೈಲ: ನಾನು ಬೆಂಗಳೂರಿನಿಂದ 60 ಕಿಲೋಮಿಟರ್ ದೂರದಲ್ಲಿರುವ ಊರಿನಿಂದ ಹತ್ತಿದ್ದೆನೆ.
ನಾನು: ಹೋ ನೀವು ಶ್ರುತಿನಾ ?
ವೊಬೈಲ: ವಾವ್. . . ಹೌದು ಎ
ನಾನು: ನಿಮ್ಮ ತಾತ ಹೇಳಿದ್ದರು, ನೀವು ಬಂದಾಗ ನನ್ನನ್ನು ಎಬ್ಬಿಸುತ್ತೆನೆ ಎಂದು, ಆದರೆ ಈ ರೀತಿ ಎಂದು ತಿಳಿದಿರಲ್ಲಿಲ್ಲ.
ವೊಬೈಲ: ನಾನು ಬಂದಾಗ ಅವರಿಗೆ ಹೇಳಿದ್ದೆ ಎಬ್ಬಿಸಬೇಡಿ ಎಂದು.
ನಾನು: ಹೂ ಕೂಲ್ ಎ
ನಾನು: ನೀನು ಎಲ್ಲಿ ಮಲಗಿದ್ದಿಯಾ ?
ವೊಬೈಲ: ಇಲ್ಲೆ ನಿನ್ನ ಪಕ್ಕದಲ್ಲಿ, ಅಂದರೆ ನಿನ್ನ ಎದರುಗಡೆಯ ಕೆಳಗಡೆಯ ಬೆಡ್.
ನಾನು: ಅಂದರೆ ಎದರುಗಡೆಯ ಒiಜಜಟe ಃeಡಿಣh ಅಲ್ಲಿಯೇ ?
ವೊಬೈಲ: ಹೌದು.
ಆಗ ನಾನು ನನ್ನ ಮಲಗಿದ ಸ್ಥಾನದಿಂದ ಇಣುಕಿ ನೂಡಿದೆ, ರೈಲಿನಲ್ಲಿ ತುಂಬಾ ಕತ್ತಲ್ಲಿತ್ತು. ಹಾಗೂ ನನ್ನ ಕಂಪಾರ್ಟಾ ¥sóÀುಲ್ ಆಗಿತ್ತು. ಅಂದರೆ ಆ ಉಳಿದ 2 ಜನ ಬಂದ್ದಿದ್ದರು. ಸ್ವಲ್ಪ ಮಂದ ಬೆಳಕಿದ್ದುದ್ದರಿಂದ ನೂಡಲು ಸಾದ್ಯವಾಯಿತು. ಆಗ ನಾನು ರೈಲಿನ ಕಂಪಾರ್ಟನ ದೀಪವನ್ನು ಹಚ್ಹಲು ಹೋದೆ. ನನಗೆ ಒiಜಜಟe ಃeಡಿಣh ನಲ್ಲಿ ಒಂದು ಕಂದು ಬಣ್ಣದ ಚಾದರ ಕಾಣಿಸಿತು, ಆ ಚಾದರದಲ್ಲಿ ಅವರ ಮುಖ ಕಾಣಲ್ಲಿಲ್ಲಾ (ಅಷ್ಟರಲ್ಲಿ)
ವೊಬೈಲ: ಹೇ ನನ್ನನು ನೋಡಲು ಅಷ್ಟ್ಂದು ಕುತುಹಲ ನಾ ?
ನಾನು: (ನನಗೆ ಸ್ವಲ್ಪ ಮುಜುಗರವಾಯಿತು) ಹೇ ಎನೋ ಇಲ್ಲಾ, ಬೆನ್ನಿಗೆ ಎನೋ ಚುಚ್ಚಿದ ಹಾಗೆ ಆಯಿತು. ಅದಕ್ಕೆ ದೀಪವನ್ನು ಹಚ್ಚಿದೆ.
ವೊಬೈಲ: ಇವೆಲ್ಲಾ ನಾಟಕ ಬೇಡ, ನೀವು ಹುಡುಗರು ಎಲ್ಲಾ ಒಂದೆ ಜಾತಿ
ನಾನು: ಏನು ಒಂದು ಜಾತಿ ?
ವೊಬೈಲ: ಯಾರಾದರು ಹುಡುಗಿ ಕಂಡರೆ ಸಾಕು, ಅವಳನ್ನು ನೋಡಬೇಕು ಎಂದು ಹಾತೂರೆಯುತ್ತಿರಾ ?
ನಾನು: ಹೇ ಹುಡುಗರು ಒಂದೆ ಜಾತಿನೇ ?, ಅದರಲ್ಲು ಪಂಗಡಗಳಿವೆ ?
ವೊಬೈಲ: ನಿನ್ನದು ಯಾವ ಪಂಗಡ ?
ನಾನು: ಒಳ್ಳೆಯ ಹುಡುಗರ ಪಂಗಡ.
ವೊಬೈಲ: ಹುಡುಗಿಯರನ್ನು ನೋಡುವುದು ಕೆಟ್ಟ ಕೆಲಸಾನಾ ?
ನಾನು: ಅದು ನೀನೆ ಹೇಳಬೇಕು, ಹುವು ಇದ್ದ ಕಡೆ ದುಂಬಿ ಬರುವುದು ಸಹಜ , ಅದು ದುಂಬಿಯ ತಪ್ಪಲ್ಲ, ಇಲ್ಲಿ ನಿಜವಾದ ತಪ್ಪು ಹೂವಿನ ಮಕರಂದದ್ದು.
ವೊಬೈಲ: ಹುಡುಗಿಯರು ಚೆನ್ನಾಗಿ ಕಾಣುವುದು ಅವರ ಇಷ್ಟ
ನಾನು: ಹುಡುಗರಿಗೆ ಕಷ್ಟ.
ವೊಬೈಲ: ಯಾಕೆ ?
ನಾನು: ಏಕೆಂದರೆ , ಅದು ಹುಡುಗಿಯರಿಗೆ ಇಷ್ಟ, ನೀವು ಮೇಕಪ್ ಮಾಡಿಕೋಳ್ಳುವುದೆ ಅದಕ್ಕಾಗಿ ಹುಡುಗರು ನಿಮ್ಮನು ನೋಡಲಿ ಎಂದು, ಅತಿಯಾಗಿ ಬಣ್ಣ ಬಳೆಯುವ ಸಣ್ಣ ಜಾಗವೆಂದರೆ ಹುಡುಗಿಯರ ಮುಖ.
ವೊಬೈಲ: ಹಾಗೆನಿಲ್ಲಾ ?
ನಾನು: ಹಾಗೆ ಯೆಲ್ಲಾ.
ವೊಬೈಲ: ಆ ಮಾತು ಬಿಡು, ಬೇರೆ ವಿಷಯ ?
ನಾನು: ಏಕೆ ಬಿಡಬೇಕು ? ನಿಜ ಹೆಳಿದೆಯೆಂದಾ ?
ವೊಬೈಲ: ಅಯ್ಯ್ ಮಹರಾಯ ಬಿಡಪ್ಪಾ ?
ನಾನು: ಒಕೆ ಒಕೆ, ಆಯಿತು.
ನಾನು: ಮತ್ತೆ ನಿನ್ನ ಮುಖ ದರ್ಶನ ?
ವೊಬೈಲ: ನಿನಗೆ ನನ್ನ ಮುಖ ತೂರಿಸುವುದಿಲ್ಲಾ.
ನಾನು: ಏಕೆ ?
ವೊಬೈಲ: ನೀನು ಎಲ್ಲರಂತಲ್ಲ, ನಿನ್ನ ಜೂತೆ ಮಾತನಾಡುವಾಗ ಹುಷಾರಾಗಿ ಮಾತಾಡಬೇಕು.
ನಾನು: ಅದಕ್ಕೆ ಹೇಳಿದ್ದು, ನಾನು ಎಲ್ಲರಂತಲ್ಲಾ, ಹಾಗು ನಾನು ಅವರಲ್ಲ.
ವೊಬೈಲ: ನಿನ್ನ ಮಾತುಗಾರಿಕೆ ನೋಡಿದರೆ ತುಂಬಾ ಇಷ್ಟ ಆಗುತ್ತಿಯಾ ?
ನಾನು: ತುಂಬಾ ಇಷ್ಟ ಪಡಬೇಡಾ, ಆಮೇಲೆ ಕಷ್ಟ ಆಗುತ್ತೆ.
ವೊಬೈಲ: ಹಾ ಹಾ. . . ಆಯಿತು. ನಿನ್ನ ಇ-ಮೇಲ್ ವಿಳಾಸ ?
ನಾನು: kurdekar.santosh@gmail.com , ನಿನ್ನದು ?
ವೊಬೈಲ: ಅಲ್ಲಿ ಹೇಳಿದಳು (ಇಲ್ಲಿ ಬೇಡ)
ವೊಬೈಲ: ಮತ್ತೆ ವಿಷೆಶಾ ?
ನಾನು: ಮತ್ತೆ ನಿನ್ನ ಮುಖ ತೋರಿಸುವುದಿಲ್ಲಾ ಅಂತಿಯಾ, ಅಟ್ಲಿಸ್ಟ್ ಮುಖ ಲಕ್ಷಣ ಅಥವಾ ಗುಣ ಲಕ್ಷಣ.
ವೊಬೈಲ: ಅದನ್ನು ನೀನೆ ಹೇಳಬೇಕು ? ನಾನೇ ಹೇಳಿದರೆ ಅದು ನನ್ನ ಬಗ್ಗೆ ನಾನೆ ಹೇಳಿದ ಹಾಗೆ ಆಗುತ್ತದೆ.
ನಾನು: ಹೋಗಲಿ ನಿನ್ನ ಬಗ್ಗೆ ಹೇಳು ?
ವೊಬೈಲ: ನನ್ನ ಹೆಸರು ನಿನಗೆ ತಿಳಿದಿದೆ.
ನಾನು: ಹೌದು.
ವೊಬೈಲ: ನಾನು ಮಾಡುತ್ತಿರುವ ಕೆಲಸ ?
ನಾನು: ಗೂತ್ತು, ಇಂಜಿನಿಯರ್.
ವೊಬೈಲ: ಒದ್ದಿದ್ದು ಗೂತ್ತಾ ?
ನಾನು: ಇಲ್ಲಾ.
ವೊಬೈಲ: ಓದಿದ್ದು ತುಮಕೂರಿನ ಸಿದ್ದಗಂಗಾ ಕಾಲೇಜಿನಲ್ಲಿ, ಏಲೆಕ್ಟ್ರಾನಿಕ್ಸ್.
ನಾನು: ಹೂ ಹೂ ಕೂಲ್ ಎ, ನಿನ್ನ ಮನೆಯಲ್ಲಿ ಯಾರಾರು ಇದ್ದಾರೆ ?
ವೊಬೈಲ: ನಾನು, ನನ್ನ ತಮ್ಮ, ಅಪ್ಪ, ಅಮ್ಮ, ಅಕ್ಕನ ಮದುವೆಯಾಗಿದೆ.
ನಾನು: ಹೊ. . . ನಿನ್ನದು ಚಿಕ್ಕ ಸಂಸಾರ ಆನಂದ ಸಾಗರ.
ವೊಬೈಲ: ನಿನ್ನ ಮನೆಯಲ್ಲಿ ?
ನಾನು: ನನ್ನದು ಅವಿಭಕ್ತ ಕುಟುಂಬ ಮನೆಯಲ್ಲಿ 30 ಜನ ಇದ್ದಿವಿ.
ವೊಬೈಲ: ಹೋ ನಾನೆಂಗೆ ಇರೋದು ?
ನಾನು: ನಿನೆಂಗೆ ಇರೋದಾ ? ಅರ್ಥವಾಗಲ್ಲಿಲ್ಲಾ ?
ವೊಬೈಲ: ಆಗೂದು ಬೇಡ. ನಿನಗೆ ಜನರಲ್ ನಾಲೇಡ್ಜ್ ಕಮ್ಮಿ.
ನಾನು: ನಿನೇ ಮೂದಲು ಹೇಳಿದ್ದು, ನನಗೆ ಜನರಲ್ ನಾಲೇಡ್ಜ್ ಕಮ್ಮಿ ಎಂದು.
ವೊಬೈಲ: ನೀನು ಎಲ್ಲವನ್ನು ನಾರ್ಮಲ್ ಆಗಿ ತಿಂಕ್ ಮಾಡುತ್ತಿಯ.
ನಾನು: ಬೇರೆ ತರ ಹೇಗೆ ಥಿನ್ಕ್ ಮಾಡಬೇಕು ?
ವೊಬೈಲ: ಅಯೋ. . . ಬಿಡೊ ಮಹರಾಯ.
ನಾನು: ಬಿಡಲು ನಾನೆನು ನಿನ್ನನ್ನು ಹಿಡಿದುಕೊಂಡಿಲ್ಲಾ, ನೀನೆ ಬೆಡ್ ಅನ್ನು ಬಿಡಬೇಕು.
ವೊಬೈಲ: ಹ. . ಹ. . ಆಯಿತು. ಸಂತು.
ನಾನು: ಸಂತು. . . , ಹೇ ನನ್ನ ಪೆಟ್ ಹೆಸರು, ಕೋಲ್, ಅಯ್ ಲೈಕ್ ಇಟ್.
ವೊಬೈಲ: ಹೇ ಸ್ವಲ್ಪ ಸಿರಿಯಸಆಗಿ ಮಾತಾಡೊಣ ?
ನಾನು: ಇಷ್ಟರವರೆಗು ನಾನು ಏನು ಕಾಮಿಡಿ ಮಾಡಿದಿನಾ ?
ವೊಬೈಲ: ಹೇ ನಾಟಕ ಮಾಡಬೇಡ, ಹೇಳಿದನ್ನು ಕೇಳು.
ನಾನು: ಆಯಿತು ಮೇಡಮ್, ಹೇಳಿ.
ವೊಬೈಲ: I
ನಾನು: You ?
ವೊಬೈಲ: Love
ನಾನು: You Love ?
ವೊಬೈಲ: Happy
ನಾನು: You love Happy ?
ನಾನು: ಹೇ ಶುಭಾಶಯ, ಯಾರವನು ? ನಿನ್ನ NRI Boy Friend ?, ಹೌದು ಇ ವಿಷಯನ ನನ್ನ ಹತ್ತಿರ ಯಾಕೆ ಹೆಳುತ್ತಿದ್ದಿಯಾ ?
ವೊಬೈಲ: ಅಯ್ಯೊ ಹುಚ್ಚಾ ನೀನೆ. Happy my sweet pet name to you. Happy (ಸಂತೋಷ ).
ನಾನು: ಹಾ ಹಾ . . . ಗುಡ್ ಜೋಕ್.
ವೊಬೈಲ: ಯಾಕೆ ನಗು ?
ನಾನು: ಅಲ್ಲಾ ನೀನು ನನ್ನ ಮುಖಾನೆ ನೋಡಿಲ್ಲಾ, ಅದೆಗೆ ಪ್ರೀತಿ ?
ವೊಬೈಲ: ಪ್ರೀತಿ ಕುರುಡು. . . ಅದಕ್ಕೆ ಮುಖ ಬೇಕಿಲ್ಲಾ . . . ಒಪ್ಪಿಗೆನಾ ?
ನಾನು: ಅಯ್ಯೊ ನಿನಗೆ ಕುರುಡಿರಬಹುದು, ನನಗಿಲ್ಲಾ, ನಿನ್ನ ಮುಖ ನೋಡದ ಹಾಗೆ ಎನೋ ಹೇಳಲು ಸಾದ್ಯವಿಲ್ಲಾ.
ವೊಬೈಲ: ಹೇ ನಿನ್ನನು ನಾನು ನೋಡಿದ್ದಿನಿ.
ನಾನು: ಯಾವಾಗ ಎಲ್ಲಿ ? ನಮ್ಮ ಬೇಟಿ ಆಗಿದ್ದು, ಇದೆ ವೋದಲು ಅದರಲ್ಲು ಮುಖದರುಶನವಿಲ್ಲಾ
ವೊಬೈಲ: ಹೇ ನೀನು ನನ್ನನ್ನು ನೋಡಿದ್ದಿಯಾ
ನಾನು: ನಾನು ನಿನ್ನನ್ನು ನೋಡಿದ್ದಿನಾ ? ಹಾ ಹೌದು ಬರಿ ಚಾದರ ಕಾಣಿಸಿತು. ಆ ಚಾದರದಲ್ಲಿ ನಿನ್ನ ಮುಖ ಕಾಣಲ್ಲಿಲ್ಲಾ.
ವೊಬೈಲ: ಹೇ ನೀನು ನನ್ನನ್ನ ತುಂಬಾ ಹತ್ತಿರದಿಂದ ನೋಡಿದ್ದಿಯಾ.
ನಾನು: ಹೇ ಎಲ್ಲಿ ? ನೀನು ನನಗೆ ತುಂಬಾ ಟೆಂಷನ್ ಕೋಡುತ್ತಾ ಇದ್ದಿಯಾ.
ವೊಬೈಲ: ಇದೆ ರೈಲಿನಲ್ಲಿ. ಎದುರು ಬದುರು ನಾವು ಕೂತ್ತಿದ್ವಿ.
ನಾನು: ಈ ರೈಲಿನಲ್ಲಿ ನಾನು ತುಂಬಾ ಸಲ ಹೋಗಿದ್ದೆನೆ, ಆದರೆ ನಿನಗೆ ನಾನು ಯಾವಾಗ ನೋಡಿದ್ದೆನೆ?
ವೊಬೈಲ: ಇವತ್ತು.
ನಾನು: ಇವತ್ತಾ !!! ಹೇ ಯಾರು ನೀನು, ನಿನ್ನ ಹೆಸರು ?
ವೊಬೈಲ: ಹೇ ಕೇಳು, ನಾನು ಹೇಳಿದ ಮೇಲೆ , ನನ್ನನ್ನು ಪ್ರೀತಿಸುವುದಿಲ್ಲಾ ಎನ್ನಬಾರದು.
ನಾನು: ಮಾದಲು ಹೇಳು.
ವೊಬೈಲ: ನೀನು ಇವತ್ತು ಒಂದು ಮದುವೆಯಾದ ನವ ದಂಪತಿಯನ್ನು ನೋಡಿದೆಯಲ್ಲವಾ ?
ನಾನು: ಹೌದು
ವೊಬೈಲ: ರಮನಾಥನ ಹೆಂಡತಿ ನೋಡಲು ಹೇಗಿದ್ದಾಳೆ ?
ನಾನು: ಹೇ ನಿನಗೆ ರಮನಾಥನ ಹೆಸರು ಹೇಗೆ ಗೂತ್ತು ?
ವೊಬೈಲ: ಏಕೆಂದರೆ ಅವರು ನನ್ನ ಭಾವ.
ಆ ಮೆಸೆಜ್ ಓದಿ, ನನಗೆ ಒಂದು ಸla ಶಾಕ್ ಆಯಿತು. ನನ್ನ ಮನಸ್ಸಿನಲ್ಲಿ ಆ ಕೃಷ್ಣ ಸುಂದರಿಯ ನೆನಪು ಬಂದಿತು ಹಾಗೆ ಆಶ್ಚರ್ಯವಾಯಿತು.
ನಾನು: ಹಾ ಅಂದರೆ ನೀನು ?
ವೊಬೈಲ: ನಿನ್ನ ಮಸಸ್ಸಿಗೆ ಈಗಾಗಲೆ ತಿಳಿದಿರಬಹುದು, ಯಾರೆಂದು ?
ನಾನು: ನಾನು ಇಷ್ಟುತನಕ ಛಾಟ್ ಮಾಡಿದ್ದು ನಿನ್ನ ಹತ್ತಿರನಾ ? ನಿನ್ನ ಹೆಸರು ಶ್ರುತಿನಾ?
ವೊಬೈಲ: ಅಲ್ಲ ಸಂಗೀತಾ.
ನಾನು: ಹೋ ಕಾಶ್, ನೀನು ಇದನ್ನು ಮಾದಲೆ ಯಾಕೆ ಹೇಳಲ್ಲಿಲ್ಲಾ ?
ವೊಬೈಲ: ನಿನಗೆ ಕಾಡಿಸಬೇಕೆಂದು.
ನನಗೆ ತುಂಬಾ ಆಶರ್ಯವಾಯಿತು. ಒಂದು ಕಡೆ ಖುಷಿ, ಒಂದು ಕಡೆ ಇದು ಕನಸಾ ಎಂದು ?, ನನ್ನ ಕೈಯನ್ನು ಒಂದು ಸಲ ಜಿಕುಟುಕೂಂಡು ನೋಡಿದೆ. ಆ ಮಾತನ್ನು ಕೇಳಿ ನನಗೆ ಏನು ಮಾಡಬೇಕೆಂದು ತಿಳಿಯಲ್ಲಿಲ್ಲಾ. ನನಗೆ ತುಂಬಾ ಪ್ರಶ್ನೆಗಳು ಕಾಡಿದವು, ತಕ್ಷಣ ಅವಳ ಹತ್ತಿರ ಮಾತನಾಡಬೇಕೆನಿಸಿತು.
ನಾನು: ಹೇ ನಾನು ನಿನ್ನ ಹತ್ತಿರ ಇಗಲೆ ಮಾತಾಡಬೇಕು.
ವೊಬೈಲ: ಇಲ್ಲೆನಾ ?
ನಾನು: ಹ್ಮ್, ಇಗ ರಾತ್ರಿ 2 ಗಂಟೆ, ಹೇ ಈ ರೈಲಿನ ಬಾಗಿಲ ಹತ್ತಿರ ಬಾ ಅಲ್ಲಿ ಯಾರು ಇರುವುದ್ದಿಲ್ಲಾ.
ವೊಬೈಲ: ನೀನು ನನ್ನನ್ನ , ಪ್ರೀತಿಸುತ್ತಿಯ ತಾನೆ ?
ನಾನು: ಅದನ್ನು ನಾನು ಅಲ್ಲೆ ಹೇಳುತ್ತೆನೆ.
ವೊಬೈಲ: ಆಯಿತು ಬರುತ್ತೆನೆ.
ನಾನು: ನಾನು ಹೋದ ಮೇಲೆ ನೀನು ಬಾ.
ವೊಬೈಲ: ಆಯಿತು.
ನಾನು ಎದ್ದು ಆ ರೈಲಿನ ಬಾಗಿಲ ಹತ್ತಿರ ಬಂದು ನಿಂತೆ. ಒಂದು ಮಂದವಾದ ಬೆಳಕಿತ್ತು ಅಲ್ಲಿ ಯಾರು ಇರಲ್ಲಿಲ್ಲ. ನನಗೆ ಸ್ವಲ್ಪ ಹೆದರಿಕೆಯು ಆಯಿತು. ಅಲ್ಲೆ ನಿಂತು ಹಾಗೆ ಒಂದು ಕನಸು ಕಂಡೆ. (ಸಂತೋಷ ಹಾಹ ಹಾಹ. . . ಸಂಗೀತಾ ಒಹೋ ಒಹೂ. . . ಎಂದು ಎಡಕಲು ಗುಡ್ಡದ ಮೇಲೆ ಚಿತ್ರದ ಹಾಡಿನಲ್ಲಿ ನಮ್ಮಿಬ್ಬರನ್ನು ನೆನೆಸಿಕೋಂಡೆ) ಅಲ್ಲಿ ನಿಂತ 15 ನಿಮಿಶದ ನಂತರ ಅವಳು ಬಂದಳು, ಬಂದವಳೆ ನನ್ನನ್ನು ಬಿಗಿದಾಗಿ ಅಪ್ಪಿಕೋಂಡಳು, ನಾನು ಆ ಅಪ್ಪುಗೆಯ ಷಾಕ್ ನಿಂದ ಒಂದು ಸಲ ಎದ್ದುಬ್ಬಿಟೆ. ನೋಡಿದರೆ ನನ್ನ ಕಂಪಾರ್ಟನಲ್ಲಿ ಯಾರು ಇರಲ್ಲಿಲ್ಲಾ. ಚಾದರ ಕೋಡ ಇರಲ್ಲಿಲ್ಲಾ, ಎದರುಗಡೆ ಆ ಹುಡುಗಿಯು ಇರಲ್ಲಿಲ್ಲಾ. ಅಂದರೆ ನಾನು ಅಲ್ಲಿಯ ತನಕ ಕಂಡದ್ದು ಕನಸಾ ?. ನನಗೆ ನೆನಪಿರುವ ಹಾಗೆ ನಾನು ಮಲಗುವಾಗ ಎಕ್ಸ್ ಗೆ ನನ್ನ ಪೋನ್ ನಂಬರ್ ಕೊಟ್ಟೆ, ನಂತರ, ಹೋ ಎಲ್ಲಾ ಕನಸು.
ರೈಲಿನ ಕಂಪಾರ್ಟನಲ್ಲಿ ಯಾರು ಇರಲ್ಲಿಲ್ಲಾ ರೈಲು ಇನ್ನು ಹೋಗುತ್ತಾನೆ ಇತ್ತು ಆಗ ಸಮಯ ನೋಡಿದರೆ ಬೆಳಗ್ಗೆ 7:10 ಗಂಟೆ. ಹೋ ನನ್ನ ಊರು ಬಂದಿರಬಹುದು ಎಂದು ಬೆಡ್ ನಿಂದ ಇಳಿದೆ. ಯಾವ ಊರು ಎಂದು ಕೆಳಲು ಯಾರು ಇರಲ್ಲಿಲ್ಲಾ, ಆಗ ಒಂದು ರೈಲ್ವೆ ಸ್ಟೆಶನ್ ಬಂದಿತು. ನೋಡಲು ದಾವಣಗೆರೆಯ ಸ್ಟೆಶನ್ ಹಾಗೆ ಕಾಣುತ್ತಿತ್ತು. ರೈಲಿನಿಂದ ಇಳಿದೆ. ಆದರೆ ದಾವಣಗೆರೆ ಸ್ಟೆಶನ್ ತುಂಬಾ ಬದಲಾಗಿತ್ತು. ಆಗ ಊರಿನ ಬೋರ್ಡ್ ನೋಡಿದೆ., ಶಾಕ್!!! ಅದು ಹರಿಹರ ಅಂದರೆ ದಾವಣಗೆರೆಯಿಂದ ಆಗಲೆ 15 ಕಿಲೋಮಿಟರ್ ದೂರದಲ್ಲಿರುವ ಊರಿಗೆ ಬಂದಿದ್ದೆ.
ನನ್ನ ಜೀವನದಲ್ಲಿ ಯಾವತ್ತು ಹೀಗೆ ಮುಂದಿನ ಸ್ಟೆಶನ್ ಗೆ ಹೋಗಿರಲ್ಲಿಲ್ಲಾ. ಆ ದಿನ ನನಗೆ ತುಂಬಾ ಬೇಜಾರಾಯಿತು. ಆದರೆ ಹೀಗೆ ಆಗಲು ಕಾರಣ ಆ ಎಕ್ಸ್, ಆತ ಹೇಳಿದ ಹಾಗೆ, ನಾನು ಹುಬ್ಬಳ್ಳಿಗೆ ಹೋಗುವ ಬದಲು ಅಟ್ಲಿಸ್ಠ ಹರಿಹರದಲ್ಲಿ ಇಳಿದೆ. ಇದು ಆತನ ಶಾಪವೆ. ಆಮೇಲೆ ಹರಿಹರದಿಂದ ದಾವಣಗೆರೆಗೆ ಬರಲು ತುಂಬಾ ಬಸ್ಸುಗಳಿದ್ದವು, ನಾನು ಹೇಳಿದ ಹಾಗೆ ನನಗೆ ರೈಲಿನಲ್ಲಿ ಹೋಗುವುದೆಂದರೆ ತುಂಬಾ ಇಷ್ಟ ಆದ್ದರಿಂದ 2 ರೂ ನ ಟಿಕೆಟ್ ತೆಗೆದುಕೋಂಡು ಹರಿಹರ – ಚಿಕ್ಕಜಾಜುರು ರೈಲಿನಲ್ಲಿ ದಾವಣಗೆರೆಗೆ ತಲುಪಿದೆ.
ದಾವಣಗೆರೆಯ ರೈಲು ನಿಲ್ಡಾಣದಿಂದ ನನ್ನ ಮನೆಗೆ ಹೋಗುತ್ತಿರುವಾಗ, ನಾನು ನನ್ನ ಕನಸಿನ ಬಗ್ಗೆ ಮತ್ತೊಮ್ಮೆ ಮೆಲುಕುಹಾಕಿದೆ, ನಿಜವಾಗಿದ್ದರೆ ಚೆನ್ನಾಗಿತ್ತೆನೋ ಅನಿಸಿತು. ಆ ಹುಡುಗಿ ಹೇಳಿದ್ದು ನಿಜ, ಪ್ರೀತಿ ಕುರುಡು. ಕನಸಿನಲ್ಲೆ ಇಷ್ಟು ಮಗ್ನವಾಗಿದ್ದ ನನಗೆ, ಇನ್ನು ನಿಜವಾಗೆನಾದರು ಆಗಿದ್ದರೆ, ಅನಿಸುವಶ್ಟರಲ್ಲಿ ಎದುರಿಗೆ ಕಂಡಿದ್ದೆ ಹಿಜ್ಡ !!! ಐ
ನನ್ನ ಹಾಗೂ ರೈಲಿನ ನಡುವೆ ಅದೆಷ್ಟೋ ರಾತ್ರಿಗಳು ಬಂದರು ಈ ನನ್ನ “ಒಂದು ರಾತ್ರಿ”ಯು ನನ್ನ ಮರೆಯಲಾಗದ ದಿನ.
ಇಷ್ಟು ತನಕ ಸಹಿಸಿಕೊಂಡು ಓದಿದ ನಿಮ್ಮ ತಾಳ್ಮೆಗೆ ನನ್ನ ವಂದನೆಗಳು.
ಶುಭಂ
Comments
ಉ: ಒಂದು ರಾತ್ರಿ